ಚಿಕ್ಕಮಗಳೂರಿನ ಖಾಂಡ್ಯನಲ್ಲಿರುವ ಮಾರ್ಕಂಡೇಶ್ವರ ದೇವಸ್ಥಾನ ಸಂಗಮ ಕ್ಷೇತ್ರ ಅಂತ ಕರೆಸಿಕೊಳ್ಳಲು ವಿಶಿಷ್ಟ ಕಾರಣವಿದೆ

ಚಿಕ್ಕಮಗಳೂರಿನ ಖಾಂಡ್ಯನಲ್ಲಿರುವ ಮಾರ್ಕಂಡೇಶ್ವರ ದೇವಸ್ಥಾನ ಸಂಗಮ ಕ್ಷೇತ್ರ ಅಂತ ಕರೆಸಿಕೊಳ್ಳಲು ವಿಶಿಷ್ಟ ಕಾರಣವಿದೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 30, 2021 | 9:12 PM

ಮಾರ್ಕಂಡೇಯ ಮೃತ್ಯುವನ್ನು ಜಯಿಸಿದ್ದರಿಂದ ಅವನಿಗೆ ಮೃತ್ಯುಂಜಯನೆಂಬ ಹೆಸರು ಬರುತ್ತದೆ. ಅಲ್ಲಿಂದ ಈ ದೇವಸ್ಥಾನವನ್ನು ಸಂಗಮ ಸ್ಥಳ ಅಂತ ಕರೆಯುತ್ತಾರೆ.

ಸ್ಥಳವೊಂದರಲ್ಲಿ ಎರಡು ಅಥವಾ ಮೂರು ನದಿಗಳ ನೀರು ಕೂಡಿ ಜೊತೆಯಾದರೆ ಅಂಥ ಸ್ಥಳವನ್ನು ಸಂಗಮ ನಾವು ಕರೆಯುತ್ತೇವೆ. ಆದರೆ, ಚಿಕ್ಕಮಗಳೂರು ತಾಲ್ಲೂಕಿನ ಖಾಂಡ್ಯನಲ್ಲಿರುವ ಮಾರ್ಕಂಡೇಶ್ವರ ದೇವಸ್ಥಾನವಿರುವ ಪ್ರದೇಶ ಬೇರೆ ಕಾರಣಕ್ಕೆ ಸಂಗಮ ಎನಿಸಿಕೊಳ್ಳುತ್ತದೆ. ಈ ವಿಡಿಯೋನಲ್ಲಿ ಕಾಣುತ್ತಿರೋದೇ ಮಾರ್ಕಂಡೇಯ ದೇಗುಲ. ಭದ್ರೆಯ ತಟದ ಪ್ರಶಾಂತವಾದ ಸ್ಥಳದಲ್ಲಿ ಈ ಮಂದಿರ ಸ್ಥಾಪಿತಗೊಂಡಿದೆ. ಅಂದಹಾಗೆ, ದೇವಸ್ಥಾನಕ್ಕೆ ಒಂದು ಸಾವಿರ ವರ್ಷಗಳ ಇತಿಹಾಸವಿದ್ದು ಇದನ್ನು ಅಗಸ್ತ್ಯ ಮುನಿಗಳು ಸ್ಥಾಪಿಸಿದರೆಂದು ಹೇಳಲಾಗುತ್ತದೆ.

ಸಂಗಮ ಅಂತ ಈ ದೇವಸ್ಥಾನ ಕರೆಸಿಕೊಳ್ಳುವ ಹಿಂದೆ ಭಕ್ತ ಮಾರ್ಕಂಡೇಯನ ಕತೆಯಿದೆ. ಮಾರ್ಕಂಡೇಯ ಶಿವನ ಪರಮ ಭಕ್ತನಾಗಿರುತ್ತಾನೆ, ಅದರೆ ಆಯಷ್ಯವನ್ನು ಪಡೆದು ಬಂದಿರುವುದಿಲ್ಲ. 16 ವರ್ಷದ ಬಾಲಕ ಮಾರ್ಕಂಡೇಯ ಭದ್ರಾ ನದಿಯ ದಡದಲ್ಲಿ ತಪಸ್ಸಿಗೆ ಕೂತು ಮೃತ್ಯುವನ್ನು ತನ್ನಿಂದ ದೂರ ಮಾಡುವಂತೆ ಶಿವನಿಗೆ ಪ್ರಾರ್ಥಿಸಲಾರಂಭಿಸುತ್ತಾನೆ. ಆದರೆ, ಅಷ್ಟರಲ್ಲಿ, ಯಮನ ದೂತರು ಅವನನ್ನು ತೆಗೆದುಕೊಂಡು ಹೋಗಲು ಅಲ್ಲಿಗೆ ಬರುತ್ತಾರೆ. ಅವರನ್ನು ನೋಡಿದ ಮಾರ್ಕಂಡೇಯ ತಪ್ಪಿಸಿಕೊಳ್ಳಲೆಂದು ನುಗ್ಗಿ ಅಲ್ಲಿದ್ದ ಲಿಂಗವನ್ನು ಗಟ್ಟಿಯಾಗಿ ಅಪ್ಪಿಕೊಳ್ಳುತ್ತಾನೆ. ಆಗ ಶಿವನು ಲಿಂಗದೊಳಗೆ ಐಕ್ಯನಾಗುವಂಥ ವರ ಮಾರ್ಕಂಡೇಯನಿಗೆ ನೀಡುತ್ತಾನೆ.

ಹಾಗೆ, ಮಾರ್ಕಂಡೇಯ ಮೃತ್ಯುವನ್ನು ಜಯಿಸಿದ್ದರಿಂದ ಅವನಿಗೆ ಮೃತ್ಯುಂಜಯನೆಂಬ ಹೆಸರು ಬರುತ್ತದೆ. ಅಲ್ಲಿಂದ ಈ ದೇವಸ್ಥಾನವನ್ನು ಸಂಗಮ ಸ್ಥಳ ಅಂತ ಕರೆಯುತ್ತಾರೆ. ತ್ರಿಂಬಕ ಎಂಬ ಇನ್ನೊಂದು ಹೆಸರು ಸಹ ಮಾರ್ಕಂಡೇಯನಿಗಿದೆ.

ಈ ದೇವಾಸ್ಥಾನಕ್ಕೆ ನವವಿವಾಹಿತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ದಾಂಪತ್ಯ ಸುಖಮಯವಾಗಿ ಸಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಹಾಗೆಯೇ, ಅಗಲಿದ ಪ್ರೀತಿಪಾತ್ರರ ಆತ್ಮಕ್ಕೆ ಶಾಂತಿ ಕೋರುವ ಸಲುವಾಗಿಯೂ ಇಲ್ಲಿ ಪೂಜೆ ಸಲ್ಲಿಸಲಾಗುತ್ತದೆ.

ಶಿವರಾತ್ರಿಯ ಸಮಯ ಈ ದೇವಾಸ್ಥಾನದಲ್ಲಿ ಉತ್ಸವ ನಡೆಯುತ್ತದಲ್ಲದೆ ಕಾರ್ತೀಕ ಮಾಸದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಫಾಲ್ಗುಣ ಮಾಸದಲ್ಲಿ ನಡೆಯುವ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ.

ಇದನ್ನೂ ಓದಿ:  Viral Video: ಬಾಲಕಿಯ ತೊಡೆಯ ಮೇಲೆ ನಿದ್ರಿಸುತ್ತಿರುವ 20 ಅಡಿ ಉದ್ದದ ಸರ್ಪ; ವಿಡಿಯೋ ನೋಡಿ ದಂಗಾದ ನೆಟ್ಟಿಗರು