ಸ್ಪೇನ್ನಲ್ಲಿ ಪರ್ವತದಿಂದ ಕೆಳಗೆ ಹರಿಯುತ್ತಿರುವ ಲಾವಾರಸ ಅಟ್ಲಾಂಟಿಕ್ ಸಾಗರ ಸೇರುವ ಮೊದಲು ಲಾ ಪಾಮಾ ದ್ವೀಪವನ್ನು ನಾಶಮಾಡಿದೆ
ಮೂಲಗಳ ಪ್ರಕಾರ ಹರಿದು ಸಾಗರವನ್ನು ಸೇರುವ ಲಾವಾ ಸ್ಫೋಟಗಳನ್ನು ಸೃಷ್ಟಸುವ ಆತಂಕವಿದ್ದು ಮನೆಗಳಿಂದ ಆಚೆ ಬಂದಿರುವವರು ಕೂಡಲೇ ಸುರಕ್ಷಿತ ಸ್ಥಳಕ್ಕೆ ತೆರಳಿ ಆಶ್ರಯ ಪಡೆಯುವಂತೆ ಕ್ಯಾನರಿ ದ್ವೀಪಗಳ ತುರ್ತು ಸೇವೆ ಸಂಸ್ಥೆಯು ಎಚ್ಚರಿಸಿದೆ.
ಸ್ಪೇನ್ ದೇಶದ ದ್ವೀಪ ಲಾ ಪಾಮಾ ದ್ವೀಪದಲ್ಲಿದ್ದ ಬೆಳೆಗಳನ್ನ ಮತ್ತು ಕಟ್ಟಡಗಳನ್ನು ಧ್ವಂಸಗೊಳಿಸಿದ ಜ್ವಾಲಾಮುಖಿಯ ಧಗಧಗಿಸುವ ಕೆಂಪುವರ್ಣದ ಲಾವಾರಸವು ಪರ್ವತದಿಂದ ಕೆಳಗೆ ಹರಿಯಲಾರಂಭಿಸಿದ 9 ದಿನಗಳ ಬಳಿಕ ಅಟ್ಲಾಂಟಿಕ ಮಹಾಸಾಗರವನ್ನು ಸೇರಿದೆ. ಲಾವಾರಸವು ಸಾಗರದಲ್ಲಿನ ನೀರಿನ ಸಂಪರ್ಕಕ್ಕೆ ಬಂದ ನಂತರ ದಟ್ಟವಾದ ಬೂದು ಬಣ್ಣದ ಮೋಡಗಳು ಸೃಷ್ಟಿಯಾಗಿ ಪ್ಲಾಯಾ ನ್ಯುವಾ ಪ್ರದೇಶದ ಮೇಲೆ ದಟ್ಟೈಸಿರುವ ಚಿತ್ರಗಳು ಮಾಧ್ಯಮಗಳಿಗೆ ಲಭ್ಯವಾಗುತ್ತಿವೆ. ಲಾವಾರಸವು ಸಾಗರದ ಕಡಿಬಂಡೆಯಲ್ಲಿ ಶೇಖರಗೊಳ್ಳುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಮೂಲಗಳ ಪ್ರಕಾರ ಹರಿದು ಸಾಗರವನ್ನು ಸೇರುವ ಲಾವಾ ಸ್ಫೋಟಗಳನ್ನು ಸೃಷ್ಟಸುವ ಆತಂಕವಿದ್ದು ಮನೆಗಳಿಂದ ಆಚೆ ಬಂದಿರುವವರು ಕೂಡಲೇ ಸುರಕ್ಷಿತ ಸ್ಥಳಕ್ಕೆ ತೆರಳಿ ಆಶ್ರಯ ಪಡೆಯುವಂತೆ ಕ್ಯಾನರಿ ದ್ವೀಪಗಳ ತುರ್ತು ಸೇವೆ ಸಂಸ್ಥೆಯು ಎಚ್ಚರಿಸಿದೆ.
ಲಾವಾ ಸಾಗರವನ್ನು ತಲುಪಿದಾಗ ಕಟ್ಟುನಿಟ್ಟಾಗಿ ಲಾಕ್ಡೌನ್ ಘೋಷಿಸಿಕೊಳ್ಳಬೇಕು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸೆಪ್ಟಂಬರ್ 19 ರಿಂದ ಸಮುದ್ರದೆಡೆ ಹರಿಯುತ್ತಿರುವ ಲಾವಾರಸವು, ಲಾ ಪಾಮಾ ದ್ವೀಪದಲ್ಲಿ 600 ಮನೆ ಮತ್ತು ಬಾಳೆ ತೋಟಗಳನ್ನು ಸುಟ್ಟು ಬೂದಿ ಮಾಡಿದೆ. ಕ್ಯಾನರಿ ದ್ವೀಪಸಮೂಹದಲ್ಲಿ ಲಾ ಪಾಮಾ ಒಂದು ದ್ವೀಪವಾಗಿದೆ. ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಮತ್ತು ಕರಾವಳಿ ಭಾಗದ ಜನವಸತಿ ಪ್ರದೇಶಗಳಲ್ಲಿ ಲಾಕ್ಡೌನ್ ಘೋಷಿಸಲಾಗಿದೆ.
ಇದನ್ನೂ ಓದಿ: ಮೇಕೆಯ ಬೆನ್ನೇರಿ ಕುಳಿತು ಹಣ್ಣುಗಳನ್ನು ಸವಿಯುತ್ತಿರುವ ಮರಿ ಮಂಗನ ವಿಡಿಯೋ ವೈರಲ್; 12 ಮಿಲಿಯನ್ ವೀಕ್ಷಣೆ ಪಡೆದ ದೃಶ್ಯವಿದು