ದಿವಾಳಿ ವಿಥ್ ಮಿ ಟ್ಯಾಗ್ ಲೈನ್​ನೊಂದಿಗೆ ಪೋನ್ ಮತ್ತು ಇಲೆಕ್ಟ್ರಾನಿಕ್ ವಸ್ತುಗಳನ್ನು ಭಾರಿ ಡಿಸ್ಕೌಂಟ್​ನಲ್ಲಿ ಮಾರಲು ಸಿದ್ಧವಾಗಿದೆ ಶಾಮಿ!

ದಿವಾಳಿ ವಿಥ್ ಮಿ ಟ್ಯಾಗ್ ಲೈನ್​ನೊಂದಿಗೆ ಪೋನ್ ಮತ್ತು ಇಲೆಕ್ಟ್ರಾನಿಕ್ ವಸ್ತುಗಳನ್ನು ಭಾರಿ ಡಿಸ್ಕೌಂಟ್​ನಲ್ಲಿ ಮಾರಲು ಸಿದ್ಧವಾಗಿದೆ ಶಾಮಿ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 30, 2021 | 8:05 PM

ದಿವಾಳಿ ವಿಥ್ ಮಿ (Diwali with MI) ಎಂಬ ಟ್ಯಾಗ್​​ಲೈನ್​​ನೊಂದಿಗೆ ಶಾಮಿ ತನ್ನ ಉತ್ಪಾದನೆಗಳನ್ನು ಮಾರುತ್ತಿದೆ. ಇದರಲ್ಲಿ ಫೋನ್, ಟಿವಿಗಳ ಜೊತೆಗೆ ಬೇರೆ ಎಲೆಕ್ಟ್ರಾನಿಕ್ ಉಪಕರಣಗಳು ಸೇರಿವೆ.

ಹಬ್ಬಗಳ ಸೀಸನ್ ನಾವು ಸಂಭ್ರಮಿಸಲು ಕಾರಣಗಳು ಅನೇಕ. ಬಗೆಬಗೆಯ ಸಿಹಿತಿಂಡಿಗಳು, ಹಬ್ಬದೂಟ, ಹೊಸ ಬಟ್ಟೆ, ಶಾಲಾ-ಕಾಲೇಜು ಮತ್ತು ಅಫೀಸುಗಳಿಗೆ ರಜೆ ಹಾಗೂ ಗ್ಯಾಜೆಟ್ ಅಥವಾ ಬೇರೆ ಎಲೆಕ್ಟ್ರಾನಿಕ್ ಮತ್ತು ಗೃಹೋಪಯೋಗಿ ವಸ್ತುಗಳ ಮೇಲೆ ಸಿಗುವ ಭರ್ಜರಿ ಡಿಸ್ಕೌಂಟ್​ಗಳು. ಅನ್​ಲೈನ್ ಶಾಪಿಂಗ್ ಪ್ರಿಯರಿಗಂತೂ ಹಬ್ಬವೋ ಹಬ್ಬ! ದೈತ್ಯ ಮೊಬೈಲ್ ಕಂಪನಿಗಳಲ್ಲಿ ಒಂದಾಗಿರುವ ಶಾಮಿ ತನ್ನ ಉತ್ಪಾದನೆಗಳನ್ನು ಭರ್ಜರಿ ಡಿಸ್ಕೌಂಟ್ಗಳೊಂದಿಗೆ ಮಾರಲು ಅಣಿಯಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ದಸರಾ ಹಬ್ಬ ಮುಗಿಯುವ ಮೊದಲೇ ಅದು ದೀಪಾವಳಿ ಆಫರ್​ಗಳನ್ನು ನೀಡುತ್ತಿದೆ.

ದಿವಾಳಿ ವಿಥ್ ಮಿ (Diwali with MI) ಎಂಬ ಟ್ಯಾಗ್​​ಲೈನ್​​ನೊಂದಿಗೆ ಅದು ತನ್ನ ಉತ್ಪಾದನೆಗಳನ್ನು ಮಾರುತ್ತಿದೆ. ಇದರಲ್ಲಿ ಫೋನ್, ಟಿವಿಗಳ ಜೊತೆಗೆ ಬೇರೆ ಎಲೆಕ್ಟ್ರಾನಿಕ್ ಉಪಕರಣಗಳು ಸೇರಿವೆ. ರೂ. 5,000 ದಿಂದ ರೂ. 75,000 ವರೆಗಿನ ಪ್ರಾಡಕ್ಟ್ಗಳ ಮೇಲೆ ಶಾಮಿ ಆಕರ್ಷಕ ಆಫರ್ಗಳನ್ನು ನೀಡುತ್ತಿದೆ. ಮಾರ್ಜಿನ್ ಸೇಲ್, ಡಿಸ್ಕೌಂಟ್ ಸೆಲ್ ಹೀಗೆ ವಿವಿಧ ಆಫರ್ಗಳು ಗ್ರಾಹಕರಿಗೆ ಸಿಗಲಿವೆ.

ಜನರಲ್ಲಿ ಶಾಮಿ ಫೋನ್​ಗಳ ಬಗ್ಗೆ ಕ್ರೇಜ್ ಇದೆ. ಮತ್ತೊಂದು ಸಂಗತಿಯೆಂದರೆ, ಕೆಲವರಿಗೆ ಫೋನ್ ಬದಲಾಯಿಸುವ ಅಭ್ಯಾಸವಿರುತ್ತದೆ. ಮಾರ್ಕೆಟ್ ನಲ್ಲಿ ಹೊಸ ಫೋನ್, ಹೊಸ ಮಾಡೆಲ್ ಕಂಡಾಕ್ಷಣ ಅದನ್ನು ಖರೀದಿಸಲು ಮುಂದಾಗುತ್ತಾರೆ, ಹಬ್ಬಗಳ ಸೀಸನಲ್ಲಿ ಸಿಗುವ ಆಫರ್ಗಳನ್ನು ಅವರು ಸದುಪಯೋಗ ಮಾಡಿಕೊಳ್ಳುತ್ತಾರೆ.

ಯಾರೇನೇ ಮಾಡಲಿ ಮರಾಯ್ರೇ, ನಿಮಗೆ ಫೋನ್ ಬೇಕಿದ್ದರೆ ಹೇಳಿ, ಶಾಮಿ ಭಾರಿ ಡಿಸ್ಕೌಂಟ್ಗಳೊಂದಿಗೆ ನಿಮ್ಮಲ್ಲಿಗೆ ಬಂದಿದೆ.

ಇದನ್ನೂ ಓದಿ:  ಕಿಟಕಿಯಿಂದ ಸೋಫಾ ಕೆಳಗಿಳಿಸಲು ಮುಂದಾದವರನ್ನು ನೋಡಿ ‘ಎಂಥಾ ಐಡಿಯಾ ಗುರೂ’ ಎಂದ ನೆಟ್ಟಿಗರು! ತಮಾಷೆಯ ವಿಡಿಯೋ ವೈರಲ್