ದರ್ಶನ್​ ಜತೆ ಉಂಟಾದ ಮನಸ್ತಾಪದ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ

| Updated By: ಮದನ್​ ಕುಮಾರ್​

Updated on: Oct 09, 2024 | 9:51 PM

ದರ್ಶನ್​ ಅವರ ವಿಚಾರದಲ್ಲಿ ಧ್ರುವ ಸರ್ಜಾಗೆ ಒಂದು ಮನಸ್ತಾಪ ಇದೆ. ಆ ಬಗ್ಗೆ ಟಿವಿ9 ಸಂದರ್ಶನದಲ್ಲಿ ಧ್ರುವ ಮಾತನಾಡಿದ್ದಾರೆ. ‘ಮಾರ್ಟಿನ್​’ ಸಿನಿಮಾ ಈ ವಾರ ಬಿಡುಗಡೆ ಆಗುತ್ತಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿ ತೆರೆಕಾಣುತ್ತಿದೆ. ಈ ಸಂದರ್ಭದಲ್ಲಿ ಕೆಲವು ಬೇರೆ ವಿಷಯಗಳ ಕುರಿತ ಪ್ರಶ್ನೆಗೂ ಅವರು ಉತ್ತರ ನೀಡಿದ್ದಾರೆ.

‘ಮನಸ್ತಾಪ ಏನು ಎಂಬುದನ್ನು ಬಹಿರಂಗ ಮಾಡುವುದಾಗಿದ್ದರೆ ಎಂದೋ ಮಾಡಿರುತ್ತಿದ್ದೆ. ಇದು ಸರಿ ಹೋಗಬಹುದು, ಹೋಗದೆಯೋ ಇರಬಹುದು. ಅದು ನಮಗೆ ಬಿಟ್ಟಿದ್ದು. ಆದರೆ ನಾನು ಏನನ್ನೂ ರಿವೀಲ್​ ಮಾಡಲ್ಲ. ರಿವೀಲ್​ ಮಾಡಿದರೆ ಬಿಟ್ಟುಕೊಟ್ಟಂತೆ ಆಗುತ್ತದೆ. ಆ ಕೆಟಗೆರಿಯವನು ನಾನಲ್ಲ. ಆದರೆ ಎಲ್ಲರೂ ನೋಡುತ್ತಾರೆ ಅಂತ ಆರ್ಟಿಫಿಶಿಯಲ್​ ಆಗಿಯೂ ನಾನು ಇರಲ್ಲ. ನಾನು ನಿಮ್ಮಂತೆಯೇ. ಎರಡರ ಮಧ್ಯೆ ಇರೋಕೆ ನನಗೆ ಬರಲ್ಲ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ. ‘ಮಾರ್ಟಿನ್​’ ಸಿನಿಮಾ ಅಕ್ಟೋಬರ್​ 11ರಂದು ಬಿಡುಗಡೆ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.