ಧ್ರುವ ಸರ್ಜಾ ಪಾಲಿಗೆ 2022 ಹೇಗಿರಲಿದೆ? ಹೊಸ ವರ್ಷದ ಪ್ಲ್ಯಾನ್ ತಿಳಿಸಿದ ಆ್ಯಕ್ಷನ್ ಪ್ರಿನ್ಸ್
‘ಹೊಸ ವರ್ಷಕ್ಕೆ ಪ್ಲ್ಯಾನ್ ಇದೆ. ಆದರೆ ಅದಕ್ಕೆ ರೆಸಲ್ಯೂಷನ್ ಎಂಬ ಬಾಲ ಬೇಡ. ಈಗ ಜವಾಬ್ದಾರಿ ಜಾಸ್ತಿ ಆಗಿದೆ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ನಟ ಧ್ರುವ ಸರ್ಜಾ ಅವರು ‘ಮಾರ್ಟಿನ್’ (Martin Movie) ಸಿನಿಮಾದ ಶೂಟಿಂಗ್ ಶೇ.50ರಷ್ಟು ಮುಗಿಸಿದ್ದಾರೆ. ಈ ನಡುವೆ ಅವರು ಅಭಿಮಾನಿಗಳನ್ನೂ ಭೇಟಿ ಆಗಿದ್ದಾರೆ. ಪತ್ನಿ ಪ್ರೇರಣಾ ಅವರ ಊರಿಗೆ ತೆರಳಿ ಕಾಲ ಕಳೆದಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಅವರು ಟಿವಿ9 ಜತೆ ಮಾತನಾಡಿದ್ದಾರೆ. ಹೊಸ ವರ್ಷವನ್ನು (New Year 2022) ಸ್ವಾಗತಿಸಲು ಎಲ್ಲರೂ ಸಜ್ಜಾಗಿದ್ದಾರೆ. ಅದೇ ರೀತಿ ಧ್ರುವ ಸರ್ಜಾ (Dhruva Sarja) ಕೂಡ 2022ರ ವರ್ಷವನ್ನು ಬರಮಾಡಿಕೊಳ್ಳುತ್ತಿದ್ದಾರೆ. ಮನೆಯಲ್ಲಿ ಕುಟುಂಬದ ಸದಸ್ಯರ ಜತೆಯಲ್ಲೇ ಅವರು ಈ ಕ್ಷಣವನ್ನು ಕಳೆಯಲಿದ್ದಾರೆ. ‘ಹೊಸ ವರ್ಷಕ್ಕೆ ಪ್ಲ್ಯಾನ್ ಇದೆ. ಆದರೆ ಅದಕ್ಕೆ ರೆಸಲ್ಯೂಷನ್ ಎಂಬ ಬಾಲ ಬೇಡ. ಈಗ ಜವಾಬ್ದಾರಿ ಜಾಸ್ತಿ ಆಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಬೇಕು. ಮಾರ್ಚ್ ತಿಂಗಳಲ್ಲಿ ಮಾರ್ಟಿನ್ ಚಿತ್ರದ ಕೆಲಸ ಪೂರ್ಣಗೊಳ್ಳುತ್ತೆ. ಅದಾದ ಬಳಿಕ ನಿರ್ದೇಶಕ ಪ್ರೇಮ್ ಜೊತೆಗಿನ ಸಿನಿಮಾ ಶುರು ಆಗಬೇಕು’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ಇದನ್ನೂ ಓದಿ:
‘ಧ್ರುವ ಸರ್ಜಾ ಅವರು ಆಂಜನೇಯನ ಮಗ’; ಹನುಮ ಭಕ್ತನ ಬಗ್ಗೆ ಮನಸಾರೆ ಮಾತಾಡಿದ ರಚಿತಾ ರಾಮ್
New Year 2022: ಹೊಸ ವರ್ಷಕ್ಕೆ ಹೊಸ ನಿರ್ಣಯ ತೆಗೆದುಕೊಳ್ಳಲು ಪ್ಲಾನ್ ಮಾಡಿದ್ದೀರಾ? ಇದನ್ನೊಮ್ಮೆ ಓದಿ