ಭಾರತ-ಆಸ್ಟ್ರಿಯಾ ಸ್ನೇಹವು ಪ್ರಗತಿಯ ಹೊಸ ಉತ್ತುಂಗಕ್ಕೇರಲಿ: ನರೇಂದ್ರ ಮೋದಿ
ಭಾರತ ಹಾಗೂ ಆಸ್ಟ್ರಿಯಾ ಸ್ನೇಹವು ಹೊಸ ಉತ್ತುಂಗಕ್ಕೇರಲಿ ಎಂದು ಪ್ರಧಾನಿ ಮೋದಿ ಹಾರೈಸಿದ್ದಾರೆ. ಭಾರತ ಮತ್ತು ಆಸ್ಟ್ರಿಯಾ ನಡುವೆ ಬೆಳೆಯುತ್ತಿರುವ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಭಾರತ-ಆಸ್ಟ್ರಿಯಾ ಸ್ಟಾರ್ಟ್-ಅಪ್ ಸೇತುವೆಯನ್ನು ಫೆಬ್ರವರಿ 2024 ರಲ್ಲಿ ಪ್ರಾರಂಭಿಸಲಾಗಿದೆ.
ಭಾರತವು ಜಗತ್ತಿಗೆ ಬುದ್ಧನನ್ನು ನೀಡಿದೆ ಯುದ್ಧವನ್ನಲ್ಲಾ ಎನ್ನುತ್ತಾ ಪ್ರಧಾನಿ ಮೋದಿ ಭಾರತ ಹಾಗೂ ಆಸ್ಟ್ರಿಯಾ ಸ್ನೇಹವು ಹೊಸ ಉತ್ತುಂಗಕ್ಕೇರಲಿ ಎಂದು ಹಾರೈಸಿದ್ದಾರೆ. ಭಾರತ ಮತ್ತು ಆಸ್ಟ್ರಿಯಾ ನಡುವೆ ಬೆಳೆಯುತ್ತಿರುವ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಭಾರತ-ಆಸ್ಟ್ರಿಯಾ ಸ್ಟಾರ್ಟ್-ಅಪ್ ಸೇತುವೆಯನ್ನು ಫೆಬ್ರವರಿ 2024 ರಲ್ಲಿ ಪ್ರಾರಂಭಿಸಲಾಗಿದೆ.
ಇದು ಭರವಸೆಯ ಆರಂಭ ಎಂದರು. ಪ್ರಧಾನಿ ಆಸ್ಟ್ರಿಯಾ ಪ್ರವಾಸದ ಹೈಲೈಟ್ಸ್ಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಷ್ಯಾ ಪ್ರವಾಸ ಮುಗಿಸಿಕೊಂಡು ಬುಧವಾರ ಆಸ್ಟ್ರಿಯಾಗೆ ಆಗಮಿಸಿದ್ದ ಮೋದಿ, ವಿಯೆನ್ನಾದಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ. ಭಾರತ ಮೂಲದ ಕಲಾವಿದ ವಿಜಯ್ ಉಪಾಧ್ಯಾಯ ಹಾಗೂ ಅವರ ತಂಡದವರು ವಂದೇ ಮಾತರಂ ಗೀತೆಯನ್ನು ಪ್ರಸ್ತುತಪಡಿಸಿದರು.
ವೈದ್ಯಕೀಯ ಉಪಕರಣ, ಸೋಲಾರ್ ಪಿವಿ ಸೆಲ್ಸ್ , ಸೆಮಿಕಂಡಕ್ಟರ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿಜಾಗತಿಕ ಮಟ್ಟದಲ್ಲಿಕಂಪನಿಗಳನ್ನು ಆಕರ್ಷಿಸುವಲ್ಲಿ ನಮ್ಮ ಸರಕಾರದ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಯೋಜನೆ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ