ಶ್ರೀಮದ್ ರಂಭಾಪುರಿ ಜಗದ್ಗುರುಗಳ ಸಮ್ಮುಖದಲ್ಲಿ ಎಂಬಿ ಪಾಟೀಲ್ ಮತ್ತು ಬಿವೈ ವಿಜಯೇಂದ್ರ ಆತ್ಮೀಯವಾಗಿ ಹರಟಿದರು

|

Updated on: Oct 21, 2023 | 11:40 AM

ರಾಜಕಾರಣದಲ್ಲಿ ಯಾರೂ ಸ್ನೇಹಿತರಲ್ಲ ಮತ್ತು ದುಷ್ಮನ್ ಗಳೂ ಅಲ್ಲ. ಪಾಟೀಲ್ ಮತ್ತು ವಿಜಯೇಂದ್ರ ನಡುವೆ ನಡೆದ ಆತ್ಮೀಯ ಸಂವಾದ ಕಂಡು ಇದನ್ನು ಹೇಳಬೇಕಾಗಿದೆ. ಅಕ್ಕಪಕ್ಕ ಕೂತಾಗ ಮುಗಮ್ಮಾಗಿ ಕೂರಲಾಗಲ್ಲ ಅನ್ನೋದು ಬೇರೆ ವಿಷಯ.

ರಾಯಚೂರು: ದಸರಾ ಹಬ್ಬದ ಪ್ರಯುಕ್ತ, ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾಪದರು (Srimad Rambhapuri Jagadguru) ಜಿಲ್ಲೆಯ ಲಿಂಗಸೂಗೂರುನಲ್ಲಿ ಆಯೋಜಿಸಿರುವ ಧರ್ಮ ಸಮ್ಮೇಳನದ ಶರನ್ನವರಾತ್ರಿ ಕಾರ್ಯಕ್ರಮದಲ್ಲಿ ಸಚಿವ ಎಂಬಿ ಪಾಟೀಲ್ (MB Patil) ಮತ್ತು ಬಿಜೆಪಿ ಶಾಸಕ ಬಿವೈ ವಿಜಯೇಂದ್ರ (BY Vijayendra) ಭಾಗವಹಿಸಿದರು. ಮೊದಲಿಗೆ ಇಬ್ಬರು ಧುರೀಣರು ಪ್ರತ್ಯೇಕವಾಗಿ ಜಗದ್ಗರುಗಳೊಂದಿಗೆ ಸಮಾಲೋಚನೆ ನಡೆಸುತ್ತಾರೆ. ಪಾಟೀಲ್ ಅವರೊಂದಿಗೆ ಮಾತಾಡಿದ ಬಳಿಕ ಜಗದ್ಗುರುಗಳು ವಿಜಯೇಂದ್ರ ಕೊಂಚ ಜಾಸ್ತಿ ಹೊತ್ತು ಸಮಾಲೋಚನೆ ನಡೆಸುತ್ತಾರೆ. ನಂತರ ಅವರಿಬ್ಬರು ಹೋಗಿ ತಮ್ಮ ತಮ್ಮ ಆಸನಗಳಲ್ಲಿ ಅಕ್ಕಪಕ್ಕ ಕೂರುತ್ತಾರೆ. ನಾವು ಯಾವಾಗಲೂ ಒಂದು ಮಾತನ್ನು ಹೇಳುತ್ತಿರುತ್ತೇವೆ-ರಾಜಕಾರಣದಲ್ಲಿ ಯಾರೂ ಸ್ನೇಹಿತರಲ್ಲ ಮತ್ತು ದುಷ್ಮನ್ ಗಳೂ ಅಲ್ಲ. ಪಾಟೀಲ್ ಮತ್ತು ವಿಜಯೇಂದ್ರ ನಡುವೆ ನಡೆದ ಆತ್ಮೀಯ ಸಂವಾದ ಕಂಡು ಇದನ್ನು ಹೇಳಬೇಕಾಗಿದೆ. ಅಕ್ಕಪಕ್ಕ ಕೂತಾಗ ಮುಗಮ್ಮಾಗಿ ಕೂರಲಾಗಲ್ಲ ಅನ್ನೋದು ಬೇರೆ ವಿಷಯ ಮಾರಾಯ್ರೇ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ