Gujarat Plane Crash; ವಿಮಾನ ಹಾಸ್ಟೆಲ್ ಮೇಲೆ ಅಪ್ಪಳಿಸಿದಾಗ ಆಸ್ಪತ್ರೆಯಲ್ಲಿದ್ದ ವಿದ್ಯಾರ್ಥಿಗಳು ಈಗಲೂ ಗಾಬರಿಗೊಂಡಿದ್ದಾರೆ

Updated on: Jun 13, 2025 | 7:36 PM

ವಿಮಾನ ದುರಂತದಲ್ಲಿ ಸುಟ್ಟು ಕರಕಲಾಗಿರುವ ಹಾಸ್ಟೆಲ್ ನಲ್ಲಿದ್ದ ಮೆಡಿಕೋಗಳನ್ನು ಬೇರೆ ಸ್ಥಳಕ್ಕೆ ವರ್ಗಾಯಿಸಲಾಗುತ್ತಿದೆ. ನಮ್ಮ ವರದಿಗಾರ ಹಾಸ್ಟೆಲ್​ನಲ್ಲಿದ್ದ ಎಷ್ಟು ವಿದ್ಯಾರ್ಥಿಗಳು ಸತ್ತಿದ್ದಾರೆಂದು ಕೇಳಿದರೆ ಗೊತ್ತಿಲ್ಲ ಎನ್ನುತ್ತಾರೆ. ಆದರೆ ಈ ವಿದ್ಯಾರ್ಥಿ ಸೇರಿದಂತೆ ಹಾಸ್ಟೆಲ್ ಬದಲು ಅಸ್ಪತ್ರೆಯಲ್ಲಿದ್ದವರೆಲ್ಲ ತಮ್ಮ ನಸೀಬನ್ನು ಕೊಂಡಾಡುತ್ತಿದ್ದಾರೆ. ಮೆಸ್ ನಲ್ಲಿ ಊಟಕ್ಕೆ ಕೂತಿದ್ದ ಹಲವು ವಿದ್ಯಾರ್ಥಿಗಳು ಮರಣವನ್ನಪ್ಪಿದ್ದು ನಿಜಕ್ಕೂ ದುರಂತ.

ಅಹಮದಾಬಾದ್, ಜೂನ್ 13: ಗುರುವಾರದಂದು ಅಹಮದಾಬಾದ್ ನಲ್ಲಿ ದುರಂತಕ್ಕೀಡಾದ ವಿಮಾನ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್ ಮತ್ತು ಮೆಸ್​ಗೆ ಅಪ್ಪಳಿಸಿದ್ದು ಗೊತ್ತಿದೆ. ದುರಂತದಲ್ಲಿ ಕೆಲ ವಿದ್ಯಾರ್ಥಿಗಳು ಸತ್ತಿದ್ದಾರೆ ಆದರೆ ಎಷ್ಟು ಅನ್ನೋದು ಇನ್ನೂ ಗೊತ್ತಾಗಿಲ್ಲ. ವಿಮಾನ ಪತನಗೊಂಡ ಸಂದರ್ಭದಲ್ಲಿ ಕೆಲ ವಿದ್ಯಾರ್ಥಿಗಳು ಅಸ್ಪತ್ರೆಯಲ್ಲಿದ್ದ ಕಾರಣ ಬಚಾವಾಗಿದ್ದಾರೆ. ಹಾಗೆ ಉಳಿದವರಲ್ಲಿ ಇವರೂ ಒಬ್ಬರು. ಇವರು ತಮ್ಮ ಇಬ್ಬರು ಸಹಪಾಠಿಗಳೊಂದಿಗೆ ರೂಮ್ ನಂ. 304 ನಲ್ಲಿದ್ದರಂತೆ. ಇವರು ಬಳಸುತ್ತಿದ್ದ ಅಗತ್ಯ ವಸ್ತುಗಳೆಲ್ಲ ನಾಶವಾಗಿವೆ, ಲ್ಯಾಪ್ ಟಾಪ್ ಕೂಡ ಸುಟ್ಟುಹೋಗಿದೆ.

ಇದನ್ನೂ ಓದಿ:  ಊಟಕ್ಕೆ ಕುಳಿತ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ; ಹಾಸ್ಟೆಲ್​ ಈಗ ಹೀಗಿದೆ ನೋಡಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ