ಪೆನ್ ಡ್ರೈವ್ ಪಬ್ಲಿಕ್ ಆಗುವ ಮೊದಲು ದೇವರಾಜೇಗೌಡ ಕುಮಾರಸ್ವಾಮಿಯನ್ನು ಭೇಟಿಯಾಗಿದ್ದು ಯಾಕೆ ಚರ್ಚೆಯಾಗುತ್ತಿಲ್ಲ? ಚಲುವರಾಯಸ್ವಾಮಿ

|

Updated on: May 09, 2024 | 6:39 PM

ಕಾರ್ತೀಕ್ ಹೆಸರಿನ ಡ್ರೈವರ್ ಕೇವಲ ಒಂದು ಫೋಲ್ಡರ್ ಮಾತ್ರ ಕೊಟ್ಟಿದ್ದಾನಂತೆ, ಅವನಲ್ಲಿ ಇನ್ನೂ ಸಾಕಷ್ಟು ವಿಡಿಯೋಗಳಿವೆ ಎಂದು ಹೇಳುವ ಅವರು ಕುಮಾರಸ್ವಾಮಿ ಹೇಳಿದ್ದನ್ನೆಲ್ಲ ನಂಬಬೇಡಿ, ಹೇಳಿದ್ದನ್ನು ಪರಾಮರ್ಶೆ ಮಾಡಿ ನಂತರ ಪ್ರಶ್ನೆಗಳನ್ನು ಕೇಳಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಸಲಹೆ ನೀಡಿದರು

ಮಂಡ್ಯ: ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy) ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ (Prajwal Revanna sleaze videos) ಹೊಸ ಟ್ವಿಸ್ಟ್ ನೀಡಿದರು. ಸಚಿವ ಹೇಳುವ ಪ್ರಕಾರ ಪೆನ್ ಡ್ರೈವ್ ಗಳು ಸಾರ್ವಜನಿಕಗೊಳ್ಳುವ ಮೊದಲು ವಕೀಲ ದೇವರಾಜೇಗೌಡ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯನ್ನು (HD Kumaraswamy) ಭೇಟಿಯಾಗಿದ್ದರು, ಅದನ್ನು ಕುಮಾರಸ್ವಾಮಿ ಯಾಕೆ ಬಹಿರಂಗಪಡಿಸುತ್ತಿಲ್ಲ ಎಂದು ಕೇಳಿದರು. ದೇವರಾಜೇಗೌಡ ಕುಮಾರಸ್ವಾಮಿಯನ್ನು ಭೇಟಿಯಾಗಿದ್ದು ನಿಮಗೆ ಹೇಗೆ ಗೊತ್ತು ಅಂತ ಕೇಳಿದರೆ, ಎಲೆಕ್ಟ್ರಾನಿಕ್ ಮಾಧ್ಯಮದವರೊಂದಿಗೆ ಮಾತಾಡುತ್ತಿದ್ದ ಚಲುವರಾಯಸ್ವಾಮಿ, ಟಿವಿಯಲ್ಲಿ ಬರುತ್ತಿದೆ ನಿಮಗೆ ಗೊತ್ತಿಲ್ವಾ? ನೀವು ನೋಡಿಲ್ವಾ ಅಂತ ಕೇಳುತ್ತಾರೆ! ಕಾರ್ತೀಕ್ ಹೆಸರಿನ ಡ್ರೈವರ್ ಕೇವಲ ಒಂದು ಫೋಲ್ಡರ್ ಮಾತ್ರ ಕೊಟ್ಟಿದ್ದಾನಂತೆ, ಅವನಲ್ಲಿ ಇನ್ನೂ ಸಾಕಷ್ಟು ವಿಡಿಯೋಗಳಿವೆ ಎಂದು ಹೇಳುವ ಅವರು ಕುಮಾರಸ್ವಾಮಿ ಹೇಳಿದ್ದನ್ನೆಲ್ಲ ನಂಬಬೇಡಿ, ಹೇಳಿದ್ದನ್ನು ಪರಾಮರ್ಶೆ ಮಾಡಿ ನಂತರ ಪ್ರಶ್ನೆಗಳನ್ನು ಕೇಳಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಸಲಹೆ ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕೆಣಕಿದರೆ ಸುಮ್ಮನಿರಲ್ಲ ಅಂತ ಹೇಳುವ ಕುಮಾರಸ್ವಾಮಿ ನಾಗರಹಾವೇ ಇಲ್ಲ ಹೆಬ್ಬಾವೇ? ಚಲುವರಾಯಸ್ವಾಮಿ