ವಿದ್ಯಾರ್ಥಿಗೆ ಗಿಟಾರ್ ನುಡಿಸಲು ಕಲಿಸಿದ ಮೇಘಾಲಯ ಸಿಎಂ; ಸರಳತನಕ್ಕೆ ಭಾರೀ ಮೆಚ್ಚುಗೆ

Updated on: May 26, 2025 | 10:24 PM

ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಶಾಲಾ ಭೇಟಿಯ ಸಮಯದಲ್ಲಿ ವಿದ್ಯಾರ್ಥಿಗೆ ಗಿಟಾರ್ ನುಡಿಸಲು ಕಲಿಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಇದಕ್ಕೆ ಜನರ ಮೆಚ್ಚುಗೆ ವ್ಯಕ್ತವಾಗಿದೆ. ರಿ-ಭೋಯ್ ಜಿಲ್ಲೆಯ ಪಹಮ್ಜುಲಾ ಗ್ರಾಮದಲ್ಲಿರುವ ಸ್ಥಳೀಯ ಶಾಲೆಗೆ ಭೇಟಿ ನೀಡಿದ ಸಿಎಂ, ಈ ವಿದ್ಯಾರ್ಥಿಗೆ ಗಿಟಾರ್ ನುಡಿಸಲು ಕಲಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ವಿದ್ಯಾರ್ಥಿ ಸ್ವರಮೇಳ ನುಡಿಸಲು ಕಷ್ಟಪಡುತ್ತಿರುವುದನ್ನು ಸಂಗ್ಮಾ ಗಮನಿಸಿದ್ದಾರೆ. ಆದ್ದರಿಂದ ಅವರು ಮಧ್ಯಪ್ರವೇಶಿಸಿ ವಿದ್ಯಾರ್ಥಿಗೆ ಗಿಟಾರ್ ನುಡಿಸಲು ಸಹಾಯ ಮಾಡಿದರು. ಈ ವಿಡಿಯೋವನ್ನು ಸಿಎಂ ಸ್ವತಃ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಶಿಲ್ಲಾಂಗ್, ಮೇ 26: ಮೇಘಾಲಯದ ಮುಖ್ಯಮಂತ್ರಿ (Meghalaya CM) ಕಾನ್ರಾಡ್ ಕೆ ಸಂಗ್ಮಾ ಇಂದು ಜಿರಾಂಗ್ ಕ್ಷೇತ್ರದ ನಾಂಗ್‌ಸ್ಪಂಗ್ ಎ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಲೆಯೊಂದಕ್ಕೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಮೇಘಾಲಯ ಸಿಎಂ ವಿದ್ಯಾರ್ಥಿಯೊಬ್ಬನಿಗೆ ಗಿಟಾರ್ ನುಡಿಸಲು ಸಹಾಯ ಮಾಡುತ್ತಿರುವ ಹೃದಯಸ್ಪರ್ಶಿ ವೀಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದು, ಬಳಕೆದಾರರಿಂದ ಪ್ರಶಂಸೆ ಗಳಿಸಿದೆ. ಈ ವಿಡಿಯೋವನ್ನು ಸಿಎಂ ಸ್ವತಃ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಹುಡುಗ ಸಂಗೀತ ವಾದ್ಯವನ್ನು ನುಡಿಸಲು ಕಷ್ಟಪಡುತ್ತಿರುವುದನ್ನು ನೋಡಿದ ಸಿಎಂ ತಾವೇ ಖುದ್ದಾಗಿ ಆ ಹುಡುಗನಿಗೆ ಗಿಟಾರ್ ನುಡಿಸಲು ಸಹಾಯ ಮಾಡಿದ್ದಾರೆ. ಅವರ ಸರಳತೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More