ಮಕ್ಕಳಿಂದಾಗಿ ನಮ್ಮ ಕುಟುಂಬದಲ್ಲಿ ಒಗ್ಗಟ್ಟು; ಧ್ರುವ ಮಕ್ಕಳ ಬಗ್ಗೆ ಮೇಘನಾ ರಾಜ್ ಮಾತು
ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಪುತ್ರ ರಾಯನ್ ಕಂಡರೆ ಧ್ರುವ ಸರ್ಜಾಗೆ ತುಂಬಾ ಪ್ರೀತಿ. ಆ ಕುರಿತು ಮೇಘನಾ ರಾಜ್ ಅವರು ಮಾತಾಡಿದ್ದಾರೆ. ‘ನಮ್ಮ ಫ್ಯಾಮಿಲಿಯಲ್ಲಿ ಮಾತ್ರವಲ್ಲ. ಎಲ್ಲರ ಕುಟುಂಬದಲ್ಲೂ ಮಕ್ಕಳ ಮುಖ ನೋಡಿದ ಕೂಡಲೇ ಒಗ್ಗಟ್ಟು ಬರುತ್ತದೆ’ ಎಂದಿದ್ದಾರೆ ನಟಿ ಮೇಘನಾ ರಾಜ್.
ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಪುತ್ರ ರಾಯನ್ ಕಂಡರೆ ಧ್ರುವ ಸರ್ಜಾ (Dhruva Sarja) ಅವರಿಗೆ ಸಖತ್ ಪ್ರೀತಿ. ಆ ಬಗ್ಗೆ ಮೇಘನಾ ರಾಜ್ ಮಾತನಾಡಿದ್ದಾರೆ. ‘ನಮ್ಮ ಕುಟುಂಬದಲ್ಲಿ ಮಾತ್ರ ಅಲ್ಲ. ಎಲ್ಲರ ಕುಟುಂಬದಲ್ಲೂ ಮಕ್ಕಳ ಮುಖ ನೋಡಿದ ಕೂಡಲೇ ಒಗ್ಗಟ್ಟು ಬಂದುಬಿಡುತ್ತದೆ. ಧ್ರುವನಿಗೆ ಎಷ್ಟೇ ಕೆಲಸ ಇದ್ದರೂ ಕೊನೇಪಕ್ಷ ಫೋನಲ್ಲಿ ಆದ್ರೂ ರಾಯನ್ (Raayan Raj Sarja) ಜೊತೆ ಮಾತನಾಡಬೇಕು. ನನಗೆ ರುದ್ರಾಕ್ಷಿ ಮತ್ತು ಹಯಗ್ರೀವನ ನೋಡಬೇಕು ಎನಿಸುತ್ತದೆ. ಹಯಗ್ರೀವ ಇನ್ನೂ ಪುಟ್ಟ ಮಗು. ರುದ್ರಾಕ್ಷಿ ಮತ್ತು ರಾಯನ್ ಬಾಂಡಿಂಗ್ ನೋಡಿದರೆ ನನಗೆ ಯಾವಾಗಲೂ ಚಿರು ಮತ್ತು ಧ್ರುವ ನೋಡಿದಂತೆ ಆಗುತ್ತದೆ’ ಎಂದು ಮೇಘನಾ ರಾಜ್ (Meghana Raj) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.