Video: ಚಾಲಕನಿಗೆ ತಪ್ಪಿತು ಪ್ರಜ್ಞೆ, ವಿಮಾನದಂತೆ ಹಾರಿದ ಮರ್ಸಿಡಿಸ್ ಕಾರು, ಅಪಘಾತದ ವಿಡಿಯೋ

Updated on: Dec 07, 2025 | 8:03 AM

ಈ ಘಟನೆ ನಡೆದಿದ್ದು ರೊಮೇನಿಯಾದಲ್ಲಿ. ವೇಗವಾಗಿ ಬಂದ ಕಾರೊಂದು ನೋಡ ನೋಡುತ್ತಲೇ ವಿಮಾನದ ರೀತಿ ಮೇಲೆ ಹಾರಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಂತರ ಪೆಟ್ರೋಲ್​ ಬಂಕ್​ಗೆ ಡಿಕ್ಕಿ ಹೊಡೆದಿದೆ. ಡಿಸೆಂಬರ್ 3ರಂದು ಒರಾಡಿಯಾ ನಗರದಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಘಟನೆ ಸೆರೆಯಾಗಿದೆ. ಮರ್ಸಿಡಿಸ್ ಕಾರು ತಪ್ಪು ದಾರಿಯಲ್ಲಿ ಬಂದಿದ್ದಲ್ಲದೆ, ವೇಗವಾಗಿ ಬಂದು ಡಿವೈಡರ್​ಗೆ ಡಿಕ್ಕಿ ಹೊಡೆದ ಪರಿಣಾಮ ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದಿದೆ. ಕಾರು ಹಾರುವಾಗ ಕೆಳಗೆ ಎರಡು ಕಾರುಗಳು ಕೂಡ ಇದ್ದವು.55 ವರ್ಷದ ಚಾಲಕನಿಗೆ ತೀವ್ರ ಮಧುಮೇಹ ಸಮಸ್ಯೆ ಇದ್ದು, ಡ್ರೈವ್ ಮಾಡುವಾಗ ಏಕಾಏಕಿ ಅವರು ಮೂರ್ಛೆ ಹೋಗಿದ್ದರು

ರೊಮೇನಿಯಾ, ಡಿಸೆಂಬರ್ 07: ಈ ಘಟನೆ ನಡೆದಿದ್ದು ರೊಮೇನಿಯಾದಲ್ಲಿ. ವೇಗವಾಗಿ ಬಂದ ಕಾರೊಂದು ನೋಡ ನೋಡುತ್ತಲೇ ವಿಮಾನದ ರೀತಿ ಮೇಲೆ ಹಾರಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಂತರ ಪೆಟ್ರೋಲ್​ ಬಂಕ್​ಗೆ ಡಿಕ್ಕಿ ಹೊಡೆದಿದೆ. ಡಿಸೆಂಬರ್ 3ರಂದು ಒರಾಡಿಯಾ ನಗರದಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಘಟನೆ ಸೆರೆಯಾಗಿದೆ. ಮರ್ಸಿಡಿಸ್ ಕಾರು ತಪ್ಪು ದಾರಿಯಲ್ಲಿ ಬಂದಿದ್ದಲ್ಲದೆ, ವೇಗವಾಗಿ ಬಂದು ಡಿವೈಡರ್​ಗೆ ಡಿಕ್ಕಿ ಹೊಡೆದ ಪರಿಣಾಮ ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದಿದೆ. ಕಾರು ಹಾರುವಾಗ ಕೆಳಗೆ ಎರಡು ಕಾರುಗಳು ಕೂಡ ಇದ್ದವು.

55 ವರ್ಷದ ಚಾಲಕನಿಗೆ ತೀವ್ರ ಮಧುಮೇಹ ಸಮಸ್ಯೆ ಇದ್ದು, ಡ್ರೈವ್ ಮಾಡುವಾಗ ಏಕಾಏಕಿ ಅವರು ಮೂರ್ಛೆ ಹೋಗಿದ್ದರು. ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಳೆ ಮುರಿತಗಳು ಉಂಟಾಗಿವೆ ಆದರೆ ಮಾರಣಾಂತಿಕ ಗಾಯಗಳೇನೂ ಆಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. 90 ದಿನಗಳ ವರೆಗೆ ಚಾಲಕನ ಪರವಾನಗಿಯನ್ನು ಅಮನಾತುಗೊಳಿಸಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More