ಯಾದಗಿರಿಯಲ್ಲಿ 13 ಡಿಗ್ರಿ ಸೆಲ್ಸಿಯಸ್​ಗೆ ಕುಸಿದ ತಾಪಮಾನ, ಮುನ್ನೆಚ್ಚರಿಕೆಗಳ ಬಗ್ಗೆ ವೈದ್ಯರ ಸಲಹೆ

ಯಾದಗಿರಿಯಲ್ಲಿ 13 ಡಿಗ್ರಿ ಸೆಲ್ಸಿಯಸ್​ಗೆ ಕುಸಿದ ತಾಪಮಾನ, ಮುನ್ನೆಚ್ಚರಿಕೆಗಳ ಬಗ್ಗೆ ವೈದ್ಯರ ಸಲಹೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 19, 2024 | 11:28 AM

ಯಾದಗಿರಿ ಟಿವಿ9 ವರದಿಗಾರನೊಂದಿಗೆ ಮಾತಾಡಿರುವ ಮತ್ತೊಬ್ಬ ವೈದ್ಯ ಮಕ್ಕಳ ತಜ್ಞರು. ಚಳಿ ಜಾಸ್ತಿ ಇರುವುದರಿಂದ ಮಕ್ಕಳನ್ನು ಬೆಚ್ಚಗಿಡಬೇಕು, ಬೆಳಗಿನ ಹೊತ್ತು ಬಿಸಿ ಆಹಾರ ಸೇವಿಸಲು ನೀಡಬೇಕು, ಹೆಚ್ಚಿದ ಚಳಿಯಲ್ಲಿ ಮಕ್ಕಳಿಗೆ ಅಲರ್ಜಿ, ಉಸಿರಾಟದ ಸಮಸ್ಯೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ಕಾಡಬಹದು ಎಂದು ವೈದ್ಯ ಹೇಳುತ್ತಾರೆ.

ಯಾದಗಿರಿ: ಜಿಲ್ಲೆಯಲ್ಲಿ ಬೇಸಿಗೆಯ ತಾಪಮಾನ 45ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ. ಈ ಬಾರಿಯ ಚಳಿಗಾಲದಲ್ಲಿ ಅದು 13ಡಿಗ್ರಿ ಸೆಲ್ಸಿಯಸ್​ಗೆ ಕುಸಿದಿದೆ ಎಂದು ನಮ್ಮ ವರದಿಗಾರ ಹೇಳುತ್ತಾರೆ. ನಗರದ ಲುಂಬಿನಿ ಗಾರ್ಡನ್​ಗೆ ವಾಕ್​ ಅಂತ ಬೆಳಗ್ಗೆ 5 ಗಂಟೆಗೆಲ್ಲ ಬರುವ ಜನ ಈಗ 7.30 ಕ್ಕೆ ಬರುತ್ತಿದ್ದಾರೆ. ವಾಕ್​ಗೆ ಬಂದಿರುವ ಇಬ್ಬರು ವೈದ್ಯರೊಂದಿಗೆ ವರದಿಗಾರ ಮಾತಾಡಿದ್ದು ಚಳಿಯಿಂದ ರಕ್ಷಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಜೆ ಕ್ರಮಗಳ ಬಗ್ಗೆ ಮಾತಾಡಿದ್ದಾರೆ. ಮೊದಲು ಮಾತಾಡಿರುವ ವೈದ್ಯ, ವಯಸ್ಸಾದವರು ಹೆಚ್ಚಿನ ಜಾಗ್ರತೆ ವಹಿಸಬೇಕು, ಚಳಿಗೆ ರಕ್ತನಾಳಗಳು ಸಂಕುಚಿತಗೊಳ್ಳುವುದರಿಂದ ಎದೆನೋವು ಬರುತ್ತದೆ ಮತ್ತು ಹೃದಯಾಘಾತವಾಗುವ ಸಾಧ್ಯತೆಯೂ ಇರುತ್ತದೆ ಎಂದು ಅವರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಥರಗುಟ್ಟುವ ಚಳಿಯಿಂದ ಬೀದರ್ ಜನ ಕಂಗಾಲು, ರೆಡ್ ಅಲರ್ಟ್ ಘೋಷಿಸಿದ ಜಿಲ್ಲಾಡಳಿತ