ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

|

Updated on: Jan 08, 2025 | 9:46 PM

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಆಕಾಶವಾಣಿಯ ವಿಶೇಷ ಸಂಯೋಜನೆಯ ಹಾಡೊಂದನ್ನು ಪ್ರಯಾಗ್​ರಾಜ್​ನ ಮಹಾಕುಂಭಕ್ಕೆ ಅರ್ಪಿಸಿದ್ದಾರೆ. ಈ ವಿಶೇಷವಾದ ಹಾಡು ಮಹಾಕುಂಭದ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವನ್ನು ಸಾರುವಂತಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಇಂದು ಬುಧವಾರದಂದು ಆಕಾಶವಾಣಿ ಮತ್ತು ದೂರದರ್ಶನದ ಮಹಾ ಕುಂಭ 2025 ರ ವಿಶೇಷ ಹಾಡನ್ನು ಬಿಡುಗಡೆ ಮಾಡಿದರು. ಈ ಹಾಡು ಕಾರ್ಯಕ್ರಮದ ಗೀತೆಯಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಇದು ಮಹಾಕುಂಭದ ಜಾಗತಿಕ ಪ್ರೇಕ್ಷಕರನ್ನು ಆಕರ್ಷಿಸುತ್ತದೆ ಮತ್ತು ಮಹತ್ವವನ್ನು ಹೆಚ್ಚಿಸುತ್ತದೆ.

ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯಲಿರುವ ಮಹಾಕುಂಭ-2025ಕ್ಕೆ ವಿಶೇಷವಾಗಿ ಸಂಯೋಜನೆ ಮಾಡಲಾಗಿರುವ ಹಾಡೊಂದನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಇಂದು ಲೋಕಾರ್ಪಣೆಗೊಳಿಸಿದರು. ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನ ಸಂಯೋಜನೆ ಮಾಡಿರುವ ಹಾಡು ಇದಾಗಿದೆ. ಈ ಹಾಡು ಪ್ರಯಾಗ್‌ರಾಜ್‌ನಲ್ಲಿರುವ ಪವಿತ್ರ ತ್ರಿವೇಣಿ ಸಂಗಮದಲ್ಲಿ ನಡೆಯುವ ಮಹಾಕುಂಭದ ವೈಭವಕ್ಕೆ ನೀಡುವ ಗೌರವವಾಗಿದೆ.

ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಈ ಕಾರ್ಯಕ್ರಮವು ಅತಿದೊಡ್ಡ ಧಾರ್ಮಿಕ ಸಭೆಗಳಲ್ಲಿ ಒಂದಾಗಿದೆ. ಜಗತ್ತಿನಲ್ಲಿ ಲಕ್ಷಾಂತರ ಯಾತ್ರಿಕರು, ಸಂತರು ಮತ್ತು ಆಧ್ಯಾತ್ಮಿಕ ನಾಯಕರು ಬರುತ್ತಾರೆ. ಈ ಬಾರಿ ಮಹಾಕುಂಭಕ್ಕೆ 45 ಕೋಟಿ ಭಕ್ತರು ಬರುವ ನಿರೀಕ್ಷೆ ಇದೆ. ಜನವರಿ 13ರಿಂದ ಫೆಬ್ರವರಿ 26ರವರೆಗೆ ಪ್ರಯಾಗರಾಜ್‌ನಲ್ಲಿ ಮಹಾ ಕುಂಭ ನಡೆಯಲಿದೆ. ಮಹಾಕುಂಭಕ್ಕೆ ಸಂಯೋಜಿಸಿ, ಚಿತ್ರೀಕರಿಸಲಾದ ಈ ವಿಡಿಯೋ ಹಾಗೂ ಹಾಡನ್ನು ನೀವೂ ಒಮ್ಮೆ ನೋಡಿಬಿಡಿ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ