ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ಮತ್ತು ಜೆಡಿಎಸ್ ನ 25-30 ಶಾಸಕರು ಕಾಂಗ್ರೆಸ್ ಸೇರ್ತಾರೆ: ಡಿ ಸುಧಾಕರ್, ಸಚಿವ

|

Updated on: May 17, 2024 | 6:16 PM

ಲೋಕಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ಸರ್ಕಾರದಿಂದ ಹಣ ಬಿಡುಗಡೆಯಾಗುತ್ತಿಲ್ಲ ಅಂತ ಕಾಂಗ್ರೆಸ್ ಶಾಸಕರು ಬೇಸತ್ತಿದ್ದಾರೆ ಮತ್ತು ಬಿಜೆಪಿ ಸೇರಲು ತವಕಿಸುತ್ತಿದ್ದಾರೆ ಎಂದು ಹೇಳಿದ್ದರು. ಸರ್ಕಾರ ಉರುಳಬೇಕಾದರೆ, ಬಿಜೆಪಿ ಕನಿಷ್ಠ 30 ಕಾಂಗ್ರೆಸ್ ಶಾಸಕರನ್ನು ಖರೀದಿಸಬೇಕಾಗುತ್ತದೆ!

ಚಿತ್ರದುರ್ಗ: ನಮ್ಮ ರಾಜಕಾರಣಿಗಳು ಕೆಲ ಹೇಳಿಕೆಗಳನ್ನು ನೀಡುವಾಗ ಹಿಂದೆ ಮುಂದೆ ಯೋಚನೆ ಮಾಡದೆ ನೀಡುತ್ತಾರೆ. ಅಂದರೆ ತಲೆಬುಡವಿಲ್ಲದ ಹೇಳಿಕೆಗಳು. ಚಿತ್ರದುರ್ಗದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ ಸುಧಾಕರ್ (D Sudhakar) ಅವರು ಲೋಕಸಭಾ ಚುನಾವಣೆಯ (Lok Sabha polls) ಬಳಿಕ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಸುಮಾರು 25-30 ಶಾಸಕರು ಕಾಂಗ್ರೆಸ್ ಪಕ್ಷವನ್ನು (Congress party) ಸೇರಲಿದ್ದಾರೆ ಮತ್ತು ರಾಜ್ಯದಲ್ಲಿ ಪಕ್ಷವು ಈಗಿನದಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಲಿದೆ ಎಂದು ಹೇಳುತ್ತಾರೆ! ನಿನ್ನೆ ಬಿಜೆಪಿ ನಾಯಕರಾದ ಆರ್ ಅಶೋಕ ಮತ್ತು ಜಗದೀಶ್ ಶೆಟ್ಟರ್ ಇದೇ ಬಗೆಯ ಹೇಳಿಕೆಗಳನ್ನು ನೀಡಿದ್ದರು. ಲೋಕಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ಸರ್ಕಾರದಿಂದ ಹಣ ಬಿಡುಗಡೆಯಾಗುತ್ತಿಲ್ಲ ಅಂತ ಕಾಂಗ್ರೆಸ್ ಶಾಸಕರು ಬೇಸತ್ತಿದ್ದಾರೆ ಮತ್ತು ಬಿಜೆಪಿ ಸೇರಲು ತವಕಿಸುತ್ತಿದ್ದಾರೆ ಎಂದು ಹೇಳಿದ್ದರು. ಸರ್ಕಾರ ಉರುಳಬೇಕಾದರೆ, ಬಿಜೆಪಿ ಕನಿಷ್ಠ 30 ಕಾಂಗ್ರೆಸ್ ಶಾಸಕರನ್ನು ಖರೀದಿಸಬೇಕಾಗುತ್ತದೆ!

ಓಕೆ ಮತ್ತೊಂದೆಡೆ, ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಬಂದಾರು? ಸುಮಾರು 70-80 ಕಾಂಗ್ರೆಸ್ ಶಾಸಕರೇ ಮಂತ್ರಿಗಿರಿಗಾಗಿ ಇಲ್ಲವೇ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯತ್ತಿದ್ದಾರೆ. ಇದು ಬಿಜೆಪಿ ಮತ್ತು ಜೆಡಿಎಸ್ ಶಾಸಕರಿಗೆ ಗೊತ್ತಿಲ್ಲವೇ? ಅಧಿಕಾರದ ಆಸೆ ಇಟ್ಟುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಬರಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಯಾವತ್ತೋ ಹೇಳಿದ್ದಾರೆ! ಪರಿಸ್ಥಿತಿ ಹೀಗಿರುವಾಗ ನಮ್ಮ ನಾಯಕರು ಯಾಕೆ ಅಸಂಬದ್ಧ ಹೇಳಿಕೆಗಳನ್ನು ನೀಡಿ ಫುಟೇಜ್ ಕಬಳಿಸುತ್ತಾರೆ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಯತ್ನಾಳ್​ರಂತೆ ಮಾತಾಡುವವರನ್ನು ಪಕ್ಷದಿಂದ ಉಚ್ಚಾಟಿಸುತ್ತಿದ್ದೆ ಎಂದಿದ್ದ ಶಿವಕುಮಾರ್ ಯಾಕೆ ಡಿ ಸುಧಾಕರ್ ವಿಷಯದಲ್ಲಿ ತೆಪ್ಪಗಿದ್ದಾರೆ? ಹೆಚ್ ಡಿ ಕುಮಾರಸ್ವಾಮಿ

Follow us on