ಸೋಮವಾರದವರೆಗೆ ರಿಲೀಫ್ ಪಡೆದ ರೇವಣ್ಣ ಕೋರ್ಟ್ ನಿಂದ ನೇರವಾಗಿ ಡಾ ಸಿಎನ್ ಮಂಜುನಾಥ್ ಮನೆಗೆ ಹೋದರು!

ಸೋಮವಾರದವರೆಗೆ ರಿಲೀಫ್ ಪಡೆದ ರೇವಣ್ಣ ಕೋರ್ಟ್ ನಿಂದ ನೇರವಾಗಿ ಡಾ ಸಿಎನ್ ಮಂಜುನಾಥ್ ಮನೆಗೆ ಹೋದರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 17, 2024 | 7:37 PM

66-ವರ್ಷ ವಯಸ್ಸಿನ ರೇವಣ್ಣ ಕಳೆದ 20 ದಿನಗಳಿಂದ ನೆಮ್ಮದಿ ಕಳೆದುಕೊಂಡಿದ್ದಾರೆ. ಯಾಕೆ ಅನ್ನೋದು ಕನ್ನಡಿಗರಿಗೆಲ್ಲ ಗೊತ್ತು. ಇಂದು ರೇವಣ್ಣ ತಮ್ಮ ತಂಗಿಯ ಮನೆ ತಲುಪಿದಾಗ ಖುದ್ದು ಡಾ ಮಂಜನಾಥ್ ಮನೆ ಬಾಗಿಲಿಗೆ ಬಂದು ಅವರನ್ನು ಬರಮಾಡಿಕೊಂಡರು. ಡಾಕ್ಟರ್ ಸಾಹೇಬರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿದ್ದಾರೆ.

ಬೆಂಗಳೂರು: ಮಹಿಳೆಯೊಬ್ಬರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಹೆಚ್ ಡಿ ರೇವಣ್ಣರ (HD Revanna) ಜಾಮೀನು ಆದೇಶವನ್ನು ನಗರದ 42 ನೇ ಎಸಿಎಂಎಂ ಕೋರ್ಟ್ ಸೋಮವಾರಕ್ಕೆ ಕಾಯ್ದಿರಿಸಿದ ಬಳಿಕ ಮತ್ತೊಮ್ಮೆ ಗೆಲುವಾದ ಶಾಸಕರು ಕೋರ್ಟ್ ನಿಂದ ಹೊರಬಿದ್ದ ಮೇಲೆ ನೇರವಾಗಿ ತಮ್ಮ ಮನೆ ಅಥವಾ ತಮ್ಮ ತಂದೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ (HD Devegowda) ಮನೆಗೆ ಹೋಗದೆ, ತಮ್ಮ ಬಾಮೈದ ಡಾ ಸಿಎನ್ ಮಂಜುನಾಥ್ (Dr CN Manjunath) ಅವರ ಮನೆಗೆ ಬಂದರು. ರೇವಣ್ಣರ ಸಹೋದರಿಯನ್ನು ಮದುವೆಯಾಗಿರುವ ಡಾ ಮಂಜುನಾಥ್ ಅವರ ಮನೆಯೂ ಪದ್ಮನಾಭನಗರದಲ್ಲಿದೆ. 66-ವರ್ಷ ವಯಸ್ಸಿನ ರೇವಣ್ಣ ಕಳೆದ 20 ದಿನಗಳಿಂದ ನೆಮ್ಮದಿ ಕಳೆದುಕೊಂಡಿದ್ದಾರೆ. ಯಾಕೆ ಅನ್ನೋದು ಕನ್ನಡಿಗರಿಗೆಲ್ಲ ಗೊತ್ತು. ಇಂದು ರೇವಣ್ಣ ತಮ್ಮ ತಂಗಿಯ ಮನೆ ತಲುಪಿದಾಗ ಖುದ್ದು ಡಾ ಮಂಜನಾಥ್ ಮನೆ ಬಾಗಿಲಿಗೆ ಬಂದು ಅವರನ್ನು ಬರಮಾಡಿಕೊಂಡರು. ಡಾಕ್ಟರ್ ಸಾಹೇಬರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಆತಂಕ ಒತ್ತಡಗಳ ನಡುವೆಯೂ ಕಾಗದ ಪತ್ರ ಸಮಿತಿ ಸಭೆಯಲ್ಲಿ ಭಾಗವಹಿಸಿದ ಹೆಚ್ ಡಿ ರೇವಣ್ಣ!