ಮಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಸ್ವಿಮ್ಮಿಂಗ್; ಇಲ್ಲಿದೆ ವಿಡಿಯೋ

ಮಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಸ್ವಿಮ್ಮಿಂಗ್; ಇಲ್ಲಿದೆ ವಿಡಿಯೋ

ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ಸಾಧು ಶ್ರೀನಾಥ್​

Updated on:Jul 06, 2024 | 4:25 PM

ದಕ್ಷಿಣ ಕನ್ನಡ ಪ್ರವಾಸದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಬೆಳ್ಳಂ ಬೆಳಗ್ಗೆ ಎಮ್ಮೆಕೆರೆಯ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ಸ್ವಿಮ್ಮಿಂಗ್ ಮಾಡಿ ರಿಲಾಕ್ಸ್ ಆಗಿದ್ದಾರೆ. ಸಚಿವರ ಸ್ವಿಮ್ಮಿಂಗ್ ವಿಡಿಯೋ ಇಲ್ಲಿದೆ. ಕಳೆದ ವರ್ಷ ನ. 24ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಈಜುಕೊಳವನ್ನು ಉದ್ಘಾಟಿಸಿದ್ದರು.

ಮಂಗಳೂರು, ಜುಲೈ 06: 80ರ ದಶಕದಲ್ಲಿ ಸೀನಿಯರ್​ ಗುಂಡೂರಾವ್​ ನಾಡಿನ ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರಿನಲ್ಲಿ ಸ್ವತಃ ಡೈವ್​ ಹೊಡೆದು ಜಯನಗರ ಸ್ವಿಮ್ಮಿಂಗ್​​ ಪೂಲ್ ಉದ್ಘಾಟನೆ ಮಾಡಿದ್ದರು. ಆದರೆ ಇಂದು ಅವರ ಪುತ್ರ, ಸಚಿವ ದಿನೇಶ್ ಗುಂಡೂರಾವ್ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ವಿಮ್ಮಿಂಗ್​​ ಪೂಲ್​​ನಲ್ಲಿ ಸ್ವಿಮ್​ ಮಾಡಿದರು. ವಿಡಿಯೋ ನೋಡಿ.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಅಂತಾರಾಷ್ಟ್ರೀಯ ಮಟ್ಟದ ಈಜುಕೊಳದಲ್ಲಿ ಬೆಳ್ಳಂ ಬೆಳಗ್ಗೆ ಈಜಾಡಿ ರಿಲಾಕ್ಸ್ ಆಗಿದ್ದಾರೆ. ನಿನ್ನೆಯಿಂದ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿರೋ ಸಚಿವರು ಮಂಗಳೂರಿನ ಎಮ್ಮೆಕೆರೆ ಬಳಿ ಇರುವ ಸ್ವಿಮ್ಮಿಂಗ್ ಪೂಲ್​ನಲ್ಲಿ ಸ್ವಿಮ್ಮಿಂಗ್ ಮಾಡಿದರು. 24.94 ಕೋಟಿ ರೂ. ವೆಚ್ಚದ ಎಮ್ಮೆಕೆರೆಯ ಅಂತಾರಾಷ್ಟ್ರೀಯ ಈಜುಕೊಳವನ್ನು ಕಳೆದ ವರ್ಷ ನ. 24ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉದ್ಘಾಟಿಸಿದ್ದರು.

ದ.ಕ ಜಿಲ್ಲಾ ಪ್ರವಾಸದಲ್ಲಿರುವ ದಿನೇಶ್ ಗುಂಡೂರಾವ್ ಅವರು, ಸ್ಮಾರ್ಟ್‌ಸಿಟಿ ರಿವರ್‌ಫ್ರಂಟ್ ಯೋಜನೆಯ ತಡೆಗೋಡೆ ಕುಸಿತದ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಗ್ರ ತನಿಖೆಯಾಗಿ, ವಾರದೊಳಗೆ ವರದಿ ಸಲ್ಲಿಸಬೇಕೆಂದು ಸೂಚನೆ ನೀಡಿದ್ದಾರೆ.

ಮ್ತತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published on: Jul 06, 2024 11:24 AM