ಬಿಜೆಪಿ ಸರ್ಕಾರ ಇದ್ರೆ ರಸ್ತೆ ಗುಂಡಿಗಳು ಇರುವುದಿಲ್ವಾ? ಮಳೆಗಾಲದಲ್ಲಿ ರಸ್ತೆ ಗುಂಡಿ ಸಹಜವೆಂದ ಸಚಿವ ಪರಮೇಶ್ವರ

|

Updated on: May 25, 2024 | 11:23 AM

ನಮ್ಮವರೇ ಬೆಂಗಳೂರನ್ನು ಅವಹೇಳನ ಮಾಡಬಾರದು. ಬ್ರ್ಯಾಂಡ್ ಬೆಂಗಳೂರು ಅಲ್ಲ, ಗುಂಡಿ ಬೆಂಗಳೂರು ಎಂದೆಲ್ಲ ಅವಹೇಳನ ಮಾಡುವುದು ಸರಿಯಲ್ಲ. ಈ ರೀತಿ ಮಾಡುವ ಮೂಲಕ ಹೊರ ದೇಶದವರಿಗೆ, ಹೊರಗಿನವರಿಗೆ ಏನು ಸಂದೇಶ ನೀಡುತ್ತೀರಿ ಎಂದು ಬಿಜೆಪಿ ನಾಯಕರನ್ನು ಪರಮೇಶ್ವರ ಪ್ರಶ್ನಿಸಿದ್ದಾರೆ. ಪರಮೇಶ್ವರ ಹೇಳಿಕೆಯ ಪೂರ್ಣ ವಿಡಿಯೋ ಇಲ್ಲಿದೆ ನೋಡಿ.

ಬೆಂಗಳೂರು, ಮೇ 25: ಬೆಂಗಳೂರನ್ನು ಬ್ರ್ಯಾಂಡ್​ ಬೆಂಗಳೂರು (Brand Bengaluru) ಮಾಡಬೇಕೆಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಯೋಜನೆ ಹಮ್ಮಿಕೊಂಡಿದ್ದಾರೆ. ಹಾಗೆಂದು ಮಳೆಗಾಲದಲ್ಲಿ ರಸ್ತೆಗಳಲ್ಲಿ ಗುಂಡಿಗಳು ಉಂಟಾಗುವುದು ಸಹಜ ಎಂದು ಗೃಹ ಸಚಿವ ಜಿ ಪರಮೇಶ್ವರ (G Parameshwara) ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬ್ರ್ಯಾಂಡ್​ ಬೆಂಗಳೂರು ವಿಚಾರವಾಗಿ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದರು. ನಾವು ಸುಮ್ಮನೇ, ಬಿಜೆಪಿ ಕಾಲದಲ್ಲಿಯೂ ರಸ್ತೆ ಗುಂಡಿಗಳು ಆಗಿರಲಿಲ್ಲವಾ ಎಂದರೆ ಏನೋ ಸುಮ್ಮನೆ ಹೇಳಿಕೆ ಕೊಟ್ಟಂತಾಗುತ್ತದೆ. ಎಲ್ಲರ ಆಡಳಿತ ಕಾಲದಲ್ಲಿಯೂ ರಸ್ತೆಯಲ್ಲಿ ಗುಂಡಿಗಳಾಗುತ್ತವೆ ಎಂದು ಅವರು ಹೇಳಿದರು.

ಮಳೆಗಾಲದಲ್ಲಿ ರಸ್ತೆ ಗುಂಡಿಗಳು, ಪ್ರವಾಹ, ನೆರೆಯಂಥ ಪರಿಸ್ಥಿತಿಗಳು ಸಾಮಾನ್ಯ. ನಮ್ಮಲ್ಲಿ ಚರಂಡಿ ವ್ಯವಸ್ಥೆಗಳು ಸರಿ ಇಲ್ಲ. ಅನೇಕ ಸಮಸ್ಯೆಗಳು ಇರುತ್ತವೆ. ಅವುಗಳನ್ನೆಲ್ಲ ಸರಿಪಡಿಸಬೇಕು. ಇವೆಲ್ಲ ದೊಡ್ಡ ಕೆಲಸ ಕಾರ್ಯಗಳು. ಆದರೆ ಈ ಬಗ್ಗೆ ಅವಹೇಳನ ಸಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ: ಅಚ್ಚರಿಯ ಹೇಳಿಕೆ ನೀಡಿದ ಆಹಾರ ತಜ್ಞ, ಬೆಂಗಳೂರಿನ ಶೇ 87 ರಷ್ಟು ಪೊಲೀಸರು ಅನ್​​ಫಿಟ್

ನಮ್ಮವರೇ ಬೆಂಗಳೂರನ್ನು ಅವಹೇಳನ ಮಾಡಬಾರದು. ಬ್ರ್ಯಾಂಡ್ ಬೆಂಗಳೂರು ಅಲ್ಲ, ಗುಂಡಿ ಬೆಂಗಳೂರು ಎಂದೆಲ್ಲ ಅವಹೇಳನ ಮಾಡುವುದು ಸರಿಯಲ್ಲ. ಈ ರೀತಿ ಮಾಡುವ ಮೂಲಕ ಹೊರ ದೇಶದವರಿಗೆ, ಹೊರಗಿನವರಿಗೆ ಏನು ಸಂದೇಶ ನೀಡುತ್ತೀರಿ? ನಮ್ಮ ವಿರುದ್ಧ ಟೀಕೆ ಮಾಡಿ. ಆದರೆ, ಹೊರಗಿನವರಿಗೆ ತಪ್ಪು ಸಂದೇಶ ಕೊಡಬಾರದು. ಸ್ವಲ್ಪವಾದರೂ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಅವರು ಬಿಜೆಪಿ ವಿರುದ್ಧ ಕಿಡಿ ಕಾರಿದರು.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ