ಸಚಿವ ಹೆಚ್ಕೆ ಪಾಟೀಲರಿಗೆ ಸಿಎಂ ಆಗುವ ಯೋಗ ಕೂಡಿ ಬರಲಿ: ಇಮ್ಮಡಿ ಸಿದ್ದರಾಮೇಶ್ವರಶ್ರೀ
ಗದಗದಲ್ಲಿ ನಡೆದ ಸಿದ್ದರಾಮೇಶ್ವರ ಜಯಂತಿಯಲ್ಲಿ, ಚಿತ್ರದುರ್ಗದ ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳು ಸಚಿವ ಹೆಚ್.ಕೆ.ಪಾಟೀಲ್ ಅವರಿಗೆ ಮುಖ್ಯಮಂತ್ರಿಯಾಗುವ ಯೋಗವಿದೆ ಎಂದು ಹೇಳಿದ್ದಾರೆ. ಎಸ್.ಎಂ. ಕೃಷ್ಣರ ನಂತರ ಸಿಎಂ ಸ್ಥಾನಕ್ಕೆ ಪಾಟೀಲ್ ಅವರ ಹೆಸರು ಚರ್ಚೆಯಾಗಿತ್ತು ಎಂದು ಸ್ವಾಮೀಜಿ ನೆನಪಿಸಿಕೊಂಡರು. ತಡವಾಗಿಯಾದರೂ ಅವರಿಗೆ ಈ ಯೋಗ ಕೂಡಿಬರಲಿ ಎಂದು ಆಶಿಸಿದರು.
ಗದಗ, ಫೆಬ್ರವರಿ 02: ಸಚಿವ ಹೆಚ್.ಕೆ.ಪಾಟೀಲರಿಗೆ (H. K. Patil) ಸಿಎಂ ಆಗುವ ಯೋಗ ಕೂಡಿ ಬರಲಿ ಎಂದು ಬೋವಿ ಗುರುಪೀಠ ಮಠದ ಇಮ್ಮಡಿ ಸಿದ್ದರಾಮೇಶ್ವರಶ್ರೀ ಹೇಳಿದ್ದಾರೆ. ನಗರದಲ್ಲಿ ನಡೆದ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಚಿವ ಹೆಚ್.ಕೆ.ಪಾಟೀಲರಿಗೆ ಸಿಎಂ ಆಗುವ ಯೋಗ ಇತ್ತು. ಸಚಿವ ಹೆಚ್.ಕೆ.ಪಾಟೀಲರು 2-3 ಬಾರಿ ಸಿಎಂ ಆಗಿರುತ್ತಿದ್ದರು. ಎಸ್ಎಂ ಕೃಷ್ಣ ಬಳಿಕ ಸಿಎಂ ಸ್ಥಾನಕ್ಕೆ ಅವರ ಹೆಸರು ಕೇಳಿಬಂದಿತ್ತು. ತಡವಾಗಿಯಾದರೂ ಹೆಚ್.ಕೆ.ಪಾಟೀಲರಿಗೆ ಸಿಎಂ ಆಗುವ ಯೋಗ ಕೂಡಿಬರಲಿ ಎಂದು ಹೇಳಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.