Karnataka Budget Session: ಶಾಸಕ ಸಿದ್ದು ಸವದಿ ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ತಲುಪುತ್ತಿಲ್ಲವೆಂದಾಗ ಲಕ್ಷ್ಮಿ ಹೆಬ್ಬಾಳ್ಕರ್ ಸಿಡಿದೆದ್ದರು!

|

Updated on: Feb 22, 2024 | 4:21 PM

Karnataka Budget Session: ಡಿಬಿಟಿ ವ್ಯವಸ್ಥೆ ಮೂಲಕ ಹಣ ಟ್ರಾನ್ಸ್ ಫರ್ ಮಾಡುವುದರಲ್ಲಿ ನೀವು ಮೊದಲಿಗರೇನಲ್ಲ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅದನ್ನು ಯಾವತ್ತೋ ಜಾರಿಗೊಳಿಸಿದ್ದಾರೆ ಎಂದು ಹೇಳಿದಾಗ ಕೆಲ ಕಾಂಗ್ರೆಸ್ ಶಾಸಕರು ಸಚಿವೆಯ ನೆರವಿಗೆ ಧಾವಿಸುತ್ತಾರೆ.

ಬೆಂಗಳೂರು: ತೇರದಾಳದ ಬಿಜೆಪಿ ಶಾಸಕ ಸಿದ್ದು ಸವದಿ (Siddu Savadi) ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ನಡುವೆ ಸದನದಲ್ಲಿಂದು ಸರ್ಕಾರದ ಗ್ಯಾರಂಟಿ ಯೋಜನೆಗಳ (Guarantee Scheme) ಮೇಲೆ ಮಾತಿನ ಚಕಮಕಿ ನಡೆಯಿತು. ಗೃಹಲಕ್ಷ್ಮಿ ಯೋಜನೆ ಕುರಿತು ಮಾತಾಡಿದ ಹಿರಿಯ ಶಾಸಕರು, ಅದರ ಪ್ರಯೋಜನ ನೇರವಾಗಿ ಲಾಭಾರ್ಥಿಗಳನ್ನು ತಲುಪುತ್ತಿಲ್ಲ ಅಂತ ಗಂಭೀರವಾದ ಆರೋಪ ಮಾಡಿದಾಗ ಸಿಡಿದೆದ್ದ ಸಚಿವೆ ಹೆಬ್ಬಾಳ್ಕರ್,  ಶಾಸಕರು ಸುಳ್ಳು ಹೇಳುತ್ತಿದ್ದಾರೆ, ಗೃಹಲಕ್ಷ್ಮಿ ಯೋಜನೆಯ ಹಣ ಡಿಬಿಟಿ ವ್ಯವಸ್ಥೆ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗುತ್ತಿದೆ, ಪ್ರಥಮ ಬಾರಿಗೆ ನಾವು ಇಂಥ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ ಅನ್ನುತ್ತಾರೆ. ಡಿಬಿಟಿ ವ್ಯವಸ್ಥೆ ಮೂಲಕ ಹಣ ಟ್ರಾನ್ಸ್ ಫರ್ ಮಾಡುವುದರಲ್ಲಿ ನೀವು ಮೊದಲಿಗರೇನಲ್ಲ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅದನ್ನು ಯಾವತ್ತೋ ಜಾರಿಗೊಳಿಸಿದ್ದಾರೆ ಎಂದು ಹೇಳಿದಾಗ ಕೆಲ ಕಾಂಗ್ರೆಸ್ ಶಾಸಕರು ಸಚಿವೆಯ ನೆರವಿಗೆ ಧಾವಿಸುತ್ತಾರೆ.

ಆಗ ಮಧ್ಯಪ್ರವೇಶ ಮಾಡುವ ಸ್ಪೀಕರ್ ಯುಟಿ ಖಾದರ್, ನೀವು ಜಗಳ ಮಾಡಬೇಡಿ, ನಾನು ರಾಜಿಪಂಚಾಯ್ತಿ ಮಾಡ್ತೀನಿ, ಆಡಳಿತ ಪಕ್ಷ ಯಾವುದೇ ಯೋಜನೆ ತಂದರೂ ವಿರೋಧ ಪಕ್ಷದವರು ಅದನ್ನು ವಿರೋಧಿಸುತ್ತಾರೆ. ವಿರೋಧಿಸದೆ ಹೋದರೆ ಅವರಿಗೆ ಉಳಿಗಾಲವಿಲ್ಲ ಎನ್ನುತ್ತಾರೆ. ತಮ್ಮ ಮಾತು ಮುಂದುವರಿಸುವ ಸವದಿ, ಅನ್ನಭಾಗ್ಯದ ಸ್ಕೀಮ್ ಮೇಲೆ ಮಾತಾಡುತ್ತಾ ಸಿದ್ದರಾಮಯ್ಯ ಹೇಳಿದ ಶೈಲಿಯನ್ನು ಅಣಕಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on