ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ಸಹಕಾರ ಸಚಿವ ಕೆಎನ್ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರಂತೆ!
ರಾಜಣ್ಣ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷನಾಗುವ ಉಮ್ಮೇದಿ ಇದ್ದಿದ್ದರೆ ಇಷ್ಟು ದಿನಗಳ ಕಾಲ ಅವರು ಯಾಕೆ ಹೆಚ್ಚುವರಿ ಡಿಸಿಎಂಗಳು ಬೇಕೆಂದು ವರಾತ ತೆಗೆದಿದ್ದರು ಅನ್ನೋದು ದೊಡ್ಡ ಪ್ರಶ್ನೆಯಾಗುತ್ತದೆ. ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಡಿಸಿಎಂಗಳು ಬೇಕೆಂದು ಅವರು ಮಾಧ್ಯಮದವರ ಮುಂದೆ ಹೇಳುತ್ತಿದ್ದರೇ ಹೊರತು ಹೈಕಮಾಂಡ್ ಮುಂದೆ ಯಾವತ್ತೂ ಹೇಳಿಲ್ಲ. ಅವರಿಗೆ ಧೈರ್ಯ ಸಾಲದು ಅನ್ನೋದು ಬೇರೆ ವಿಚಾರ.
ಬೆಂಗಳೂರು: ಸಹಕಾರ ಸಚಿವ ಕೆ ಎನ್ ರಾಜಣ್ಣನವರ ಮನಸ್ಸಿನಲ್ಲಿ ಏನಿದೆ ಅಂತ ಕನ್ನಡಿಗರಿಗೆ ಗೊತ್ತಾಗುತ್ತಿಲ್ಲ ಮಾರಾಯ್ರೇ. ಯಾಕೆ ಅನ್ನೋದು ಅವರ ಮಾತಿನಲ್ಲೇ ಅರ್ಥವಾಗುತ್ತದೆ. ರಾಜಣ್ಣ ಹೇಳೋದನ್ನು ಕೇಳಿ, ಅವರು ಡಿಸಿಎಂ ಆಕಾಂಕ್ಷಿ ಅಲ್ಲವಂತೆ! ಹಾಗಾದರೆ ಹೆಚ್ಚು ಕಡಿಮೆ ಒಂದು ವರ್ಷದಿಂದ ಯಾರಿಗೋಸ್ಕರ ಮೂರು ಡಿಸಿಎಂಗಳು ಬೇಕು ಅಂತ ಮೋರ್ಚಾ ಶುರುವಿಟ್ಟುಕೊಂಡಿದ್ದೀರಿ ಮಹಾಸ್ವಾಮಿ? ಚಂದ್ರಶೇಖರ ಶ್ರೀಗಳು ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೇಳಿದರೆ ಅವರು ಏನನ್ನೂ ಹೇಳಲಿಲ್ಲ. ಹೆಚ್ಚುವರಿ ಡಿಸಿಎಂಗಳು ಬೇಕು ಅಂತ ಬಹಿರಂಗ ಹೇಳಿಕೆ ನೀಡಕೂಡದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದ್ದರೆಯೇ ಅಂತ ಕೇಳಿದರು ಅವರಿಂದ ನೇರ ಉತ್ತರವಿಲ್ಲ. ಅವರನ್ನೇ ಕೇಳಿ ನನ್ನನ್ಯಾಕೆ ಕೇಳುತ್ತೀರಿ ಅನ್ನುತ್ತಾರೆ. ಅವರ ಮನದಾಳದ ಮಾತು ಕೊನೆಯಲ್ಲಿ ಬರುತ್ತದೆ. ತನ್ನನ್ನು ಕೆಪಿಸಿಸಿ ಅಧ್ಯಕ್ಷ ಮಾಡಿದರೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಪಕ್ಷದ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ರಾಜಣ್ಣ ಹೇಳುತ್ತಾರೆ. ಸಿದ್ದರಾಮಯ್ಯ ಫೋನ್ ಮಾಡಿದ ಬಳಿಕ ರಾಜಣ್ಣನ ವರಸೆ ಬದಲಾಯಿತೇ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹೈಕಮಾಂಡ್ ಹಿಂದೆ ಹೇಳಿದ್ದನ್ನು ರಾಜ್ಯದ ನಾಯಕರಿಗೆ ಜ್ಞಾಪಿಸುತ್ತಿದ್ದೇನೆ, ಅಷ್ಟೇ: ಕೆಎನ್ ರಾಜಣ್ಣ, ಸಹಕಾರ ಸಚಿವ