ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಕೈವಾಡ ಎನ್ನುವವರಿಗೆ ಸಚಿವ ಶರಣಬಸಪ್ಪ ದರ್ಶನಾಪುರ ತಿರುಗೇಟು!

|

Updated on: May 15, 2024 | 6:49 PM

ಪ್ರಜ್ವಲ್ ತನ್ನ ಕೃತ್ಯಗಳನ್ನು ತಾನೇ ವಿಡಿಯೋ ಮಾಡಿಕೊಂಡಿದ್ದಾನೆ, ಅದನ್ನು ಮತ್ಯಾರೋ ಡೌನ್ ಲೋಡ್ ಮಾಡಿಕೊಂಡು ಯಾರಿಗೋ ಕೊಟ್ಟಿದ್ದಾರೆ, ಅದನ್ನು ಪಡೆದವರು ಹಂಚಿಕೆ ಮಾಡಿದ್ದಾರೆ, ಇದರಲ್ಲಿ ಶಿವಕುಮಾರ್ ಪಾತ್ರ ಎಲ್ಲಿಂದ ಬಂತು? ಎಂದು ದರ್ಶನಾಪುರ ಖಾರವಾಗಿ ಪ್ರಶ್ನಿಸಿದರು.

ಯಾದಗಿರಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ ಶರಣಬಸಪ್ಪ ದರ್ಶನಾಪುರ (Sahranabasappa Darshanapur) ಅವರು ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ (Prajwal Revanna case) ಸಂಬಂಧಿಸಿದಂತೆ ತಾರ್ಕಿಕ ಅಂಶಗಳನ್ನು ಮುಂದಿಟ್ಟರು. ಬಿಜೆಪಿ ನಾಯಕರು ಪ್ರಕರಣವನ್ನು ಸಿಬಿಐಗೆ (CBI) ಒಪ್ಪಿಸಬೇಕೆಂದು ಹೇಳುತ್ತಿರುವುದಕ್ಕೆ ಕಿಡಿಕಾರಿದ ಅವರು, ಎಲ್ಲ ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸುವುದಾದರೆ ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಯಾಕೆ ಬೇಕು? ಎಲ್ಲ ರಾಜ್ಯಗಳು ಸೇರಿ ಒಂದು ರೆಸೂಲೂಷನ್ ಪಾಸ್ ಮಾಡಿಕೊಂಡು ಪೊಲೀಸ್ ಇಲಾಖೆಗಳನ್ನು ಅಬಾಲಿಶ್ ಮಾಡಿ ಕೇಸುಗಳನ್ನೆಲ್ಲ ಸಿಬಿಐ ಒಪ್ಪಿಸುವ ಕೆಲಸ ಮಾಡೋದು ಬೆಟರ್ ಅನಿಸುತ್ತೆ ಎಂದು ದರ್ಶನಾಪುರ ಲೇವಡಿ ಮಾಡಿದರು. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಕೈವಾಡವಿದೆ ಎಂದು ವಿರೋಧ ಪಕ್ಷಗಳ ನಾಯಕರು ಮಾಡುತ್ತಿರುವ ಆರೋಗಳಿಗೆ ಸಚಿವ, ಅವರು ಹೇಳುವ ಪ್ರಕಾರ ಪ್ರಜ್ವಲ್ ರೇವಣ್ಣ, ಶಿವಕುಮಾರ್ ಸಲಹೆ ಮೇರೆಗೆ ಮಹಿಳೆಯರೊಂದಿಗೆ ಸೆಕ್ಸ್ ನಲ್ಲಿ ಭಾಗಿಯಾಗಿದ್ದನೆ? ಅಥವಾ ಅವನು ಹೆಂಗಸರೊಂದಿಗೆ ಇರುವಾಗ ಶಿವಕುಮಾರ್ ಕೆಮೆರಾ ತೆಗೆದುಕೊಂಡು ಹೋಗಿದ್ದರೆ? ಆಡುವ ಮಾತಿಗೆ ಆರ್ಥ ಬೇಡವೇ? ಎಂದರು. ಪ್ರಜ್ವಲ್ ತನ್ನ ಕೃತ್ಯಗಳನ್ನು ತಾನೇ ವಿಡಿಯೋ ಮಾಡಿಕೊಂಡಿದ್ದಾನೆ, ಅದನ್ನು ಮತ್ಯಾರೋ ಡೌನ್ ಲೋಡ್ ಮಾಡಿಕೊಂಡು ಯಾರಿಗೋ ಕೊಟ್ಟಿದ್ದಾರೆ, ಅದನ್ನು ಪಡೆದವರು ಹಂಚಿಕೆ ಮಾಡಿದ್ದಾರೆ, ಇದರಲ್ಲಿ ಶಿವಕುಮಾರ್ ಪಾತ್ರ ಎಲ್ಲಿಂದ ಬಂತು? ಎಂದು ದರ್ಶನಾಪುರ ಖಾರವಾಗಿ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಪ್ರಜ್ವಲ್ ರೇವಣ್ಣ ಪ್ರಕರಣ: ದೇವರಾಜೇಗೌಡ ಬಗ್ಗೆ ಕೇಳಿದ ಪ್ರಶ್ನೆಗೆ ಡಿಕೆ ಶಿವಕುಮಾರ್ ಸ್ಪಷ್ಟ ಉತ್ತರ ನೀಡಲಿಲ್ಲ

Follow us on