AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನಸಭೆಯಲ್ಲಿ ಟಿವಿ9 ಪ್ರಸಾರ ಮಾಡಿದ್ದ ನಿಮಗೊಂದು ಸಲಾಂ ಕಾರ್ಯಕ್ರಮದ ಬಗ್ಗೆ ಸಚಿವೆ ಶಶಿಕಲಾ ಜೊಲ್ಲೆ ಪ್ರಸ್ತಾಪ

ವಿಧಾನಸಭೆಯಲ್ಲಿ ಟಿವಿ9 ಪ್ರಸಾರ ಮಾಡಿದ್ದ ನಿಮಗೊಂದು ಸಲಾಂ ಕಾರ್ಯಕ್ರಮದ ಬಗ್ಗೆ ಸಚಿವೆ ಶಶಿಕಲಾ ಜೊಲ್ಲೆ ಪ್ರಸ್ತಾಪ

TV9 Web
| Updated By: sandhya thejappa

Updated on:Dec 13, 2021 | 3:58 PM

ಮೊದಲು ದಿನದ ಅಧಿವೇಶನ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಈ ವೇಳೆ ವಿಧಾನಸಭೆಯಲ್ಲಿ ಟಿವಿ9 ಕಾರ್ಯಕ್ರಮದ ಬಗ್ಗೆ ಶಶಿಕಲಾ ಜೊಲ್ಲೆ ಪ್ರಸ್ತಾಪ ಮಾಡಿದ್ದಾರೆ. ಟಿವಿ9ನಲ್ಲಿ ಪ್ರಸಾರ ಮಾಡಿದ್ದ ‘ನಿಮಗೊಂದು ಸಲಾಂ’ ಎಂಬ ಕಾರ್ಯಕ್ರಮವನ್ನು ಸಚಿವೆ ಶಶಿಕಲಾ ಜೊಲ್ಲೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.

ಇಂದಿನಿಂದ (ಡಿ.13) ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿದೆ. 10 ದಿನಗಳ ಕಾಲ ನಡೆಯುವ ಅಧಿವೇಶನಕ್ಕೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೊದಲು ದಿನದ ಅಧಿವೇಶನ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಈ ವೇಳೆ ವಿಧಾನಸಭೆಯಲ್ಲಿ ಟಿವಿ9 ಕಾರ್ಯಕ್ರಮದ ಬಗ್ಗೆ ಶಶಿಕಲಾ ಜೊಲ್ಲೆ ಪ್ರಸ್ತಾಪ ಮಾಡಿದ್ದಾರೆ. ಟಿವಿ9ನಲ್ಲಿ ಪ್ರಸಾರ ಮಾಡಿದ್ದ ‘ನಿಮಗೊಂದು ಸಲಾಂ’ ಎಂಬ ಕಾರ್ಯಕ್ರಮವನ್ನು ಸಚಿವೆ ಶಶಿಕಲಾ ಜೊಲ್ಲೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ನನ್ನ ಮಗನ ಕಾರ್ಯಕ್ರಮವನ್ನು ಟಿವಿ9ನಲ್ಲಿ ನಟ ಪುನೀತ್ ರಾಜ್​ಕುಮಾರ್ ನೋಡಿದ್ದರಂತೆ. ನನ್ನ ಮಗ ಮಡಿಕೇರಿಗೆ ಹೋಗಿದ್ದಾಗ ಪುನೀತ್ ರಾಜ್​ಕುಮಾರ್ ರೆಸಾರ್ಟ್​ನಲ್ಲಿ ಭೇಟಿಯಾಗಿ ಮಾತಾಡಿಸಿದ್ದರು. ನೀನು ಜ್ಯೋತಿ ಪ್ರಸಾದ್ ಅಲ್ವಾ ನಾನು ನಿಮ್ಮನ್ನು ನೋಡಿದ್ದೇನೆ. ಟಿವಿ9ನ ನಿಮಗೊಂದು ಸಲಾಂ ಕಾರ್ಯಕ್ರಮದಲ್ಲಿ ನಾನು ನೋಡಿದ್ದೇನೆ ಅಂತ ಪುನೀತ್ ಹೇಳಿದ್ದರು ಎಂದು ಸಂತಾಪ ಸೂಚನೆ ವೇಳೆ ಸಚಿವೆ ಶಶಿಕಲಾ ಜೊಲ್ಲೆ ಟಿವಿ9 ಕಾರ್ಯಕ್ರಮವನ್ನು ಪ್ರಸ್ತಾಪ ಮಾಡಿದ್ದಾರೆ.

Published on: Dec 13, 2021 03:57 PM