ಸಿದ್ದರಾಮಯ್ಯ ಮತ್ತು ಅಹಿಂದ ನಾಯಕರ ಜೊತೆ ಡಿನ್ನರ್ ಮೀಟಿಂಗ್ ಡೌನ್ ಪ್ಲೇ ಮಾಡಿದ ಸತೀಶ್ ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಯನ್ನು ಬದಲಾವಣೆಯು ಪಕ್ಷದ ಹೈಕಮಾಂಡ್ ಸುಪರ್ದಿಗೆ ಬಿಟ್ಟ ವಿಚಾರ. ಅದರ ಬಗ್ಗೆ ತಾವು ತಲೆಕೆಡಿಸಿಕೊಂಡಿಲ್ಲ ಮತ್ತು ಪಾರ್ಟಿ ನಡೆದಾಗ ಅದರ ಚರ್ಚೆಯೂ ಆಗಿಲ್ಲ, ಪಕ್ಷದ ಮುಖಂಡರು ಒಂದೆಡೆ ಸೇರಿದಾಗ ರಾಜಕೀಯ, ಸಂಘಟನೆ ಮತ್ತು ಪ್ರಸಕ್ತ ವಿದ್ಯಮಾನಗಳ ಚರ್ಚೆ ನಡೆಯುವುದು ಸ್ವಾಭಾವಿಕ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ: ಲೊಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಗುಟ್ಟು ಬಿಟ್ಟುಕೊಡಲೊಲ್ಲರು! ಹೊಸವರ್ಷದಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅಹಿಂದ ನಾಯಕರನ್ನು ತಮ್ಮ ಮನೆಗೆ ಡಿನ್ನರ್ ಮೀಟಿಂಗ್ಗೆ ಆಹ್ವಾನಿಸಿದ ಬಗ್ಗೆ ಕೇಳಿದಾಗ ಅದು ಮಹತ್ವದ ವಿಷಯವಲ್ಲ ಅನ್ನುತ್ತಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕಳೆದ 20 ತಿಂಗಳ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಹಲವಾರು ಸಲ ತನ್ನ ಮನೆಗೆ ಬಂದಿದ್ದಾರೆ ಮತ್ತು ತಾನು ಅವರ ಮನೆಗೆ ಹೋಗಿದ್ದೇನೆ, ಹೊಸ ವರ್ಷದ ಸಂದರ್ಭವಿದ್ದ ಕಾರಣ ಎಲ್ಲರ ಜೊತೆಗೂಡಿ ಊಟ ಮಾಡಿದೆವು ಎಂದು ಅವರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಮೀಟಿಂಗ್: ಸಿಎಂ ಸೇರಿ ಹಲವರು ಭಾಗಿ