ನನ್ನ ಮೇಲೆ ಪ್ರೀತಿ ಇಲ್ಲ ಎಂದ ಸಿಎಂ, ಜ್ಯೋತಿ ಮೇಲೆ ಕೈಯಿಟ್ಟು ಪ್ರಮಾಣ ಮಾಡಿದ ಸಚಿವ

Updated on: Sep 26, 2025 | 7:53 PM

ಬೆಂಗಳೂರಿನ ಖಾಸಗಿ ಕಾಲೇಜು ಉದ್ಘಾಟನಾ ಸಮಾರಂಭದ ವೇಳೆ ಸಿಎಂ ಹಾಗೂ ಸಚಿವರ ನಡುವೆ ಸ್ವಾರಸ್ಯಕರ ಮಾತುಗಳು ನಡೆದ ಪ್ರಸಂಗ ನಡೆದಿದೆ. ಸಿಎಂ ಮೇಲೆ ಸಚಿವ ಸುಧಾಕರ್ ಗೆ ಹೆಚ್ಚಿನ ಪ್ರೀತಿ ಇದೆ ಎಂದು ಶಾಸಕ‌ ಗೋವಿಂದಪ್ಪ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಇಲ್ಲ ನನ್ನ ಮೇಲೆ ಪ್ರೀತಿ ಇಲ್ಲ ಎಂದು ತಮಾಷೆ ಮಾಡಿದ್ದಾರೆ. ಆಗ ಕೂಡಲೇ ಸಚಿವ ಸುಧಾಕರ್ ಬೆಳಗುತ್ತಿದ್ದ ಜ್ಯೋತಿ ಮೇಲೆ ಕೈಯಿಟ್ಟು ಪ್ರಮಾಣ ನಿಮ್ಮ ಮೇಲೆ ತುಂಬ ಪ್ರೀತಿ ಇದೆ ಸರ್ ಎಂದಿದ್ದಾರೆ. ಬಳಿಕ ಸಿಎಂ, ಸುಧಾಕರ್ ತಲೆ ಸವರಿ ನಗೆ ಚಟಾಕೆ ಹಾರಿಸಿದರು.

ಬೆಂಗಳೂರು, (ಸೆಪ್ಟೆಂಬರ್ 26): ಬೆಂಗಳೂರಿನ ಖಾಸಗಿ ಕಾಲೇಜು ಉದ್ಘಾಟನಾ ಸಮಾರಂಭದ ವೇಳೆ ಸಿಎಂ ಹಾಗೂ ಸಚಿವರ ನಡುವೆ ಸ್ವಾರಸ್ಯಕರ ಮಾತುಗಳು ನಡೆದ ಪ್ರಸಂಗ ನಡೆದಿದೆ. ಸಿಎಂ ಮೇಲೆ ಸಚಿವ ಸುಧಾಕರ್ ಗೆ ಹೆಚ್ಚಿನ ಪ್ರೀತಿ ಇದೆ ಎಂದು ಶಾಸಕ‌ ಗೋವಿಂದಪ್ಪ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಇಲ್ಲ ನನ್ನ ಮೇಲೆ ಪ್ರೀತಿ ಇಲ್ಲ ಎಂದು ತಮಾಷೆ ಮಾಡಿದ್ದಾರೆ. ಆಗ ಕೂಡಲೇ ಸಚಿವ ಸುಧಾಕರ್ ಬೆಳಗುತ್ತಿದ್ದ ಜ್ಯೋತಿ ಮೇಲೆ ಕೈಯಿಟ್ಟು ಪ್ರಮಾಣ ನಿಮ್ಮ ಮೇಲೆ ತುಂಬ ಪ್ರೀತಿ ಇದೆ ಸರ್ ಎಂದಿದ್ದಾರೆ. ಬಳಿಕ ಸಿಎಂ, ಸುಧಾಕರ್ ತಲೆ ಸವರಿ ನಗೆ ಚಟಾಕೆ ಹಾರಿಸಿದರು.