ವೇಣುಗೋಪಾಲ್ ಹೇಳಿದ್ದಾರೆ: ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು

ವೇಣುಗೋಪಾಲ್ ಹೇಳಿದ್ದಾರೆ: ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು

Anil Kalkere
| Updated By: ರಮೇಶ್ ಬಿ. ಜವಳಗೇರಾ

Updated on:Sep 18, 2024 | 4:15 PM

ಬೆಂಗಳೂರಿನಲ್ಲಿ ಡ್ರಗ್ಸ್​ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರು ಮತ್ತು ಪೊಲೀಸ್​ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಡ್ರಗ್ಸ್​ ಹಾವಳಿ ತಡೆಯಲು ತೆಗೆದುಕೊಳ್ಳಲಾಗುವ ಕ್ರಮಗಳ ಬಗ್ಗೆ ತಿಳಿಸಿದರು. ಆದ್ರೆ, ಸುದ್ದಿಗೋಷ್ಠಿಗೂ ಮುನ್ನ ಮುಖ್ಯಮಂತ್ರಿ ಮತ್ತು ಸಚಿವರು ಆಡಿರುವ ಪಿಸು ಮಾತು ವೈರಲ್ ಆಗಿದೆ.

ಬೆಂಗಳೂರು, (ಸೆಪ್ಟೆ.ಬರ್ 18): ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು (ಸೆಪ್ಟೆಂಬರ್ 18) ಸುದ್ದಿಗೋಷ್ಠಿ ನಡೆಸಿ ಅನೇಕ ವಿಚಾರಗಳ ಬಗ್ಗೆ ಮಾತನಾಡಿದರು. ಇದೇ ವೇಳೆ ರಾಹುಲ್​ ಗಾಂಧಿ ನಾಲಗೆ ಕತ್ತರಿಸಿದ್ರೆ 11 ಲಕ್ಷ ಕೊಡ್ತೀನಿ ಎಂದಿರುವ ಶಿವಸೇನೆ‌ ನಾಯಕ ಸಂಜಯ್ ಗಾಯಕ್ವಾಡ್​ ಅವರನ್ನು ಬಂಧಿಸಬೇಕೆಂದು ಸಿಎಂ ಮಹಾರಾಷ್ಟ್ರ ಸರ್ಕಾರಕ್ಕೆ‌ ಆಗ್ರಹಿಸಿದ್ದಾರೆ. ಇನ್ನು ಈ ಸುದ್ದಿಗೋಷ್ಠಿಗೂ ಮುನ್ನ ಸಿಎಂ ಮತ್ತು ಸಚಿವರ ನಡುವೆ ಪಿಸು ಮಾತು ಸಂಚಲನ ಮೂಡಿಸಿದೆ.

ರಾಹುಲ್‌ ಗಾಂಧಿ ವಿರುದ್ಧ ಹೇಳಿಕೆ ನೀಡಿರುವ ಬಗ್ಗೆ ಮಾತಾಡಬೇಕು. ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ ಎಂದ ಸಿಎಂ ಸಿದ್ದರಾಮಯ್ಯ ಅವರು ಸಚಿವರಿಗೆ ತಿಳಿಸಿದರು. ಈ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಮೈಕ್ ಇದೆ‌ ಸರ್. ಹಾಗೇ ಮಾತಾಡ್ಬೇಕು ಆಮೇಲೆ ಅಷ್ಟೇ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಹೌದು, ನೀನು ಹೋಂ ಮಿನಿಸ್ಟರ್ ಅದಕ್ಕೆ ನನ್ನ ಪಕ್ಕದಲ್ಲಿ ಕೂರಿಸಿಕೊಂಡಿದ್ದು ಎಂದು ನಕ್ಕು ಸುಮ್ಮನಾದರು. ಸುದ್ದಿಗೋಷ್ಠಿಗೂ ಮುನ್ನ ಮುಖ್ಯಮಂತ್ರಿ ಮತ್ತು ಸಚಿವರು ಪಿಸು ಮಾತು ವೈರಲ್ ಆಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published on: Sep 18, 2024 04:13 PM