ನದಿಯಲ್ಲಿ ಗಣಪತಿ ವಿಸರ್ಜನೆಗೆ ಅವಕಾಶ ನೀಡದ ಸರ್ಕಾರ: ಯುವಕರು ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ
ವೈರಲ್ ಆಗಿರುವ ವಿಡಿಯೋದಲ್ಲಿ ಪೂರ್ವ ಗೋದಾವರಿ ಜಿಲ್ಲೆಯ ಕಡಿಯಂ ಮಂಡಲದಲ್ಲಿ ಮಕ್ಕಳು, ಯುವಕರು ಈ ಸಾಹಸ ಮೆರೆದಿದ್ದಾರೆ. ತಾವು ಪ್ರತಿಷ್ಠಾಪಿಸಿದ್ದ ಪುಟ್ಟ ಗಣಪನನ್ನು ಒಂಬತ್ತು ದಿನಗಳ ಕಾಲ ಪೂಜೆ ಮಾಡಿ, ಸಂಭ್ರಮಿಸಿದ್ದರು. ಆದರೆ ಇನ್ನೇನು ವಿಸರ್ಜನೆ ಸಮಯ ಬಂದಾಗ ಸ್ಥಳೀಯ ಆಡಳಿತವು ಅನುಮತಿ ನೀಡಿಲ್ಲ. ಹಾಗಾಗಿ ಅವರು ಈ ಬದಲಿ ವ್ಯವಸ್ಥೆ ಬಗ್ಗೆ ಯೋಚಿಸಿದರು.
ಕಳೆದ ಹತ್ತು ದಿನಗಳ ಕಾಲ ತೆಲುಗು ರಾಜ್ಯಗಳಲ್ಲಿ ಗಣೇಶನ ಹಬ್ಬ ಜೋರುಜೋರಾಗಿ ನಡೆದಿದೆ. ಈಗೇನಿದ್ದರೂ ಗಣಪಯ್ಯನ್ನು ವಿಸರ್ಜನೆ ಮಾಡುವ ಕಾರ್ಯಕ್ರಮ. ಇದೂ ವಿಜೃಂಭಣೆಯಿಂದ ನಡೆಯುತ್ತಿದೆ. ಮನೆಯ ಪೂಜಾ ಕೊಠಡಿಗಳಲ್ಲಿ, ಮನೆಯ ಹೊರಗೆ ಬಟಾಬಯಲಿನಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಗಣಪನಿಗೆ ಟಾಟಾ ಬೈ ಹೇಳುವ ಸಮಯ ಬಂದಿದೆ. ಕಾಲಕ್ಕೆ ತಕ್ಕಂತೆ ಇಂದಿನ ಯುವ ಜನತೆ ಗಣಪನಿಗೆ ವಿಶೇಷವಾಗಿ ಗುಡ್ ಬೈ ಹೇಳಿದ್ದಾರೆ. ಮುದ್ದು ಗಣಪ ಸಹ ಗಂಗೆಯ ಮಡಿಲಿಗೆ ಜಾರುತ್ತಿದ್ದಾನೆ.
ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಬಾಲಗಣಪನ ವಿಗ್ರಹವನ್ನು ವಿಶಿಷ್ಠವಾದ ಡ್ರೋನ್ ನಲ್ಲಿ ಕೂಡಿಸಿ, ವಿಸರ್ಜನೆ ಮಾಡಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಪೂರ್ವ ಗೋದಾವರಿ ಜಿಲ್ಲೆಯ ಕಡಿಯಂ ಮಂಡಲದಲ್ಲಿ ಮಕ್ಕಳು, ಯುವಕರು ಈ ಸಾಹಸ ಮೆರೆದಿದ್ದಾರೆ. ತಾವು ಪ್ರತಿಷ್ಠಾಪಿಸಿದ್ದ ಪುಟ್ಟ ಗಣಪನನ್ನು ಒಂಬತ್ತು ದಿನಗಳ ಕಾಲ ಪೂಜೆ ಮಾಡಿ, ಸಂಭ್ರಮಿಸಿದ್ದರು. ಆದರೆ ಇನ್ನೇನು ವಿಸರ್ಜನೆ ಸಮಯ ಬಂದಾಗ ಸ್ಥಳೀಯ ಆಡಳಿತವು ಅನುಮತಿ ನೀಡಿಲ್ಲ. ಹಾಗಾಗಿ ಅವರು ಈ ಬದಲಿ ವ್ಯವಸ್ಥೆ ಬಗ್ಗೆ ಯೋಚಿಸಿದರು.
Also Read: ಇದೆಂತಹ ಅವ್ಯವಸ್ಥೆ -ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಗಣೇಶನ ವಿಗ್ರಹವನ್ನು ನದಿ ನೀರಿನಲ್ಲಿ ಮುಳುಗಿಸಲು, ಡ್ರೋನ್ ಅನ್ನು ಬಳಸಲಾಯಿತು. ಇದಕ್ಕೆ ಡ್ರೋಣ್ ನಿಪುಣ ವಿವೇಕ್ ನೆರವಾಗಿದ್ದಾನೆ. ಡ್ರೋನ್ ಮೂಲಕ ವಿನಾಯಕ ಮೂರ್ತಿಯನ್ನು ನದಿಯ ಮಧ್ಯಕ್ಕೆ ಕೊಂಡೊಯ್ದು ಅಲ್ಲಿ ಮುಳುಗಿಸಿದಾಗ ಮಕ್ಕಳು ಪುಳಕಿತರಾದರು. ಬೊಜ್ಜು ಗಣೇಶ ಡ್ರೋನ್ ಮೂಲಕ ನೀರಿನಲ್ಲಿ ಮುಳುಗಿಸುತ್ತಿರುವುದನ್ನು ಕಂಡು ಸ್ಥಳೀಯ ಭಕ್ತರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ