Exercise Cobra Warrior: ಯುಕೆ ಎಕ್ಸರ್ಸೈಸ್ ಕೋಬ್ರಾ ವಾರಿಯರ್ ಏರ್ ಶೋನಲ್ಲಿ ಕರಾಮತ್ತು ಪ್ರದರ್ಶಿಸಿದ ಭಾರತೀಯ ವಾಯುಪಡೆಯ ಮಿರಾಜ್ 2000

ಅರುಣ್​ ಕುಮಾರ್​ ಬೆಳ್ಳಿ Edited By:

Updated on: Mar 23, 2023 | 10:55 AM

ಭಾರತ, ಫಿನ್ಲ್ಯಾಂಡ್, ಸ್ವೀಡನ್, ದಕ್ಷಿಣ ಆಫ್ರಿಕ, ಅಮೆರಿಕವಲ್ಲದೆ ಯುಕೆ ರಾಯಲ್ ಏರ್ಫೋಸ್ ಪಡೆಯ ಯುದ್ದ ವಿಮಾನಗಳು ಸಹ ಶೋನಲ್ಲಿ ಭಾಗವಹಿಸಿವೆ.

ಲಂಡನ್: ನಮ್ಮ ಬೆಂಗಳೂರು ನಗರದ ಯಲಹಂಕ ವಾಯುನೆಲೆಯಲ್ಲಿ (Yelahanka Airbase) ಪ್ರತಿವರ್ಷ ನಡೆಯುವ ಏರ್ ಶೋನಂತೆ ಯುನೈಟೆಡ್ ಕಿಂಗ್ಡಮ್ ನ ರಾಯಲ್ ಏರ್ಪೋರ್ಸ್ ಬೇಸ್ ಇರುವ ವಾಡಿಂಗ್ಟನ್ ನಲ್ಲೂ ಎಕ್ಸರ್ಸೈಸ್ ಕೋಬ್ರಾ ವಾರಿಯರ್ (Exercise Cobra Warrior) ಹೆಸರಲ್ಲಿ ಇಂಥದೊಂದು ಶೋ ನಡೆಯುತ್ತದೆ. ಈ ಬಾರಿ ಭಾರತೀಯ ವಾಯಸೇನೆಯ (Indian Air Force) 145 ಯೋಧರನ್ನು ಒಳಗೊಂಡ ಒಂದು ತಂಡ ಇದರಲ್ಲಿ ಭಾಗವಹಿಸಿದೆ. ಎಕ್ಸರ್ಸೈಸ್ ಕೋಬ್ರಾ ವಾರಿಯರ್ ರಕ್ಷಣಾ ವಲಯಕ್ಕೆ ಸೇರಿದ ವಿಮಾನಗಳ ಶಕ್ತಿ ಪ್ರದರ್ಶನ ಶೋ ಆಗಿದ್ದು ಐಎಎಫ್ ನ ಮಿರಾಜ್ 2000 ತನ್ನ ಯುದ್ಧ ಕ್ಷಮತೆಯನ್ನು ಪ್ರದರ್ಶಿಸಿದೆ. ಭಾರತ, ಫಿನ್ಲ್ಯಾಂಡ್, ಸ್ವೀಡನ್, ದಕ್ಷಿಣ ಆಫ್ರಿಕ, ಅಮೆರಿಕವಲ್ಲದೆ ಯುಕೆ ರಾಯಲ್ ಏರ್ಫೋಸ್ ಪಡೆಯ ಯುದ್ದ ವಿಮಾನಗಳು ಸಹ ಶೋನಲ್ಲಿ ಭಾಗವಹಿಸಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 23, 2023 10:32 AM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.