ಎಂತೆಂಥಾ ಜನ ಇರ್ತಾರೆ ನೋಡಿ..,ಟೊಮೆಟೊ ಬೆಳೆಗೆ ವಿಷಹಾಕಿದ ದುಷ್ಕರ್ಮಿಗಳು
ಎಂತೆಂಥಾ ಜನ ಇರ್ತಾರೆ ನೋಡಿ..ಕೆಲ ದಿನಗಳಲ್ಲೇ ಕೈಗೆ ಬರಬೇಕಿದ್ದ ಟೊನೆಟೊ ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡಿದ್ದಾರೆ. ಇನ್ನೇನು ಕೈಗೆ ಬರಬೇಕಿದ್ದ ಟೊಮೆಟೊ ಬೆಳಗೆ ದುರ್ಷಮಿಗಳು ಕಳೆನಾಶಕ ಸಿಂಪಡಿಸಿ ನಾಶಪಡಿಸಿದ್ದಾರೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಮೊಸಳೆಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೈಗೆ ಬಂದ ಫಲಸ ನಾಶಪಡಿಸಿದ್ದಕ್ಕೆ ರೈತ ಕಂಗಾಲಾಗಿದ್ದಾನೆ.
ಮಂಡ್ಯ, (ಫೆಬ್ರವರಿ 04): ಕೆಲ ದಿನಗಳಲ್ಲಿ ಕೈಗೆ ಬರಬೇಕಿದ್ದ ಟೊಮೆಟೊ ಬೆಳೆಗೆ ಕಳೆನಾಶಕ ಸಿಂಪಡಿಸಿ ಸಂಪೂರ್ಣವಾಗಿ ನಾಶ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಮೊಸಳೆಕೊಪ್ಪಲು ಗ್ರಾಮದಲ್ಲಿ ನಡೆದಿದೆ. ರೈತ ಸಂತೋಷ್ ಎನ್ನುವರು ಒಂದು ಎಕರೆಯಲ್ಲಿ ಟೊಮೆಟೊ ಬೆಳೆದಿದ್ದರು, ಇನ್ನೇನು ಕೆಲವೇ ದಿನಗಳಲ್ಲಿ ಟೊಮೆಟೊ ಫಸಲ ಕೈಗೆ ಬರಬೇಕಿತ್ತು. ಆದರೆ, ಯಾರೋ ದುಷ್ಕರ್ಮಿಗಳು, ಕಳೆನಾಶಕ ಸಿಂಪಡಿಸಿ ಟೊಮೆಟೊ ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡಿ ವಿಕೃತಿ ಮೆರೆದಿದ್ದಾರೆ. ಲಕ್ಷಾಂತರ ರೂ ಬೆಳೆ ನಾಶವಾಗಿದ್ದಕ್ಕೆ ರೈತ ಸಂತೋಷ್ ಕಂಗಾಲಾಗಿದ್ದಾರೆ.