ಕೇವಲ ಹತ್ತೇ ಹತ್ತು ಸಾವಿರಕ್ಕೆ ವೃದ್ಧೆಯನ್ನ ಹೊರಗೆ ಹಾಕಿ ಮನೆ ಸೀಜ್ ಮಾಡಿದ ಮೌಲಾಸಾಬ್
ಮಧ್ಯೆ ಮೈಕ್ರೋ ಫೈನಾನ್ಸ್ ಉಪಟಳ, ಕಿರುಕುಳ ಮುಂದುವರೆದಿದ್ದು, ಆತ್ಮಹತ್ಯೆ ಸರಣಿ ಸಹ ಮುಂದುವರೆದಿವೆ. ಇನ್ನು ಇದರ ಮಧ್ಯ ಬಡ್ಡಿದಂಧೆಕೋರರ ಹಾವಳಿ ಶುರುವಾಗಿದೆ. ಕೇವಲ ಹತ್ತೇ ಹತ್ತು ಸಾವಿರ ರೂಪಾಯಿ ಸಾಲಕ್ಕೆ ಮನೆಗೆ ಬೀಗ ಹಾಕಿದ್ದಾನೆ. ವೃದ್ಧೆ ಎಂದು ಸ್ವಲ್ಪ ಕನಿಕರ ತೋರದೇ ಮನೆಯಿಂದ ಹೊರಗೆ ಹಾಕಿ ಬೀಗ ಹಾಕಿದ್ದಾನೆ.
ಗದಗ, (ಫೆಬ್ರವರಿ 04): ಮೈಕ್ರೋ ಫೈನಾನ್ಸ್ ಹಾವಳಿ ಮಧ್ಯ ಬಡ್ಡಿದಂಧೆಕೋರರ ಉಪಟಳ ಶುರುವಾಗಿದೆ. ಸಹೋರದನ ಚಿಕಿತ್ಸೆಗಾಗಿ ವೃದ್ಧೆಯೊಬ್ಬರು 10 ಸಾವಿರ ಸಾಲ ಪಡೆದಿದ್ದು, ಅದನ್ನು ಮರುಪಾವತಿಸದಕ್ಕೆ ಆಕೆಯನ್ನು ಮನೆಯಿಂದ ಆಚೆ ಹಾಕಿರುವ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ. ವೃದ್ಧೆ ಉಷಾದೇವಿ ಎನ್ನುವರು ಸಹೋದರನ ಚಿಕಿತ್ಸೆಗೆಂದು ಮೌಲಾಸಾಬ್ ಬಳಿ ಬಡ್ಡಿಗೆಂದು 10 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದಳು. ಈಗ ಬಡ್ಡಿ ದಂಧೆಕೋರ ಮೌಲಾಸಾಬ್ 10 ಸಾವಿರ ರೂಪಾಯಿ ಸಾಲಕ್ಕೆ ವೃದ್ಧೆ ಉಷಾದೇವಿ ಮನೆಗೆ ಬೀಗ ಹಾಕಿದ್ದಾನೆ. ಸ್ವಲ್ಪ ದಿನ ಕಾಲಾವಕಾಶ ಕೇಳಿದರೂ ಸಹ ಕೇಳದ ಮೌಲಾಸಾಬ್, ವೃದ್ಧೆ ಉಷಾದೇವಿಯನ್ನು ಹೊರಗೆ ಹಾಕಿ ಮನೆಗೆ ಬೀಗ ಹಾಕಿದ್ದಾನೆ. ಕೇವಲ ಹತ್ತೇ ಹತ್ತು ಸಾವಿರ ರೂಪಾಯಿ ವೃದ್ಧೆಯನ್ನು ಈ ಸ್ಥಿತಿ ತಂದಿಟ್ಟಿರುವುದು ದುರಂತವೇ ಸರಿ.