3 ದಶಕಗಳ ಬಳಿಕ ಮಂಗಳೂರು ಕಡಲ ತೀರದಲ್ಲಿ ಕಾಣಿಸಿಕೊಂಡ ಕಡಲಾಮೆ

3 ದಶಕಗಳ ಬಳಿಕ ಮಂಗಳೂರು ಕಡಲ ತೀರದಲ್ಲಿ ಕಾಣಿಸಿಕೊಂಡ ಕಡಲಾಮೆ

ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ವಿವೇಕ ಬಿರಾದಾರ

Updated on:Feb 04, 2025 | 2:52 PM

ಮಂಗಳೂರಿನ ಸಸಿಹಿತ್ಲು ಕಡಲ ತೀರದಲ್ಲಿ ಮೂರು ದಶಕಗಳ ಬಳಿಕ ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲೆ ಕಡಲಾಮೆಗಳು ಮೊಟ್ಟೆ ಇಟ್ಟಿರುವುದು ಕಂಡುಬಂದಿದೆ. ಸ್ಥಳೀಯ ಮೀನುಗಾರರು ಮೊಟ್ಟೆಗಳ ರಕ್ಷಣೆಗೆ ನಿಗಾ ವಹಿಸುತ್ತಿದ್ದಾರೆ. ಈ ಹಿಂದೆ ಮಂಗಳೂರಿನ ಸುತ್ತಮುತ್ತಲಿನ 12 ಕಡೆಗಳಲ್ಲಿ ಕಡಲಾಮೆ ಮೊಟ್ಟೆಗಳು ಪತ್ತೆಯಾಗಿದ್ದವು. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಈ ಆಮೆಗಳನ್ನು ರಕ್ಷಿಸಲಾಗಿದೆ. ತಾವು ಹುಟ್ಟಿದ ಸ್ಥಳಕ್ಕೆ ಮರಳಿ ಮೊಟ್ಟೆ ಇಡುವ ಈ ಆಮೆಗಳ ಮರಳುವಿಕೆ ವಿಶೇಷವಾಗಿದೆ.

ಮಂಗಳೂರು, ಫೆಬ್ರವರಿ 04: ಸುಮಾರು ಮೂರು ದಶಕಗಳ ಬಳಿಕ ಮಂಗಳೂರು ಹೊರವಲಯದ ಸಸಿಹಿತ್ಲು ಕಡಲ ತೀರದಲ್ಲಿ ಅಳಿವಿನಚಿನ ಅತ್ಯಂತ ಅಪರೂಪದ ಒಲೀವ್ ರಿಡ್ಲೆ ಕಡಲಾಮೆಗಳು ಕಾಣಿಸಿಕೊಂಡಿವೆ. ಕಡಲಾಮೆ ಒಲೀವ್ ರಿಡ್ಲೆ ಮಂಗಳೂರು ಕಡಲ ಕಿನಾರೆಗೆ ಬಂದು ಮೊಟ್ಟೆ ಇಟ್ಟಿವೆ. ಮಂಗಳೂರು ಹೊರವಲಯದ ಸಸಿಹಿತ್ಲು ಕಡಲ ತಡಿಗೆ ಬಂದು ಮೊಟ್ಟೆ ಇಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೊಟ್ಟೆಗಳ ಸಂರಕ್ಷಣೆಗೆ ಸ್ಥಳೀಯ ಮೀನುಗಾರರ ವಿಶೇಷ ನಿಗಾ ವಹಿಸಿದ್ದಾರೆ. ಈ ಹಿಂದೆ ಮಂಗಳೂರಿನ ಸುತ್ತ ಮುತ್ತ ಸುಮಾರು 12 ಕಡೆ ಕಡಲಾಮೆ ಮೊಟ್ಟೆಗಳು ಪತ್ತೆಯಾಗಿದ್ದವು. ಈ ಹಿಂದೆ ಮಂಗಳೂರಿನ ಕಡಲತಡಿಯ ತಣ್ಣೀರು ಬಾವಿ, ಸಸಿಹಿತ್ಲು, ಬೆಂಗ್ರೆ ಪ್ರದೇಶಕ್ಕೆ ಕಡಲಾಮೆಗಳು ಬರುತ್ತಿದ್ದವು. ಅಳಿವಿನಂಚಿನಲ್ಲಿದ್ದ ಒಲೀವ್ ರಿಡ್ಲೆ ತಳಿಯ ಕಡಲಾಮೆಗಳನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನುಸೂಚಿ 1 ರ ಅಡಿಯಲ್ಲಿ ರಕ್ಷಣೆ ಮಾಡಲಾಗುತ್ತದೆ. ಒಲೀವ್ ರಿಡ್ಲೆ ಕಡಲಾಮೆಗಳ ವಿಶೇಷವೆಂದರೆ ತಾವು ಹುಟ್ಟಿದ ಜಾಗಕ್ಕೆ ಮರಳಿ ಬಂದು ಮೊಟ್ಟೆಯಿಡುತ್ತವೆ.

Published on: Feb 04, 2025 02:51 PM