ಅಶೋಕಣ್ಣ ತನ್ನ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣದ ಬಗ್ಗೆ ಯೋಚಿಸಲಿ, ಬೇರೆಯವರ ತಟ್ಟೆಯಲ್ಲಿನ ನೊಣದ ಬಗ್ಗೆ ಬೇಡ: ಲಕ್ಷ್ಮಣ ಸವದಿ
ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯವಿಲ್ಲ, ಸಿದ್ದರಾಮಯ್ಯ ಬಣ ಶಿವಕುಮಾರ್ ಬಣ ಅಂತ ಹೇಳೋದೆಲ್ಲ ಸುಳ್ಳು. ಕಾಂಗ್ರೆಸ್ ಪಕ್ಷ ಐದು ವರ್ಷಗಳ ಅವಧಿಯನ್ನು ಅಡೆತಡೆಯಿಲ್ಲದೆ ಪೂರ್ಣಗೊಳಿಸುವುದರ ಜೊತೆಗೆ 2028 ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲೂ ನಿಚ್ಚಳ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಬೆಂಗಳೂರು: ವಿರೋಧ ಪಕ್ಷದ ನಾಯಕ ಆರ್ ಅಶೋಕ ಪಕ್ಷದ ವರಿಷ್ಠರನ್ನು ಸಂತೋಷವಾಗಿಡಲು ಸರ್ಕಾರದ ಬಗ್ಗೆ ಏನನ್ನಾದರೂ ಹೇಳುತ್ತಿರಬೇಕಾಗುತ್ತದೆ, ಇಲ್ಲದಿದ್ದರೆ ಯಾಕೆ ಸುಮ್ಮನಿರುವೆ ಅಂತ ಪ್ರಶ್ನಿಸುತ್ತಾರೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳಿದರು. ತಾನು ಮೊದಲು ಬಿಜೆಪಿಯಲ್ಲಿದ್ದ ಕಾರಣ ಈಗಲೂ ಅಲ್ಲಿ ಸ್ನೇಹಿತರಿದ್ದಾರೆ, ಅವರು ಹೇಳುವ ಪ್ರಕಾರ ಪಕ್ಷದ ಅಧ್ಯಕ್ಷ ಸ್ಥಾನದ ಜೊತೆ ವಿರೋಧ ಪಕ್ಷದ ನಾಯಕನ ಸ್ಥಾನವೂ ಅಲ್ಲಾಡುತ್ತಿದೆ, ಬಿಜೆಪಿ ನಾಯಕರು ಎರಡೂ ಸ್ಥಾನಗಳಿಗೆ ಟವೆಲ್ ಹಾಕಿದ್ದಾರೆ, ತಾನು ಅಶೋಕ ಅವರಿಗೆ ನೀಡುವ ಸಲಹೆಯೆಂದರೆ, ತಮ್ಮ ತಟ್ಟೆಯಲ್ಲಿ ಸತ್ತುಬಿದ್ದಿರುವ ಹೆಗ್ಗಣವನ್ನು ಮೊದಲು ತೆಗೆಯಲಿ ಬೇರೆಯವರ ತಟ್ಟೆಯಲ್ಲಿ ಬಿದ್ದ ನೊಣದ ಬಗ್ಗೆ ನಂತರ ಯೋಚನೆ ಮಾಡಲಿ ಎಂದು ಸವದಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಂದುವರಿದ ಸತೀಶ್ ಜಾರಕಿಹೊಳಿ-ಲಕ್ಷ್ಮಣ ಸವದಿ ಕೋಳಿ ಜಗಳ, ಸಚಿವನಿಂದ ಮತ್ತೊಮ್ಮೆ ತರಾಟೆ !