ಬಿಜೆಪಿ ಎಮ್ಮೆಲ್ಸಿ ಹೆಚ್ ವಿಶ್ವನಾಥ್ ಡಿಸಿಎಂ ಡಿಕೆ ಶಿವಕುಮಾರ್ರನ್ನು ಭೇಟಿಯಾಗಿದ್ದು ಯಾಕೆ ಗೊತ್ತಾ?
ಬಣ ರಾಜಕೀಯದ ಬಗ್ಗೆ ಮಾತಾಡಿದ ವಿಶ್ವನಾಥ್, ಕಾಂಗ್ರೆಸ್ ಶಾಸಕರು ತಮಗನ್ನಿಸಿದ ಹೇಳಿಕೆಗಳನ್ನು ನೀಡಿದರೂ ಸಿಎಂ ಸಿದ್ದರಾಮಯ್ಯ ನಿರ್ಲಿಪ್ತ ಭಾವನೆ ತಳೆದಿದ್ದಾರೆ ಎಂದು ಹೇಳಿ ಬಿಜೆಪಿ ಬಗ್ಗೆ ವ್ಯಂಗ್ಯವಾಡಿದರು. ಅಯ್ಯೋ ಬಿಜೆಪಿ ಬಗ್ಗೆ ಮಾತಾಡದಿರೋದೇ ಒಳ್ಳೆಯದು, ಅದು ಸತ್ಯವಂತರ ಪಾರ್ಟಿ ಅನ್ನುತ್ತಾರೆ. ಹಾಗಾಗೇ, ನಾವು ಎಮ್ಮೆಲ್ಸಿ ಸಾಹೇಬರ ಧೋರಣೆ ನಂಬೋದು ಕಷ್ಟ ಅಂತ ಹೇಳಿದ್ದು.
ಬೆಂಗಳೂರು: ಹಿರಿಯ ರಾಜಕಾರಣಿ ಮತ್ತು ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ಬನಾಥ್ ಅವರ ಧೋರಣೆಗಳು ಯಾವಾಗ ಬದಲಾಗುತ್ತವೆಯೋ ಹೇಳಲಾಗಲ್ಲ ಸ್ವಾಮಿ. ಇವತ್ತು ಅವರು ನಗರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ರನ್ನು ಭೇಟಿಯಾದರು. ಯಾಕ್ಸಾರ್ ಕಾಂಗ್ರೆಸ್ ನಾಯಕನ ಭೇಟಿ ಅಂತ ಮಾಧ್ಯಮದವರು ಕೇಳಿದರೆ, ಅವರು ನೀರಾವರಿ ಸಚಿವರು, ಮೈಸೂರಲ್ಲಿ ಹಲವಾರು ಜಮೀನುಗಳಿಗೆ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ, ಹಾಗಾಗಿ ಕೆಲವು ಕಾಮಗಾರಿಗಳನ್ನು ಸ್ಯಾಂಕ್ಷನ್ ಮಾಡಿಕೊಡಿ ಅಂತ ಕೇಳಲು ಬಂದಿದ್ದೆ ಎಂದು ವಿಶ್ವನಾಥ್ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಜೆಡಿಎಸ್ ಕಾರ್ಯಕರ್ತರು ನನ್ನನ್ನು ಸಂಪರ್ಕಿಸಿದ್ದಾರೆಯೇ ಹೊರತು ಶಾಸಕರಲ್ಲ: ಡಿಕೆ ಶಿವಕುಮಾರ್