ನಿಲ್ಲಿಸಿದ್ದ ಕಾರಿನ ಎಲ್ಲಾ ಟೈರ್ ಬಿಚ್ಚಿ ಕದ್ದೊಯ್ದ ಖದೀಮರು, ಎಲ್ಲೊಂದರಲ್ಲಿ ವಾಹನ ನಿಲ್ಲಿಸಿ ಹೋಗುವ ಮುನ್ನ ಎಚ್ಚರ
ಬೆಂಗಳೂರಿನಲ್ಲಿ ಒಂದಲ್ಲ ಒಂದು ವಿಚಿತ್ರ ಅಪರಾಧ ಪ್ರಕರಣ ಬೆಳಕಿಗೆ ಬರುತ್ತಲೇ ಇವೆ. ನಿಲ್ಲಿಸಿ ಹೋಗಿದ್ದ ಕಾರಿನ ನಾಲ್ಕಕ್ಕೇ ನಾಲ್ಕು ಚಕ್ರ)ಗಾಲಿ) ಗಳನ್ನು ಖತರ್ನಾಕ್ ಕಳ್ಳರು ಬಿಚ್ಚಿ ಕದ್ದುಕೊಂಡು ಹೋಗಿರುವ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅದು ಈ ಖತರ್ನಾಕ್ ಕಳ್ಳರು ಇನ್ನೋವಾ ಕಾರಿನಲ್ಲಿ ಬಂದು ಕಾರಿಗೆ ಜಾಕ್ ಹಾಕಿ ನಾಲ್ಕು ಗಾಲಿಗಳನ್ನು ಬಿಚ್ಚಿಕೊಂಡು ಪರಾರಿಯಾಗಿದ್ದಾರೆ. ಕಳ್ಳರ ಕರಾಮತ್ತು ದೃಶ್ಯದಲ್ಲಿ ಸೆರೆಯಾಗಿದೆ.
ಬೆಂಗಳೂರು, (ಮಾರ್ಚ್ 17): ಬೆಂಗಳೂರಿನಲ್ಲಿ ವಾಹನಗಳನ್ನು ಎಲ್ಲೊಂದರಲ್ಲಿ ನಿಲ್ಲಿಸಿ ಹೋಗುವ ಮುನ್ನ ಈ ಸುದ್ದಿ ನೋಡಲೇಬೇಕು. ಹೌದು…ಹೋಟೆಲ್ ಮುಂದೆ ನಿಲ್ಲಿಸಲಾಗಿದ್ದ ಕಾರಿನ ನಾಲ್ಕಕ್ಕೇ ನಾಲ್ಕು ಚಕ್ರಗಳನ್ನು (ಗಾಲಿ) ಕಳ್ಳತನ ಮಾಡಿರುವ ಘಟನೆ ಬೆಂಗಳೂರಿನ ಗಾಂಧಿನಗರದ ಹೊಟೇಲ್ ಬಳಿ ನಡೆದಿದೆ. ಕಳ್ಳರ ಕರಾಮತ್ತು ದೃಶ್ಯದಲ್ಲಿ ಸೆರೆಯಾಗಿದ್ದು, ಮೂವರು ಖದೀಮರು ಕಾರಿಗೆ ಜಾಕ್ ಹಾಕಿ ನಾಲ್ಕು ಚಕ್ರಗಳನ್ನು ಬಿಚ್ಚಿಕೊಂಡು ಪರಾರಿಯಾಗಿದ್ದಾರೆ. ಇನ್ನೋವಾ ಕಾರಿನಲ್ಲಿ ಬಂದು ಈ ಕೃತ್ಯ ಎಸಗಿದ್ದಾರೆ.
ಹುಬ್ಬಳ್ಳಿ ಮೂಲದ ಗೋವಿಂದಗೌಡ ಎಂಬುವರು ವೈಯಕ್ತಿಕ ಕೆಲಸ ನಿಮಿತ್ತ ಶನಿವಾರ ಬೆಂಗಳೂರಿಗೆ ಬಂದಿದ್ದು, ಗಾಂಧಿನಗರದ ಹೋಟೆಲ್ ಮುಂದೆ ಕಾರು ನಿಲ್ಲಿಸಿದ್ದಾರೆ. ಆದ್ರೆ, ಕಳ್ಳರು ಕಾರಿನ ನಾಲ್ಕು ಗಾಲಿಗಳನ್ನು ಬಿಚ್ಚಿಕೊಂಡು ಎಸ್ಕೇಪ್ ಆಗಿದ್ದಾರೆ. ಇದರಿಂದ ಕಂಗಾಲಾದ ಗೋವಿಂದಗೌಡ, ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇನ್ನು ಈ ದೂರು ದಾಖಲಿಸಿಕೊಂಡಿರುವ ಪೊಲೀಸರು ಚಕ್ರಗಳನ್ನು ಕದ್ದ ಖದೀಮರಿಗಾಗಿ ಶೋಧ ನಡೆಸಿದ್ದಾರೆ.