ರಸ್ತೆ ಗುಂಡಿ ಕಂಡು ಶಾಸಕ ಅಶೋಕ್ ಕುಮಾರ್ ರೈ ಗರಂ: ನಗರಸಭೆ ಕಮಿಷನರ್ಗೆ ಖಡಕ್ ಎಚ್ಚರಿಕೆ
ರಸ್ತೆ ಗುಂಡಿಗಳ ವಿಚಾರವಾಗಿ ಪುತ್ತೂರು ಶಾಸಕ ಅಶೋಕ್ ರೈ ಅವರು ನಗರಸಭೆ ಕಮಿಷನರ್ಗೆ ದೂರವಾಣಿ ಮೂಲಕ ತರಾಟೆ ತೆಗೆದುಕೊಂಡಿದ್ದಾರೆ. ರಸ್ತೆ ಗುಂಡಿಗಳ ದುರಸ್ತಿ ವಿಳಂಬದ ಬಗ್ಗೆ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಕೆಲಸ ಆರಂಭಿಸುವಂತೆ ಸೂಚಿಸಿದ್ದಾರೆ. ಅಲ್ಲದೆ, ನಿರ್ಲಕ್ಷ್ಯ ಮುಂದುವರಿದರೆ ತಾವೇ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಸಿದ್ದಾರೆ.
ಮಂಗಳೂರು, ಡಿಸೆಂಬರ್ 01: ರಸ್ತೆ ಗುಂಡಿಗಳ ವಿಚಾರವಾಗಿ ಪುತ್ತೂರು ನಗರಸಭೆ ಕಮಿಷನರ್ಗೆ ದೂರವಾಣಿ ಕರೆ ಮಾಡಿ ಶಾಸಕ ಅಶೋಕ್ ಕುಮಾರ್ ರೈ ತರಾಟೆಗೆ ಪಡೆದಿದ್ದಾರೆ. ಕಾರಿನಲ್ಲಿ ಹೋಗುವಾಗ ರಸ್ತೆ ಗುಂಡಿಗಳನ್ನು ಕಂಡು ಗರಂ ಆದ ಶಾಸಕರು, ರಸ್ತೆ ಗುಂಡಿಗಳನ್ನು ಮುಚ್ಚಿ ಎಂದು ಎಷ್ಟು ಸಲ ಹೇಳಬೇಕು. ನಾನು ಹೇಳೋ ಭಾಷೆ ನಿಮಗೆ ಅರ್ಥವಾಗುತ್ತೋ ಇಲ್ಲವೋ? ಎಲ್ಲದಕ್ಕೂ ಇಂಜಿನಿಯರ್ ಅಂದ್ರೆ ಕಮಿಷನರ್ ಆಗಿ ನೀವು ಏಕೆ? ಎಲ್ಲದ್ದಕ್ಕೂ ಕೆಳ ಹಂತದ ಅಧಿಕಾರಗಳತ್ತ ಕೈ ತೋರಿಸುತ್ತೀರಾ? ಈ ರಸ್ತೆಯಲ್ಲಿ ಹೋಗುವ ಜನ ಇಲ್ಲಿ ಸಾಯುತ್ತಿದ್ದಾರೆ. ಹೀಗಿರುವಾಗ ಮುಂದಿನ ಮಳೆಗಾಲದವರೆಗೂ ಕಾಲ ಕಳೆಯುತ್ತೀರಾ? ನಾಳೆ ಕೆಲಸ ಆಗದಿದ್ರೆ ಮತ್ತೆ ಏನು ಮಾಡುತ್ತೇನೆ ಅಂತಾ ನೋಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Dec 01, 2025 01:13 PM
