AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

'ಹಾದಿ ಬಿಟ್ಟ ಸ್ವಾಮೀಜಿ': ಶಾಸಕ ಯತ್ನಾಳ್​ ಹೇಳಿದ್ದು ಯಾರಿಗೆ?

‘ಹಾದಿ ಬಿಟ್ಟ ಸ್ವಾಮೀಜಿ’: ಶಾಸಕ ಯತ್ನಾಳ್​ ಹೇಳಿದ್ದು ಯಾರಿಗೆ?

ಪ್ರಸನ್ನ ಹೆಗಡೆ
|

Updated on: Sep 26, 2025 | 12:17 PM

Share

ದಾವಣಗೆರೆಯ ಬೇತೂರು ರಸ್ತೆಯ ಕಾರ್ಲ್‌ಮಾರ್ಕ್ಸ್ ನಗರದಲ್ಲಿ ಫ್ಲೆಕ್ಸ್​ ವಿಚಾರವಾಗಿ ನಡೆದಿದ್ದ ಘರ್ಷಣೆ ಮತ್ತು ಮದ್ದೂರಿನಲ್ಲಿ ನಡೆದಿದ್ದ ಕಲ್ಲು ತೂರಾಟ ಪ್ರಕರಣ ಸಂಬಂಧ ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ವಾಗ್ದಾಳಿ ನಡೆಸಿದ್ದಾರೆ. ಶಾಂತಿ ಧೂತರೇ ಜಗತ್ತಿನಲ್ಲಿ ಬಾಂಬ್​ ಹಾಕುವವರು ಎಂದು ಅವರು ಆರೋಪಿಸಿದ್ದಾರೆ.

ದಾವಣಗೆರೆ, ಸೆಪ್ಟೆಂಬರ್​ 26:  ಬೇತೂರು ರಸ್ತೆಯ ಕಾರ್ಲ್‌ಮಾರ್ಕ್ಸ್ ನಗರದಲ್ಲಿ ಫ್ಲೆಕ್ಸ್​ ವಿಚಾರವಾಗಿ ನಡೆದಿದ್ದ ಘರ್ಷಣೆಯ ಬಗ್ಗೆ ಶಾಸಕ ಯತ್ನಾಳ್ (Basangouda Patil Yatnal)​ ವಾಗ್ದಾಳಿ ನಡೆಸಿದ್ದಾರೆ. ಮಸೀದಿ ಎದುರು ಫ್ಲೆಕ್ಸ್​ ಬೋರ್ಡ್​ ಹಾಕಿದ್ರೆ ಏನು ಸಮಸ್ಯೆ ಎಂದು ಪ್ರಶ್ನಿಸಿರುವ ಯತ್ನಾಳ್​, ನಮ್ಮ ತಾಳ್ಮೆಯನ್ನ ನೀವು ಪರೀಕ್ಷಿಸಬೇಡಿ ಎಂದು ಎಚ್ಚರಿಸಿದ್ದಾರೆ. ಬೆಳಗಾವಿಯಲ್ಲಿ ಒಬ್ಬ ಸ್ವಾಮೀಜಿ ಗೋಮಾತೆ ಸಗಣಿಯ ವಿಭೂತಿ ಬಗ್ಗೆ ಮಾತಾಡಿದ್ದರು. ಹಾಗಿದ್ರೆ ಹಂದಿ, ನಾಯಿಯದನ್ನು ಹಚ್ಚಿಕೊಂಡು ಅಡ್ಡಾಡು ಎಂದು ನಾನು ಹೇಳಿದ್ದೆ ಎಂದು ಯತ್ನಾಳ್​ ನೆನಪಿಸಿಕೊಂಡಿದ್ದಾರೆ. ಶಾಂತಿ ಧೂತರೇ ಜಗತ್ತಿನಲ್ಲಿ ಬಾಂಬ್​ ಹಾಕುವವರು. ಮದ್ದೂರಿನಲ್ಲಿ ಕಲ್ಲು ಎಸೆದವರು ಯಾರು ಎಂದೂ ಯತ್ನಾಳ್​ ಪ್ರಶ್ನಿಸಿದ್ದಾರೆ​.

ಮತ್ತಷ್ಟು ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.