ಕೇವಲ ಮೂರ‍್ಯಾಕೆ ಸಮುದಾಯಕ್ಕೊಬ್ಬ ಡಿಸಿಎಂನನ್ನು ಮಾಡಲಿ; ಕುಹುಕವಾಡಿದ ಹೆಚ್ ಸಿ ಬಾಲಕೃಷ್ಣ

|

Updated on: Jun 25, 2024 | 9:05 PM

ಅಸಲಿಗೆ ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರನ್ನು ಬಾಲಕೃಷ್ಣ ಜರಿದರು. ಯಾಕೆಂದರೆ ಪ್ರತಿಬಾರಿ ಹೆಚ್ಚುವರಿ ಡಿಸಿಎಂಗಳ ಚರ್ಚೆಯನ್ನು ಅವರೇ ಶುರುಮಾಡುತ್ತಾರೆ. ಯಾರೇನೇ ಹೇಳಿದರೂ ಅದು ಕೇವಲ ವೈಯಕ್ತಿಕ ಅಭಿಪ್ರಾಯ ಮಾತ್ರ. ಇನ್ನೂ ಡಿಸಿಎಂಗಳು ಬೇಕೆಂದು ತಮ್ಮ ಕ್ಷೇತ್ರಗಳಿಂದ ಅರಣ್ಯರೋದನ ಮಾಡುವವರು ಹೈಕಮಾಂಡ್ ಮುಂದೆ ಹೋಗಿ ತಮ್ಮ ಬೇಡಿಕೆ ಇಡಲಿ ಎಂದು ಬಾಲಕೃಷ್ಣ ಹೇಳಿದರು.

ಬೆಂಗಳೂರು: ಲೋಕಸಭಾ ಚುನಾವಣೆಯ ಬಳಿಕ ಹೆಚ್ಚುವರಿ ಡಿಸಿಎಂಗಳ (additional DCMs) ಕೂಗು ಮತ್ತೇ ಕೇಳಲಾರಂಭಿಸಿದೆ. ನಗರದಲ್ಲಿಂದು ಮಾಧ್ಯಮ ಗೋಷ್ಠಿ ನಡೆಸಿ ಮಾತಾಡಿದ ಮಾಗಡಿ ಶಾಸಕ ಹೆಚ್ ಸಿ ಬಾಲಕೃಷ್ಣ (HC Balakrishna) ಅವರು ಇನ್ನೂ ಡಿಸಿಎಂಗಳು ಬೇಕೆನ್ನುವವರನ್ನು ಲೇವಡಿ ಮಾಡಿದರು. ಕೇವಲ ಇನ್ನೂ ಮೂರು ಡಿಸಿಎಂಗಳು ಮಾತ್ರ ಯಾಕೆ? 10-15 ಜನರನ್ನು ಉಪ ಮುಖ್ಯಮಂತ್ರಿಗಳನ್ನು ಮಾಡಲಿ, ಯಾರು ಬೇಡ ಅಂತಾರೆ? ಪ್ರತಿ ಸಮುದಾಯಕ್ಕೊಬ್ಬ ಡಿಸಿಎ (a DCM for each community) ಮಾಡಿದರೆ ಚೆನ್ನಾಗಿರುತ್ತದೆ ಎಂದು ಬಾಲಕೃಷ್ಣ ಹೇಳಿದರು. ಹೆಚ್ಚುವರಿ ಡಿಸಿಎಂ ಬೇಕೆನ್ನುವವರು ನಿರ್ದಿಷ್ಟ ಸಮುದಾಯದವರು ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ವೋಟು ಹಾಕಿದ್ದಾರೆ ಅಂತ ಹೇಗೆ ಹೇಳುತ್ತಾರೆ? ಒಂದು ಪಕ್ಷ ಅವರು ಅಂದುಕೊಳ್ಳುತ್ತಿರೋದೇ ನಿಜವಾದರೆ ಯಾವ ಸಮುದಾಯದವರು ವೋಟು ಮಾಡಿದ್ದಾರೋ ಅವರಿಗೆ ಡಿಸಿಎಂ ಪಟ್ಟ ಸಿಗಲಿ, ಯಾವ ಸಮುದಾಯದವರು ಕಾಂಗ್ರೆಸ್ ವೋಟು ನೀಡಿಲ್ಲವೋ ಅವರಿಗೆ ಯಾವ ಸ್ಥಾನವೂ ಬೇಡ ಎಂದು ಬಾಲಕೃಷ್ಣ ಹೇಳಿದರು. ಅಸಲು ವಿಷಯವೇನೆಂದರೆ ಶಕ್ತಿ ಇರೋರಷ್ಟೆ ಶಕ್ತ ರಾಜಕಾರಣಿಗಳು, ಅವರೇ ರಾಜಕಾರಣ ಮಾಡುತ್ತಾರೆ, ಮಾತಾಡೋರೆಲ್ಲ ರಾಜಕಾರಣಿಗಳಲ್ಲ ಎಂದು ಅವರು ಹೇಳಿದರು

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹೆಚ್ಚುವರಿ ಡಿಸಿಎಂಗಳು ಬೇಕೆನ್ನುವವರು ಮಾಧ್ಯಮಗಳ ಮುಂದೆ ಮಾತಾಡುವ ಬದಲು ಹೈಕಮಾಂಡ್ ಬಳಿ ಹೋಗಿ ಕೇಳಲಿ: ಪ್ರಿಯಾಂಕ್ ಖರ್ಗೆ