Sign In

By signing in or creating an account, you agree with Associated Broadcasting Company's Terms & Conditions and Privacy Policy.

Hassan News: ಅರಸೀಕೆರೆ ಬಳಿ ಮಳೆಯಿಂದ ಕುಸಿದ ಮನೆಯ ನಿರ್ಗತಿಕ ಕುಟುಂಬಕ್ಕೆ ಶಾಸಕ ಶಿವಲಿಂಗೇಗೌಡ ನೆರವು

Hassan News: ಅರಸೀಕೆರೆ ಬಳಿ ಮಳೆಯಿಂದ ಕುಸಿದ ಮನೆಯ ನಿರ್ಗತಿಕ ಕುಟುಂಬಕ್ಕೆ ಶಾಸಕ ಶಿವಲಿಂಗೇಗೌಡ ನೆರವು

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 26, 2023 | 4:08 PM

ಸಮಾಧಾನಕರ ಸಂಗತಿಯೆಂದರೆ ಶಾಸಕ ಕೆಎಂ ಶಿವಲಿಂಗೇಗೌಡ ಸ್ಥಳಕ್ಕೆ ಭೇಟಿ ನೀಡಿ ಮಹಿಳೆಗೆ ರೂ. 5 ಲಕ್ಷ ಚೆಕ್ ಪರಿಹಾರದ ರೂಪದಲ್ಲಿ ನೀಡಿದ್ದಾರೆ.

ಹಾಸನ: ವಿಡಿಯೋದಲ್ಲಿ ಕಾಣುತ್ತಿರುವ ಮಹಿಳೆಯ ಮನೆಮಾತ್ರ ಅಲ್ಲ, ಆಕೆಯ ತಲೆ ಮೇಲೆ ಆಕಾಶವೇ ಕಳಚಿಬಿದ್ದಿದೆ. ಅರಸೀಕೆರೆ (Arasikere) ತಾಲ್ಲೂಕಿನ ಡಿಎಂ ಕುರ್ಕೆ ಹೆಸರಿನ ಗ್ರಾಮದಲ್ಲಿದ್ದ ಮನೆ ಕುಸಿದಾಗ ಅದರೊಳಗಿದ್ದ ಮಹಿಳೆಯ ತಾಯಿ (woman’s mother) ಬಲಿಯಾಗಿದ್ದಾರೆ. ಹಾಸನದ ಟಿವಿ9 ಕನ್ನಡ ವಾಹಿನಿ ವರದಿಗಾರನೊಂದಿಗೆ ಈಕೆ ತಮ್ಮ ಕಷ್ಟ, ನೋವು ಯಾತನೆ ಹೇಳಿಕೊಳ್ಳುತ್ತಿದ್ದಾರೆ. ತಲೆ ಮೆಲಿದ್ದ ಸೂರು ಉರುಳಿ ಬಿದ್ದಿದೆ. ಆಕೆಯೊಂದಿಗೆ ಇಬ್ಬರು ಮಕ್ಕಳು, ಅಸ್ವಸ್ಥ ತಂದೆ ಮತ್ತು ಒಬ್ಬ ತಮ್ಮ ವಾಸವಾಗಿದ್ದಾರೆ. ಭವಿಷ್ಯದ ಕರಾಳತೆ ಮಹಿಳೆಯನ್ನು ಆತಂಕಕ್ಕೆ ದೂಡಿದೆ. ಆಕೆಗೆ ಕೂಡಲೇ ವಾಸಿಸಲು ಒಂದು ಮನೆ ಬೇಕಿದೆ. ಸಮಾಧಾನಕರ ಸಂಗತಿಯೆಂದರೆ ಶಾಸಕ ಕೆಎಂ ಶಿವಲಿಂಗೇಗೌಡ (KM Shivalinge Gowda) ಮತ್ತು ಹಾಸನ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಅನಾಹುತವನ್ನು ವೀಕ್ಷಿಸಿ ಮಹಿಳೆಗೆ ರೂ. 5 ಲಕ್ಷ   ಚೆಕ್ ಪರಿಹಾರದ ರೂಪದಲ್ಲಿ ನೀಡಿದ್ದಾರೆ. ಸುತ್ತಮುತ್ತಲಿನ ಬೇರೆ ಮನೆಗಳ ಸಹ ಕುಸಿಯುವ ಸ್ಥಿತಿಯಲ್ಲಿವೆಯಂತೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ