ಗಣೇಶೋತ್ಸವದ ವೇಳೆ ಅವಾಚ್ಯ ಪದ ಬಳಕೆ ಆರೋಪ: ಶಾಸಕ ಮುನಿರತ್ನ ಮನೆ ಬಳಿ ಹೈಡ್ರಾಮಾ
ಬೆಂಗಳೂರಿನಲ್ಲಿ ಗಣೇಶೋತ್ಸವದ ಅನ್ನದಾನ ಕಾರ್ಯಕ್ರಮದ ವೇಳೆ ಆರ್.ಆರ್. ನಗರ ಕ್ಷೇತ್ರದ ಶಾಸಕ ಮುನಿರತ್ನ ಅವರು ಅವಾಚ್ಯ ಪದ ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಮಲ್ಲೇಶ್ವರಂನಲ್ಲಿರುವ ಮುನಿರತ್ನ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸಲಾಗಿದೆ.
ಬೆಂಗಳೂರು, ಸೆಪ್ಟೆಂಬರ್ 28: ಮಲ್ಲೇಶ್ವರಂನಲ್ಲಿ ನಡೆದ ಗಣೇಶೋತ್ಸವದ ಅನ್ನದಾನದ ವೇಳೆ ಅವಾಚ್ಯ ಶಬ್ದ ಬಳಕೆ ಆರೋಪ ಸಂಬಂಧ ಆರ್.ಆರ್.ನಗರ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಮುನಿರತ್ನ ನಿವಾಸದ ಎದುರು ಸ್ಥಳೀಯರು ಧರಣಿ ನಡೆಸಿದ್ದು, ಶಾಸಕರ ಕಾರು ಅಡ್ಡ ಹಾಕಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಈ ಹಿನ್ನೆಲೆ ಮುನಿರತ್ನ ನಿವಾಸಕ್ಕೆ ಪೊಲೀಸ್ ಭದ್ರತೆ ನೀಡಲಾಗಿದ್ದು, ಸ್ಥಳದಲ್ಲೇ ಇರುವ ಒಂದು ಕೆಎಸ್ಆರ್ಪಿ ತುಕಡಿ, 25ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಸದ್ಯ ಪರಿಸ್ಥಿತಿಯನ್ನ ಪೊಲೀಸ್ ಸಿಬ್ಬಂದಿ ತಿಳಿಗೊಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
