ಉಗ್ರಪ್ಪ ವಿರುದ್ಧ ರೂ. 1 ಕೋಟಿ ಮಾನನಷ್ಟ ಮೊಕದ್ದಮೆ ಹೂಡುತ್ತಿರುವುದಾಗಿ ಹೇಳಿದರು ವಿಧಾನ ಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ
ಪಕ್ಷದ ಕೆಲ ನಾಯಕರು ಅಲ್ಪಸಂಖ್ಯಾತ ನಾಯಕನ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಮಾಜಿ ಸಂಸದ ವಿ ಎಸ್ ಉಗ್ರಪ್ಪ ಅವರು, ಇಬ್ರಾಹಿಂ ವಕ್ಫ್ ಬೋರ್ಡ್ ಆಸ್ತಿಯನ್ನು ಕಬಳಿಸಿದ್ದಾರೆ ಎಂದು ಅರೋಪ ಮಾಡಿರುವುದು ಪರಿಷತ್ ಸದಸ್ಯನ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಮಂಗಳವಾರ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಇಬ್ರಾಹಿಂ, ಪಕ್ಷ ಮತ್ತು ಉಗ್ರಪ್ಪರನ್ನು ತರಾಟೆಗೆ ತೆಗೆದುಕೊಂಡರು.
ಕರ್ನಾಟಕ ಕಾಂಗ್ರೆಸ್ ಮತ್ತು ಪಕ್ಷವನ್ನು ತೊರೆದಿದ್ದೇನೆ ಎಂದು ಹೇಳುತ್ತಿರುವ ವಿಧಾನ ಪರಿಷತ್ ಸದಸ್ಯ (MLC) ಸಿ ಎಮ್ ಇಬ್ರಾಹಿಂ (CM Ibrahim) ಅವರ ನಡುವೆ ವಾಕ್ಸಮರ ಜಾರಿಯಲ್ಲಿದೆ. ಹಾಗೆ ನೋಡಿದರೆ, ಮುನಿಸಿಕೊಂಡಿರುವ ಇಬ್ರಾಹಿಂ ಅವರನ್ನು ಪಕ್ಷಕ್ಕೆ ವಾಪಸ್ಸು ಕರೆತರುವ ಪ್ರಯತ್ನಗಳು ನಡೆಯುತ್ತಿವೆ. ನೀವು ಗಮನಿಸುತ್ತಿರಬಹುದು. ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಮತ್ತು ಪಕ್ಷದ ಹಿರಿಯ ನಾಯಕ ಸಿದ್ದರಾಮಯ್ಯ ಇಬ್ರಾಹಿಂ ವಿರುದ್ಧ ಹೇಳಿಕೆಗಳನ್ನು ನೀಡುತ್ತಿಲ್ಲ. ಅದರರ್ಥ ಅವರನ್ನು ಓಲೈಸುವ ಪ್ರಯತ್ನ ಜಾರಿಯಲ್ಲಿದೆ. ಆದರೆ, ಪಕ್ಷದ ಕೆಲ ನಾಯಕರು ಅಲ್ಪಸಂಖ್ಯಾತ ನಾಯಕನ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಮಾಜಿ ಸಂಸದ ವಿ ಎಸ್ ಉಗ್ರಪ್ಪ ಅವರು, ಇಬ್ರಾಹಿಂ ವಕ್ಫ್ ಬೋರ್ಡ್ ಆಸ್ತಿಯನ್ನು ಕಬಳಿಸಿದ್ದಾರೆ ಎಂದು ಅರೋಪ ಮಾಡಿರುವುದು ಪರಿಷತ್ ಸದಸ್ಯನ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಮಂಗಳವಾರ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಇಬ್ರಾಹಿಂ, ಪಕ್ಷ ಮತ್ತು ಉಗ್ರಪ್ಪರನ್ನು ತರಾಟೆಗೆ ತೆಗೆದುಕೊಂಡರು. ಕೆಪಿಸಿಸಿಗೆ ಲೀಗಲ್ ನೋಟೀಸ್ ಕಳಿಸಿರುವುದಾಗಿ ಹೇಳಿದ ಅವರು ಅದಕ್ಕೆ ಉತ್ತರ ದೊರೆತ ಬಳಿಕ ಉಗ್ರಪ್ಪ ಅವರ ವಿರುದ್ದ ಒಂದು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದರು.
‘ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರನ್ನು ಶಿಸ್ತಿನ ಕ್ರಮವಾಗಿ ಪಕ್ಷದಿಂದ ಉಚ್ಛಾಟಿಸಿದ್ದರೂ ಪುನಃ ಕೈಕಾಲು ಹಿಡಿದು ವಾಪಸ್ಸು ಕರೆಸಿಕೊಂಡಿದ್ದಾರೆ,’ ಎಂದು ಹೇಳಿದ ಇಬ್ರಾಹಿಂ ಅವರು, ‘ನನ್ನ ವಿರುದ್ಧ ಟೀಕೆ ಮತ್ತು ಆರೋಪಗಳನ್ನು ಮಾಡಿದರೆ ಬಡ್ತಿ ಸಿಗುತ್ತದೆ ಅಂತ ಉಗ್ರಪ್ಪನಿಗೆ ಪಕ್ಷದವರು ಯಾರೋ ಹೇಳಿದ್ದಾರೆ, ಹಾಗಾಗಿ ಅವರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ,’ ಎಂದರು.
‘ಗಂಡಸ್ತನದ ಬಗ್ಗೆ ಮಾತಾಡಿಕೊಳ್ಳುವುದು, ವೃಥಾ ಕೊಚ್ಚಿಕೊಳ್ಳವುದು ಬೇಡ, ಮಾಧ್ಯಮದವರು ಕಾಂಗ್ರೆಸ್ ನಾಯಕರು ಮತ್ತು ತಮ್ಮ ನಡುವೆ ಒಂದು ಚರ್ಚೆಯನ್ನು ಏರ್ಪಡಿಸಲಿ. ಅವರೂ ಪ್ರಶ್ನೆಗಳನ್ನು ಕೇಳಲಿ ನಾನೂ ಕೇಳುತ್ತೇನೆ, ಯಾರು ಸರಿ ಯಾರು ತಪ್ಪು ಅಂತ ಜನ ನಿರ್ಧರಿಸುತ್ತಾರೆ,’ ಎಂದು ಇಬ್ರಾಹಿಂ ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ಗೆ ರಾಜೀನಾಮೆ ನೀಡುವುದಿಲ್ಲ, ಹೈಕಮಾಂಡ್ನಿಂದ ಬುಲಾವ್ ಬಂದಿದೆ: ಮುನಿಸಿಕೊಂಡಿದ್ದ ಸಿಎಂ ಇಬ್ರಾಹಿಂ ಯುಟರ್ನ್