ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಫುಲ್ ಕ್ಲಾಸ್

Updated on: Jan 11, 2026 | 10:02 PM

ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ವಿಫಲವಾದ ಹಿನ್ನೆಲೆಯಲ್ಲಿ ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಗರಂ ಆಗಿದ್ದು, ಅಧಿಕಾರಿಗೆ ತರಾಟೆಗೆ ತೆಗೆದುಕೊಂಡಿರುವ ಪ್ರಸಂಗ ನಡೆದಿದೆ. ಇಂದು (ಜನವರಿ 11) ಸಿಎಂ ಸಿದ್ದರಾಮಯ್ಯನವರ ತವರು ಕ್ಷೇತ್ರ ವರುಣ ವ್ಯಾಪ್ತಿಯ ಹನುಮನಪುರದಲ್ಲಿ ಯತೀಂದ್ರ ಅವರು ಜನಸಂಪರ್ಕ ಸಭೆ ನಡೆಸಿದ್ದು, ಈ ವೇಳೆ ರೈತರು ಕೆರೆ ನೀರಿನ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಇದರಿಂದ ಕೆರಳಿದ ಯತೀಂದ್ರ, ಅಧಿಕಾರಿಗೆ ಕರೆ ಮಾಡಿ ಮುಖ್ಯಮಂತ್ರಿಗಳ ಕ್ಷೇತ್ರದಲ್ಲೇ ಹೀಗೆ ಮಾಡಿದರೆ ಏನು? ಜನಸಂಪರ್ಕ ಸಭೆ ಸುಮ್ಮನೆ ಮಾಡುತ್ತಿದ್ದೀವಾ? ಎಂದು ಕೆಂಡಮಂಡಲರಾಗಿದ್ದು, ಕೂಡಲೇ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಮೈಸೂರು, (ಜನವರಿ 11): ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ವಿಫಲವಾದ ಹಿನ್ನೆಲೆಯಲ್ಲಿ ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಗರಂ ಆಗಿದ್ದು, ಅಧಿಕಾರಿಗೆ ತರಾಟೆಗೆ ತೆಗೆದುಕೊಂಡಿರುವ ಪ್ರಸಂಗ ನಡೆದಿದೆ. ಇಂದು (ಜನವರಿ 11) ಸಿಎಂ ಸಿದ್ದರಾಮಯ್ಯನವರ ತವರು ಕ್ಷೇತ್ರ ವರುಣ ವ್ಯಾಪ್ತಿಯ ಹನುಮನಪುರದಲ್ಲಿ ಯತೀಂದ್ರ ಅವರು ಜನಸಂಪರ್ಕ ಸಭೆ ನಡೆಸಿದ್ದು, ಈ ವೇಳೆ ರೈತರು ಕೆರೆ ನೀರಿನ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಇದರಿಂದ ಕೆರಳಿದ ಯತೀಂದ್ರ, ಅಧಿಕಾರಿಗೆ ಕರೆ ಮಾಡಿ ಮುಖ್ಯಮಂತ್ರಿಗಳ ಕ್ಷೇತ್ರದಲ್ಲೇ ಹೀಗೆ ಮಾಡಿದರೆ ಏನು? ಜನಸಂಪರ್ಕ ಸಭೆ ಸುಮ್ಮನೆ ಮಾಡುತ್ತಿದ್ದೀವಾ? ಎಂದು ಕೆಂಡಮಂಡಲರಾಗಿದ್ದು, ಕೂಡಲೇ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.