ಹೊಸ ರಿಯಲ್ಮಿ 8ಐ ಮತ್ತು ರಿಯಲ್ಮಿ 8ಎಸ್ 5ಜಿ ಫೋನ್ ಸೆಪ್ಟೆಂಬರ್ 9 ರಂದು ಭಾರತದಲ್ಲಿ ಲಾಂಚ್ ಆಗುತ್ತಿವೆ!
ಸೆಪ್ಟೆಂಬರ್ 9, ಭಾರತೀಯ ಕಾಲಮಾನ ಮಧ್ಯಾಹ್ನ 12:30 ಕ್ಕೆ ರಿಯಲ್ಮಿ 8ಐ ಮತ್ತು ರಿಯಲ್ಮಿ 8ಎಸ್ ಫೋನ್ಗಳನ್ನು ಭಾರತದಲ್ಲಿ ಒಂದು ವರ್ಚ್ಯೂಯಲ್ ಕಾರ್ಯಕ್ರಮದ ಮುಖಾಂತರ ಲಾಂಚ್ ಮಾಡಲಾಗುವುದು ಎಂದು ಕಂಪನಿಯ ಮೂಲಗಳು ತಿಳಿಸಿವೆ.
ರಿಯಲ್ಮಿ 8ಐ ಮತ್ತು ರಿಯಲ್ಮಿ 8ಎಸ್ 5ಜಿ ಫೋನ್ಗಳ ಲಾಂಚ್ ಸೆಪ್ಟಂಬರ್ 9 ರಂದು ಮಾಡಲಾಗುವುದು ಎಂದು ಮೊಬೈಲ್ ಉತ್ಪಾದಿಸುವ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಚೀನಾದ ರಿಯಲ್ಮಿ ಸಂಸ್ಥೆ ಹೇಳಿದೆ. ಈ ಎರಡು ಹೊಸ ಪೋನ್ಗಳು ಕಂಪನಿಯು ಹಿಂದೆ ಲಾಂಚ್ ಮಾಡಿದ್ದ ಮತ್ತು ಈಗ ಆಸ್ತಿತ್ವದಲ್ಲಿರುವ ರಿಯಲ್ಮಿ 8 ಮತ್ತು ರಿಯಲ್ಮಿ 8 ಪ್ರೊ ಮತ್ತು ಈ ವರ್ಷದ ಆರಂಭದಲ್ಲಿ ಕಂಪನಿಯು ಲಾಂಚ್ ಮಾಡಿದ ರಿಯಲ್ ಮಿ 8 5ಜಿ ಫೋನ್ಗಳ ಮುಂದುವರಿದ ಭಾಗವಾಗಿವೆ. ರಿಯಲ್ಮಿ ಇಂಡಿಯ ಮತ್ತು ಯೂರೋಪ್ ಸಿ ಈ ಓ ಆಗಿರುವ ಮಾಧವ್ ಶೇಠ್ ಅವರು ರಿಯಲ್ಮಿ 8ಐ ಮತ್ತು ರಿಯಲ್ಮಿ 8ಎಸ್ ಫೋನ್ಗಳನ್ನು ಭಾರತದಲ್ಲಿ ಲಾಂಚ್ ಮಾಡುವ ಬಗ್ಗೆ ಕಳೆದ ತಿಂಗಳು ಹೇಳಿದ್ದರು. ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಈ ಹೊಸ ಸ್ಮಾರ್ಟ್ಪೋನ್ಗಳು ಕೆಲ ಮುಖ್ಯ ಸ್ಪೆಸಿಫಿಕೇಶನ್ಗಳೊಂದಿಗೆ ಲಾಂಚ್ ಆಗಲಿವೆ.
ಸೆಪ್ಟೆಂಬರ್ 9, ಭಾರತೀಯ ಕಾಲಮಾನ ಮಧ್ಯಾಹ್ನ 12:30 ಕ್ಕೆ ರಿಯಲ್ಮಿ 8ಐ ಮತ್ತು ರಿಯಲ್ಮಿ 8ಎಸ್ ಫೋನ್ಗಳನ್ನು ಭಾರತದಲ್ಲಿ ಒಂದು ವರ್ಚ್ಯೂಯಲ್ ಕಾರ್ಯಕ್ರಮದ ಮುಖಾಂತರ ಲಾಂಚ್ ಮಾಡಲಾಗುವುದು ಎಂದು ಕಂಪನಿಯ ಮೂಲಗಳು ತಿಳಿಸಿವೆ. ಮಾಧ್ಯಮಗಳಿಗೆ ಆಮಂತ್ರಣಗಳನ್ನು ಈಗಾಗಲೇ ನೀಡಲಾಗಿದೆ. ರಿಯಲ್ಮಿ 8ಐ ಮತ್ತು ರಿಯಲ್ಮಿ 8ಎಸ್ ಫೋನ್ಗಳ ಲಾಂಚ್ ದಿನಾಂಕವನ್ನು ಸಾಮಾಜಿಕ ಜಾಲತಾಣಗಳಲ್ಲೂ ಬಿತ್ತರಿಸಲಾಗಿದೆ.
ನೀವು ರೀಯಲ್ಮಿ ಫೋನ್ಗಳನ್ನು ಇಷ್ಟಪಡುವವರ ಪೈಕಿ ಒಬ್ಬರಾಗಿದ್ದರೆ, ಹೊಸ ರಿಯಲ್ಮಿ 8ಐ ಮತ್ತು ರಿಯಲ್ಮಿ 8ಎಸ್ ಫೋನ್ಗಳನ್ನು ನಿಮ್ಮವಾಗಿಸಿಕೊಳ್ಳಲು ಹೆಚ್ಚು ದಿನ ಕಾಯಬೇಕಿಲ್ಲ.
ಇದನ್ನೂ ಓದಿ: ಬಾಯಲ್ಲಿ ಕರಗಿಹೋಗುವ ಮೃದುವಾದ ಸೋನ್ ಪಪಡಿ ಮಾಡುವುದು ಹೇಗೆ? ವೈರಲ್ ವಿಡಿಯೋ ನೋಡಿ