ಮರ್ಸಿಡಿಸ್-ಎಎಮ್‌ಜಿಯ ಮೊಟ್ಟಮೊದಲ ಪ್ಲಗ್-ಇನ್ ಹೈಬ್ರಿಡ್ ಕಾರು ಬಂದೇ ಬಿಟ್ಟಿತ್ತು!

ಮರ್ಸಿಡಿಸ್-ಎಎಮ್‌ಜಿಯ ಮೊಟ್ಟಮೊದಲ ಪ್ಲಗ್-ಇನ್ ಹೈಬ್ರಿಡ್ ಕಾರು ಬಂದೇ ಬಿಟ್ಟಿತ್ತು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 03, 2021 | 10:23 PM

ಎಲ್ಲಾ ಇತರ ಎ ಎಮ್ ​​ಜಿ ಜಿಟಿ 4-ಡೋರ್ ಮಾದರಿಗಳಲ್ಲಿ ಲಭ್ಯವಿರುವಂತೆ, GT 63 S E ಕಾರ್ಯಕ್ಷಮತೆಯು ಎ ಎಮ್ ​​ಜಿ ರೈಡ್ ಕಂಟ್ರೋಲ್ ಪ್ಲಸ್ ಅನ್ನು ಹೊಂದಿರುತ್ತದೆ.

ಮರ್ಸಿಡಿಸ್-ಎ ಎಮ್‌ ಜಿ ಜಿಟಿ 4-ಡೋರ್ ಲೈನಪ್ ಕಾರನ್ನು ಅರ್ಥ ಮಾಡಿಕೊಳ್ಳಲು ಜನ ಇನ್ನೂ ಹೆಣಗುತ್ತಿವಾಗಲೇ ಈ ಶ್ರೇಣಿಯ ಮತ್ತೊಂದು  ಬ್ರ್ಯಾಂಡ್ ಮಾರ್ಕೆಟ್​​ ಗೆ ಬಂದಿದೆ. ಇದು-ಡೀಪ್​ ಬ್ರೆತ್​-ಮರ್ಸಿಡಿಸ್-ಎಎಮ್​​ಗಿ ಜಿಟಿ 63 ಎಸ್​​ ಇ ಕಾರ್ಯಕ್ಷಮತೆಯುಳ್ಳ ಕಾರು ಆಗಿದೆ. ಇದರ ಹೆಸರಿನಲ್ಲಿರುವ ‘ಇ’ ಮರ್ಸಿಡಿಸ್-ಎಎಮ್‌ಜಿಯ ಮೊಟ್ಟಮೊದಲ ಪ್ಲಗ್-ಇನ್ ಹೈಬ್ರಿಡ್ ಎನ್ನುವುದನ್ನು ಸೂಚಿಸುತ್ತದೆ ಮತ್ತು ನಿಸ್ಸಂದೇಹವಾಗಿ ಮುಂದೆ ಬರಲಿರುವ ಈ ಬಗೆಯ ಕಾರುಗಳಲ್ಲಿ ಮೊದಲಿಗ ಎನಿಸಿಕೊಳ್ಳಲಿದೆ.

ಹಾಗಾದರೆ ಹೊಸ ಪಿ ಹೆಚ್ ಇ ವಿ  ಎ ಎಮ್​​​ ಜಿ ತನ್ನ ಗ್ರಾಹಕರಿಗೆ ಯಾಕೆ ವಿಶಿಷ್ಟವೆನಿಸಲಿದೆ? ಉತ್ಪಾದಕರು ಹೇಳುವ ಹಾಗೆ ಇದರ ಶಕ್ತಿ, ಮತ್ತು ಇನ್ನೂ ಅನೇಕ ವೈಶಿಷ್ಟ್ಯತೆಗಳು. ಅವಳಿ-ಟರ್ಬೋಚಾರ್ಜ್ಡ್ 4.0-ಲೀಟರ್ ವಿ 8, 6.1 ಕಿಲೋವ್ಯಾಟ್-ಗಂಟೆ ಬ್ಯಾಟರಿ ಪ್ಯಾಕ್, ಮತ್ತು ಹಿಂಭಾಗದ ಆಕ್ಸಲ್ ಮೇಲೆ ಜೋಡಿಸಲಾದ ಎಲೆಕ್ಟ್ರಿಕ್ ಮೋಟಾರ್ ಸಂಯೋಜನೆಯು ಈ ಕಾರಿಗೆ 831 ಅಶ್ವಶಕ್ತಿ (620 ಕಿಲೋವ್ಯಾಟ್) ಮತ್ತು 1,033 ಪೌಂಡ್-ಅಡಿ (1,400) ಪವರ್ ನೀಡುತ್ತದೆ. ಇನ್ನೂ ಬಿಡಿಸಿ ಹೇಳುವುದಾದರೆ, ಇದು ಮರ್ಸಿಡಿಸ್- ಎ ಎಮ್ ​​ಜಿ ಸಂಯೋಜನೆಯಲ್ಲಿ ತಯಾರಾಗಿರುವ ಅತ್ಯಂತ ಶಕ್ತಿಶಾಲಿ ಉತ್ಪನ್ನವಾಗಿದೆ.

ಎಲ್ಲಾ ಇತರ ಎ ಎಮ್ ​​ಜಿ ಜಿಟಿ 4-ಡೋರ್ ಮಾದರಿಗಳಲ್ಲಿ ಲಭ್ಯವಿರುವಂತೆ, GT 63 S E ಕಾರ್ಯಕ್ಷಮತೆಯು ಎ ಎಮ್ ​​ಜಿ ರೈಡ್ ಕಂಟ್ರೋಲ್ ಪ್ಲಸ್ ಅನ್ನು ಹೊಂದಿರುತ್ತದೆ. ಇದು ಏರ್ ಡ್ಯಾಂಪಿಂಗ್ ಸಿಸ್ಟಮ್ನೊಂದಿಗೆ ಹೊಂದಾಣಿಕೆಯ ಸಸ್ಪೆನ್ಷನ್​​ ಒಳಗೊಂಡಿದೆ. ಸಸ್ಪೆನ್ಷನ್ ಸೆಟ್ಟಿಂಗ್‌ಗಳನ್ನು ಡ್ರೈವ್ ಮೋಡ್‌ಗಳಿಂದ ಪ್ರತ್ಯೇಕವಾಗಿ ಸರಿಹೊಂದಿಸಬಹುದು, ಅಥವಾ ಮೋಡ್‌ಗೆ ಅನುಗುಣವಾಗಿ ಸ್ವಯಂಚಾಲಿತವಾಗಿ ಸರಿಹೊಂದಿಸಬಹುದು.

ಇದನ್ನೂ ಓದಿ:  ಬ್ಲ್ಯಾಕ್‌ಹಾಕ್ ಹೆಲಿಕಾಪ್ಟರ್ ನೆಲದಲ್ಲಿ ಓಡಾಡುತ್ತಿರುವ ವಿಡಿಯೊ; ಪೈಲಟ್​​ಗಳಿಗೆ ತರಬೇತಿ ನೀಡುತ್ತಿದೆಯೇ ತಾಲಿಬಾನ್?