ಬಾಯಲ್ಲಿ ಕರಗಿಹೋಗುವ ಮೃದುವಾದ ಸೋನ್ ಪಪಡಿ ಮಾಡುವುದು ಹೇಗೆ? ವೈರಲ್ ವಿಡಿಯೋ ನೋಡಿ

Soan Papdi: ಯಾವುದೇ ಹಬ್ಬಗಳ ಸಂದರ್ಭ ಈ ಸ್ವೀಟ್​ನ್ನು ಉಡುಗೊರೆಯಾಗಿ ನೀಡುವುದು ಕೂಡ ಹೆಚ್ಚು. ಇಂತಹ ಎಲ್ಲರ ಫೇವರಿಟ್ ಸಿಹಿತಿಂಡ ಮಾಡುವ ವಿಧಾನ ತುಂಬಾ ವಿಭಿನ್ನ ಮತ್ತು ವಿಶೇಷವೂ ಆಗಿದೆ. ಕಲಿತರೆ ಸುಲಭವಾಗಿ ಮಾಡಬಹುದು!

ಬಾಯಲ್ಲಿ ಕರಗಿಹೋಗುವ ಮೃದುವಾದ ಸೋನ್ ಪಪಡಿ ಮಾಡುವುದು ಹೇಗೆ? ವೈರಲ್ ವಿಡಿಯೋ ನೋಡಿ
ಸೋನ್ ಪಪಡಿ
Follow us
TV9 Web
| Updated By: ganapathi bhat

Updated on: Sep 03, 2021 | 7:20 PM

ಸೋನ್​ ಪಪಡಿ ಎಂದು ಕೇಳಿದಾಕ್ಷಣ ನಿಮ್ಮ ಬಾಯಲ್ಲಿ ನೀರೂರಬಹುದು. ಬಹಳ ಮೃದುವಾದ ಬಾಯಿಗೆ ಇಟ್ಟಾಕ್ಷಣ ಕರಗಿಹೋಗುವ ಸಿಹಿಯಾಗಿ ನಾಲಗೆಗೆ ರುಚಿ ಹತ್ತಿಸುವ ಈ ತಿನಿಸು ಎಲ್ಲರಿಗೂ ಇಷ್ಟ. ನಿಮ್ಮ ಸಮೀಪದ ಯಾವುದೇ ಬೇಕರಿ, ಸಿಹಿತಿಂಡಿ ಅಂಗಡಿಗೆ ಹೋದರೂ ಅಲ್ಲಿ ಸೋನ್ ಪಪಡಿ ಇದ್ದೇ ಇರುತ್ತದೆ. ಸೋನ್ ಪಪಡಿ ಎಂಬುದು ಹೆಸರಾಂತ ಹಾಗೂ ಬಹಳಷ್ಟು ಜನರು ಮೆಚ್ಚುವ ತಿಂಡಿ. ಯಾವುದೇ ಹಬ್ಬಗಳ ಸಂದರ್ಭ ಈ ಸ್ವೀಟ್​ನ್ನು ಉಡುಗೊರೆಯಾಗಿ ನೀಡುವುದು ಕೂಡ ಹೆಚ್ಚು. ದೀಪಾವಳಿಯಂತಹ ಸಂದರ್ಭದಲ್ಲಿ ಈ ತಿನಿಸಿಗೆ ಇನ್ನಿಲ್ಲದ ಬೇಡಿಕೆ. ಇಂತಹ ಎಲ್ಲರ ಫೇವರಿಟ್ ಸಿಹಿತಿಂಡ ಮಾಡುವ ವಿಧಾನ ತುಂಬಾ ವಿಭಿನ್ನ ಮತ್ತು ವಿಶೇಷವೂ ಆಗಿದೆ. ಕಲಿತರೆ ಸುಲಭವಾಗಿ ಮಾಡಬಹುದು!

ಇನ್ನೇನು ಹಬ್ಬಗಳ ಸರಮಾಲೆಯೇ ನಮ್ಮ ಮುಂದೆ ಬರಲಿದೆ. ಗಣೇಶ ಚತುರ್ಥಿ, ದೀಪಾವಳಿ, ನವರಾತ್ರಿ ಇತ್ಯಾದಿ ಶುಭಸಮಾರಂಭಗಳು ಎದುರಾಗಲಿದೆ. ಈ ವೇಳೆ, ಕೊರೊನಾ ಜಾಗೃತಿ ಇತ್ಯಾದಿ ಕಾರಣಗಳಿಂದ ಹಬ್ಬದ ಆಚರಣೆಗಳು ಮನೆ ಮತ್ತು ಕುಟುಂಬಸ್ಥರ ಸಣ್ಣ ಗುಂಪಿನ ನಡುವೆ ಮುಕ್ತಾಯ ಆಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವೇ ಸೋನ್ ಪಪಡಿ ಮಾಡಿ ಖುಷಿ ಪಡಬಹುದು. ಗೆಳೆಯರಿಗೆ ಹಂಚಿ ಹಬ್ಬವನ್ನು ಹೆಚ್ಚು ಸಂಭ್ರಮದಿಂದ ಆಚರಿಸಬಹುದು.

ಇತ್ತೀಚೆಗೆ ಯೂಟ್ಯೂಬ್​ನಲ್ಲಿ ಹರಿದಾಡಿದ ವಿಡಿಯೋಗಳ ಪೈಕಿ ಸೋನ್ ಪಪಡಿ ತಯಾರಿಸುವ ವಿಧಾನವು ಜನರ ಮನಗೆದ್ದಿದೆ. @indiaeatmania ಎಂಬ ಚಾನಲ್​ನಲ್ಲಿ ಸೋನ್ ಪಪಡಿ ಹೇಗೆ ತಯಾರಾಗುತ್ತದೆ ಎಂದು ತೋರಿಸಲಾಗಿದೆ. ಈ ವಿಡಿಯೋ ಮಾಡಿದ ಸ್ಥಳವನ್ನು ಗುಜರಾತ್​ನ ಮೆಗಾ ಕಿಚನ್ ಫ್ಯಾಕ್ಟರಿ ಎಂದು ಹೇಳಲಾಗಿದೆ. ಯೂಟ್ಯೂಬ್​ನಲ್ಲಿ ಟ್ರೆಂಡಿಂಗ್​ನಲ್ಲಿ ಇರುವ ವಿಡಿಯೋ ಸುಮಾರು 62 ಮಿಲಿಯನ್ ಜನರನ್ನು ತನ್ನತ್ತ ಸೆಳೆದಿದೆ.

ವಿಡಿಯೋದಲ್ಲಿ 4 ಕೆಜಿ ಸೋನ್ ಪಪಡಿ ಮಾಡುವ ವಿಧಾನ ತೋರಿಸಲಾಗಿದೆ. ಅದರಂತೆ, ಮೊದಲು ಸಕ್ಕರೆ ಪಾಕ ಮಾಡಿಕೊಳ್ಳಬೇಕು. ಅದನ್ನು ತಣಿಸಬೇಕು. ಆ ಪಾಕವನ್ನು ಬಳಿಕ ರಬ್ಬರ್ ಬ್ಯಾಂಡ್​ನಂತೆ ಹದಗೊಳಿಸಬೇಕು.

ಬಳಿಕ ಕಡಲೆ ಹಿಟ್ಟನ್ನು (ಬೇಸನ್ ಹಿಟ್ಟು) ಡ್ರೈ ಫ್ರೂಟ್ಸ್​ಗಳ ಜೊತೆಗೆ ಸಕ್ಕರೆ ಪಾಕದ ಭಾಗಕ್ಕೆ ಸೇರಿಸಿಕೊಳ್ಳಬೇಕು. ಮತ್ತೆ ತುಪ್ಪವನ್ನೂ ಸೇರಿಸಿ ನಾದಬೇಕು. ಹದಕ್ಕೆ ತರಬೇಕು. ಸೋನ್ ಪಪಡಿಯು ನೂಲಿನಂತೆ ಹಾಗೂ ಸಾಫ್ಟ್ ಆಗುವ ತನಕ ಹೀಗೆ ಮಾಡಬೇಕು.

ಆಮೇಲೆ ಅದನ್ನು ಟ್ರೇ ಒಂದಕ್ಕೆ ಹಾಕಿಕೊಂಡು ಬೇಕಾದ ಆಕಾರದಲ್ಲಿ (ಚೌಕ ಅಥವಾ ತ್ರಿಕೋನ) ತುಂಡು ಮಾಡಿಕೊಳ್ಳಬೇಕು. ಡ್ರೈ ಫ್ರೂಟ್ಸ್​ಗಳನ್ನು ಅಲಂಕಾರಕ್ಕೆ ಮತ್ತು ಹೆಚ್ಚು ರುಚಿಗೆ ಸೇರಿಸಿಕೊಳ್ಳಬಹುದು.

ಮನೆಯಲ್ಲಿ ಬೇಕಾದಲ್ಲಿ ಸಣ್ಣ ಪ್ರಮಾಣದಲ್ಲಿ ಸ್ವೀಟ್ ತಯಾರಿಸಿ ನೋಡಬಹುದು. ಬಳಿಕ, ವಿಧಾನ ಸರಿಯಾಗಿ ತಿಳಿದುಕೊಂಡು ಬೇಕಾದಷ್ಟು ಸಿಹಿತಿಂಡಿ ಮಾಡಬಹುದು. ಮೇಲೆ ನೀಡಿರುವ ವಿಡಿಯೋ ಕೂಡ ನೋಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ.

ಇದನ್ನೂ ಓದಿ: ಕೊಡಗು ಸ್ಪೆಷಲ್ ಚಿಕನ್ ಕೀಮಾ ಬಾಲ್; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ

ಇದನ್ನೂ ಓದಿ: ಕೊಡಗು: ಆಟಿ ಸೊಪ್ಪಿನ ಪಾಯಸದ ರುಚಿ ಸವಿಯುವುದರ ಹಿಂದಿದೆ ಒಂದು ವಿಶೇಷ ನಂಬಿಕೆ!

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ