ಮೊಬೈಲ್ ಮಾಯ-ಮಾಯೆ! ಟೀ ಅಂಗಡಿಯಲ್ಲಿ ಚಹಾ ಕುಡಿಯುವ ನೆಪದಲ್ಲಿ ಮೊಬೈಲ್ ದೋಚಿದ ಖದೀಮ- ವಿಡಿಯೋ ನೋಡಿ

| Updated By: ಸಾಧು ಶ್ರೀನಾಥ್​

Updated on: Aug 28, 2023 | 12:06 PM

Nelamangala: ಅಂತರ್ಜಾಲ ದಾಂಗುಗುಡಿಯಿಟ್ಟು, ಮನೆಮನಗಳಲ್ಲಿ ಭದ್ರವಾಗಿ ನೆಲೆಯೂರಿರುವಾಗ ಅದು ಕಳ್ಳತನಕ್ಕೂ ಪ್ರೋತ್ಸಾಹ ಕೊಡುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್​​ನಲ್ಲಿಯೂ ಇಂತಹ ಒಂದು ಘಟನೆ ನಡೆದಿದೆ. ನೆಲಮಂಗಲದ ಸುಭಾಷ್ ನಗರದಲ್ಲಿ ಕಳ್ಳನೊಬ್ಬ ಚಹಾ ಕುಡಿಯುವ ನೆಪದಲ್ಲಿ ಮೊಬೈಲ್ ದೋಚಿದ್ದಾನೆ.

ನೆಲಮಂಗಲ: ಅದು ಮೊಬೈಲ್ ಮಾಯ-ಮಾಯೆ! (Mobile theft). ಅಂತರ್ಜಾಲ ದಾಂಗುಗುಡಿಯಿಟ್ಟು, ಮನೆಮನಗಳಲ್ಲಿ ಭದ್ರವಾಗಿ ನೆಲೆಯೂರಿರುವಾಗ ಅದು ಕಳ್ಳತನಕ್ಕೂ ಪ್ರೋತ್ಸಾಹ ಕೊಡುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ (Nelamangala) ಟೌನ್​​ನಲ್ಲಿಯೂ ಇಂತಹ ಒಂದು ಘಟನೆ ನಡೆದಿದೆ. ನೆಲಮಂಗಲದ ಸುಭಾಷ್ ನಗರದಲ್ಲಿ ಕಳ್ಳನೊಬ್ಬ ಚಹಾ ಕುಡಿಯುವ ನೆಪದಲ್ಲಿ ಮೊಬೈಲ್ ದೋಚಿದ್ದಾನೆ.

ಟೀ (Tea) ಅಂಗಡಿ ಮಾಲೀಕರಾದ ಗೌರಮ್ಮ ಅವರಿಗೆ ಸೇರಿದ ಮೊಬೈಲ್ ಅನ್ನು ದೋಚಲಾಗಿದೆ. ಗೌರಮ್ಮ ಅವರು ತಮ್ಮ ಟೀ ಅಂಗಡಿಯಲ್ಲೇ ಮೊಬೈಲ್ ಬಿಟ್ಟು, ಪಕ್ಕದಲ್ಲಿ ಹೋಗಿ ನೀರು ತಗೆದು ಕೊಂಡು ಬರುವಷ್ಟರಲ್ಲಿ ಮೊಬೈಲ್ ಎಗರಿಸಿದ್ದಾನೆ ಚಾಲಕಿ ಕಳ್ಳ! ಮೊಬೈಲ್ ಫೊನ್ ಕದಿಯುವ ದೃಶ್ಯ ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿದೆ. ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ