Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ಮತ್ತೆ ಪ್ರಧಾನಿಯಾಗಲಿ ಎಂದು ಬೇಡಿಕೆ: ವರ ನೀಡಿದ ಶನೇಶ್ವರ, ವಿಡಿಯೋ ವೈರಲ್

ಮೋದಿ ಮತ್ತೆ ಪ್ರಧಾನಿಯಾಗಲಿ ಎಂದು ಬೇಡಿಕೆ: ವರ ನೀಡಿದ ಶನೇಶ್ವರ, ವಿಡಿಯೋ ವೈರಲ್

TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Apr 26, 2024 | 10:22 PM

ನರೇಂದ್ರ ಮೋದಿ ಈ ಬಾರಿ ಮತ್ತೊಮ್ಮೆ ಪ್ರಧಾನಿ ಆಗುವುದಾದರೆ ಬಲಗಡೆ ಪ್ರಸಾದ ಕೊಡು ಎಂದು ಭಕ್ತರೊಬ್ಬರು ಬೀರೂರು ಶನೇಶ್ವರನಿಗೆ ಬೇಡಿಕೊಂಡಿದ್ದಾರೆ. ಅದರಂತೆ ಶನೇಶ್ವರ ತುಳಸಿ, ಮಲ್ಲಿಗೆ ಹೂವಿನ ಹಾರ ಪ್ರಸಾದ ನೀಡಿದ್ದಾನೆ. ಇದೀಗ ವಿಡಿಯೋ ವೈರಲ್ ಆಗಿದೆ.

ಚಿಕ್ಕಮಗಳೂರು, (ಏಪ್ರಿಲ್ 26): ಕರ್ನಾಟಕದಲ್ಲಿ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ನಾಯಕರು ಇದೀಗ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಇದರ ಮಧ್ಯೆ ಚಾಮರಾಜನಗರದಲ್ಲಿ ಅಚ್ಚರಿ ಘಟನೆಯೊಂದು ನಡೆದಿದೆ. ನರೇಂದ್ರ ಮೋದಿ ಈ ಬಾರಿ ಮತ್ತೊಮ್ಮೆ ಪ್ರಧಾನಿ ಆಗುವುದಾದರೆ ಬಲಗಡೆ ಪ್ರಸಾದ ಕೊಡು ಎಂದು ಭಕ್ತರೊಬ್ಬರು ಬೀರೂರು ಶನೇಶ್ವರನಿಗೆ ಬೇಡಿಕೊಂಡಿದ್ದಾರೆ. ಅದರಂತೆ ಶನೇಶ್ವರ ತುಳಸಿ, ಮಲ್ಲಿಗೆ ಹೂವಿನ ಹಾರ ಪ್ರಸಾದ ನೀಡಿದ್ದಾನೆ. ಕಡೂರು ತಾಲೂಕಿನ ಬೀರೂರು ಪಟ್ಟಣದ ಶನೇಶ್ವರ ದೇವಾಲಯದಲ್ಲಿ ಘಟನೆ ನಡೆದಿದ್ದು, ಇದೀಗ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವಿಡಿಯೋ ವೈರಲ್ ಆಗಿದೆ.