ಟಾಯ್ಲೆಟ್ ಕಮೋಡ್ ಒಳಗಿಂದ ಹೊರಬಂದ ಉಡದ ಮರಿ!

|

Updated on: Dec 05, 2024 | 7:15 PM

ವೈರಲ್ ಆಗಿರುವ ವಿಡಿಯೋದಲ್ಲಿ ಉಡದ ಮರಿಯನ್ನು ಸುರಕ್ಷಿತವಾಗಿ ಕಮೋಡ್​ನಿಂದ ಹೊರತರಲಾಗಿದೆ. ವ್ಯಕ್ತಿಯೊಬ್ಬ ಉಡದ ಮರಿಯನ್ನು ಹಗ್ಗದಿಂದ ಕಟ್ಟಿ ಎಚ್ಚರಿಕೆಯಿಂದ ಹೊರತೆಗೆದಿದ್ದಾನೆ. ಕಮೋಡ್​ನ ಒಂದು ಭಾಗವನ್ನು ಒಡೆದು, ಒಳಗೆ ಸಿಲುಕಿದ್ದ ಆ ಜೀವಿಯನ್ನು ಹೊರಗೆ ತೆಗೆಯಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ 1.1 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಪ್ರಾಣಿ ರಕ್ಷಕ ಶ್ಯಾಮ್ ಗೋವಿಂದ್‌ಸರ್ ಅವರು ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಟಾಯ್ಲೆಟ್ ಕಮೋಡ್‌ನ ಸೆರಾಮಿಕ್ಸ್‌ನೊಳಗೆ ಉಡ ಅಡಗಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ವೈರಲ್ ವೀಡಿಯೊದಲ್ಲಿ ಸುರಕ್ಷಿತವಾಗಿ ಆ ಉಡದ ಮರಿಯನ್ನು ಹೇಗೆ ಹೊರಗೆ ತೆಗೆಯಲಾಗಿದೆ ಎಂಬುದನ್ನು ತೋರಿಸಲಾಗಿದೆ.  ವ್ಯಕ್ತಿಯೊಬ್ಬ ಉಡದ ಮರಿಯನ್ನು ಹಗ್ಗದಿಂದ ಕಟ್ಟಿ ಎಚ್ಚರಿಕೆಯಿಂದ ಹೊರತೆಗೆದಿದ್ದಾನೆ. ಕಮೋಡ್​ನ ಒಂದು ಭಾಗವನ್ನು ಒಡೆದು, ಒಳಗೆ ಸಿಲುಕಿದ್ದ ಆ ಜೀವಿಯನ್ನು ಹೊರಗೆ ತೆಗೆಯಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ 1.1 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಪ್ರಾಣಿ ರಕ್ಷಕ ಶ್ಯಾಮ್ ಗೋವಿಂದ್‌ಸರ್ ಅವರು ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಉಡದ ಮರಿಯನ್ನು ತೆಗೆದಾಗ ಸಣ್ಣಪುಟ್ಟ ಗಾಯಗಳಾಗಿದ್ದು, ಬಿಗಿಯಾಗಿ ಕಟ್ಟಿದ ದಾರದಿಂದಾಗಿ ಅದರ ಬಾಲದ ಒಂದು ಭಾಗ ಕತ್ತರಿಸಲ್ಪಟ್ಟಿದೆ. ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ