ಉಡುಪಿಯಲ್ಲಿ ಬಿರುಸುಗೊಂಡ ಮುಂಗಾರು ಮಳೆ; ಕಾಪು, ಮಲ್ಪೆ ಕಡಲ ಕಿನಾರೆ ಪ್ರಕ್ಷುಬ್ಧ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 26, 2024 | 4:30 PM

ಕರ್ನಾಟಕದ ಹಲವೆಡೆ ಮಳೆಯ ಆರ್ಭಟ ಜೋರಾಗಿದ್ದು, ಉಡುಪಿಯಲ್ಲಿ ಮುಂಗಾರು ಮಳೆ ಬಿರುಸುಗೊಂಡಿದೆ. ಈ ಹಿನ್ನಲೆ ಕಾಪು, ಮಲ್ಪೆ, ಪಡುಕೆರೆ ಕಡಲ ಕಿನಾರೆ ಪ್ರಕ್ಷುಬ್ಧವಾಗಿದೆ. ಇನ್ನು ಮಲ್ಪೆ ಬೀಚ್​ನಲ್ಲಿಯೂ ರಕ್ಕಸ ಗಾತ್ರದ ಅಲೆಗಳು ಅಬ್ಬರಿಸುತ್ತಿರುವ ಹಿನ್ನಲೆ ಕಡಲಿನ ಹತ್ತಿರ ತೆರಳದಂತೆ ಬೀಚ್‌ ಸಿಬ್ಬಂದಿಗಳು ತಡೆಯುತ್ತಿದ್ದು, ಸಮುದ್ರದ ಕಡೆಗೆ ಪ್ರವೇಶಿಸದಂತೆ ಬೀಚ್‌ ಸಮಿತಿ ತಡೆಬೇಲಿ ನಿರ್ಮಿಸಿದ್ದಾರೆ.

ಉಡುಪಿ, ಜೂ.26: ಉಡುಪಿಯಲ್ಲಿ ಮುಂಗಾರು ಮಳೆ ಬಿರುಸುಗೊಂಡಿದ್ದು, ಕಾಪು, ಮಲ್ಪೆ, ಪಡುಕೆರೆ ಕಡಲ ಕಿನಾರೆ ಪ್ರಕ್ಷುಬ್ಧವಾಗಿದೆ. ಇನ್ನು ಮಲ್ಪೆ ಬೀಚ್​ನಲ್ಲಿಯೂ ರಕ್ಕಸ ಗಾತ್ರದ ಅಲೆಗಳು ಅಬ್ಬರಿಸುತ್ತಿರುವ ಹಿನ್ನಲೆ ಕಡಲಿನ ಹತ್ತಿರ ತೆರಳದಂತೆ ಬೀಚ್‌ ಸಿಬ್ಬಂದಿಗಳು ತಡೆಯುತ್ತಿದ್ದು, ಸಮುದ್ರದ ಕಡೆಗೆ ಪ್ರವೇಶಿಸದಂತೆ ಬೀಚ್‌ ಸಮಿತಿ ತಡೆಬೇಲಿ ನಿರ್ಮಿಸಿದ್ದಾರೆ. ಬೀಚ್‌ ನೋಡಲು ಬಂದವರಿಗೆ ನೀರಿನತ್ತ ಹೋಗದಂತೆ ಸೂಚಿಸಿದ್ದು, ಇದರಿಂದ ಮಲ್ಪೆ ಬೀಚ್‌ಗೆ ಆಗಮಿಸಿದ ಪ್ರವಾಸಿಗರು ನಿರಾಸೆಯಿಂದ ವಾಪಸ್ಸು ಆಗುತ್ತಿದ್ದಾರೆ. ಇತ್ತ ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿಯೂ ಮಳೆ ಆರ್ಭಟ ಜೋರಾಗಿದ್ದು, ಭಾರೀ ಗಾಳಿ ಮಳೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದೆ. ಇದರಿಂದ ಕುದುರೆ ಮುಖ ಕಾರ್ಕಳ ರಸ್ತೆ ಸಂಪರ್ಕ ಬಂದ್ ಆಗಿ ಟ್ರಾಫಿಕ್ ಜಾಮ್ ಉಂಟಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ