Mysuru Dasara: ಜಂಬೂಸವಾರಿ ವೇಳೆ ಗಮನ ಸೆಳೆಯಲಿವೆ 60ಕ್ಕೂ ಹೆಚ್ಚು ಟ್ಯಾಬ್ಲೋಗಳು
ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ನಾಳೆ ನಡಯಲಿದ್ದು, ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಮೆರವಣಿಗೆ ವೇಳೆ 60ಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು ಸಾಗಲಿದ್ದು, ಅವುಗಳ ತಯಾರಿ ಕಾರ್ಯವೂ ಅಂತಿಮ ಹಂತದಲ್ಲಿದೆ. ಬೀದರ್ ಕೋಟೆ, ಹಂಪಿ ದೇಗುಲ, ಗಾಧೀಜಿ ಮತ್ತು ಬಸವಣ್ಣನವರ ಪ್ರತಿಮೆಗಳು ಸೇರಿ ವಿವಿಧ ಟ್ಯಾಬ್ಲೋಗಳು ಮೆರವಣಿಗೆಯಲ್ಲಿ ಭಾಗಿಯಾಗಲಿವೆ.
ಮೈಸೂರು, ಅಕ್ಟೋಬರ್ 01: ನಾಳೆ ನಡೆಯಲಿರುವ ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಜಂಬೂಸವಾರಿಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಜಂಬೂಸವಾರಿ ಜೊತೆಗೆ ಮೆರವಣಿಗೆಯಲ್ಲಿ ಸುಮಾರು 60 ಸ್ತಬ್ಧ ಚಿತ್ರಗಳು ಸಾಗಲಿದ್ದು, ಕಳೆದ 14 ದಿನಗಳಿಂದ ಇವುಗಳ ತಯಾರಿಯಲ್ಲಿ ಕಲಾವಿದರು ನಿರತರಾಗಿದ್ದಾರೆ. ಬೀದರ್ ಕೋಟೆ, ಹಂಪಿ ವಿರೂಪಾಕ್ಷ ದೇಗುಲ, ಗಾಧೀಜಿ ಮತ್ತು ಬಸವಣ್ಣನವರ ಪ್ರತಿಮೆಗಳು ಸೇರಿ ವಿವಿಧ ಟ್ಯಾಬ್ಲೋಗಳು ಮೆರವಣಿಗೆಗಾಗಿ ಸಿದ್ಧಗೊಂಡಿವೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos

