ಮಗನಿಗೆ ಚಳಿಯಾಗುತ್ತೆ! ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ತಾಯಿ
ಜಮ್ಮುವಿನ ರಣಬೀರ್ ಸಿಂಗ್ ಪುರದ ಜಸ್ವಂತ್ ಕೌರ್ ತನ್ನ ಹುತಾತ್ಮ ಮಗ ಬಿಎಸ್‌ಎಫ್ ಕಾನ್‌ಸ್ಟೆಬಲ್ ಗುರ್ನಮ್ ಸಿಂಗ್ ಪ್ರತಿಮೆಯನ್ನು ತನ್ನ ಜೀವಂತ ಮಗುವಿನಂತೆ ನೋಡಿಕೊಳ್ಳುತ್ತಾರೆ. ತೀವ್ರ ಚಳಿಗಾಲದ ನಡುವೆ ಆ ತಾಯಿ ತನ್ನ ಮಗನ ಪ್ರತಿಮೆಯನ್ನು ಕಂಬಳಿಯಿಂದ ಸುತ್ತಿದರು. ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.
ಜಮ್ಮು, ಜನವರಿ 9: ಜಮ್ಮುವಿನಲ್ಲಿ ಸೇನಾ ಕಾರ್ಯಾಚರಣೆಯ ವೇಳೆ ಹುತಾತ್ಮನಾಗಿದ್ದ ಸೈನಿಕ ಗುರ್ನಮ್ ಸಿಂಗ್ ಎಂಬುವವರ ಪ್ರತಿಮೆಯನ್ನು ಊರಿನಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಅಲ್ಲಿ ಈಗ ವಿಪರೀತ ಚಳಿ ಇರುವುದರಿಂದ ತನ್ನ ಮಗನ ಪುತ್ಥಳಿಗೂ ಚಳಿಯಾಗುತ್ತಿರಬಹುದು ಎಂದು ಆ ಸೈನಿಕನ ತಾಯಿ ಆ ಪ್ರತಿಮೆಗೆ ದಪ್ಪನೆಯ ಕಂಬಳಿ ಹೊದೆಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ